ಮಂಡ್ಯ: ಕೆರಗೋಡಿನಲ್ಲಿ ಉದ್ದೇಶಪೂರ್ವಕವಾಗಿ ಗಲಭೆ ಎಬ್ಬಿಸಲು ಸಂಚು ನಡೆಸಲಾಗಿತ್ತಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಚಿಕ್ಕಮಗಳೂರಿನಿಂದ ಬಂದ ನೂತನ್ ಎಂಬ ವ್ಯಕ್ತಿಯೇ ಧ್ವಜಸ್ಥಂಭ ಘಟನೆಯ ಹಿಂದಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ನೂತನ್ ಎಂಬ ವ್ಯಕ್ತಿ, ಕೆರಗೋಡಿಗೆ ಯಾಕೆ ಬಂದ? ಆತನ ಹಿನ್ನೆಲೆ ಏನು ಎಂಬುದರ ಕುರಿತು ಪೊಲೀಸ್ ಇಲಾಖೆ ಪರಿಶೀಲನೆ ನಡೆಸುತ್ತಿದ್ದು, ಈತನೇ ಗಲಭೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದೆ. ಗಲಭೆ ಎಬ್ಬಿಸುವ ದೃಷ್ಟಿಯಿಂದ ಮಾಜಿ ಶಾಸಕರೊಬ್ಬರು ಈತನನ್ನು ಮಂಡ್ಯಗೆ ಕಳಿಸಿದ್ದರು ಎಂದು ತಿಳಿದು ಬಂದಿದೆ.
ಈ ನಡುವೆ ಮಾಸ್ಟರ್ ಮೈಂಡ್ ನೂತನ್ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ಕೂಡ ಇಂದು ಮಂಡ್ಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ದಾರೆ.
ಚಿಕ್ಕಮಗಳೂರಿನಿಂದ ನೂತನ್ ಎಂಬ ವ್ಯಕ್ತಿ ಇಲ್ಲಿಗೆ ಬಂದಿದ್ದಾನೆ. ಆ ವ್ಯಕ್ತಿ ಮಂಡ್ಯಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರಿನಲ್ಲಿ ಹಲವು ಗಲಭೆ ಪ್ರಕರಣದ ಆರೋಪಿ ಆತ. ಆತನ ಚಲನವಲನದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.