ಕೆರಗೋಡುನಲ್ಲಿ ಹನುಮ ಧ್ವಜ ವಿವಾದವನ್ನು ನಿರ್ವಹಿಸುವಲ್ಲಿ ರಾಜ್ಯಸರ್ಕಾರ ಪ್ರಮಾದವೆಸಗಿದೆ. ಈ ವಿವಾದಕ್ಕೆ ರಾಜ್ಯ ಸರ್ಕಾರ ನೇರ ಕಾರಣ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಮಂಡ್ಯದಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತಾಡಿದ ಅವರು, ಸರ್ಕಾರ ಕಟ್ಟುನಿಟ್ಟಾಗಿ ಕಾನೂನನ್ನು ಜಾರಿಗೊಳಿಸುತ್ತಿರುವ ಬಗ್ಗೆ ಹೇಳಿಕೊಳ್ಳುತ್ತ್ತಿರುವುದಾದರೆ, ಹನುಮ ಧ್ವಜ ಹಾರಿಸಿದ್ದು ಒಂದು ಸಾರ್ವಜನಿಕ ಸ್ಥಳದಲ್ಲೇ ಹೊರತು ಬೇರೆ ಧರ್ಮದ ಪ್ರಾರ್ಥನಾ ಮಂದಿರದ ಮೇಲಲ್ಲ. ಹಾಗಾಗಿ, ಗ್ರಾಮದ ಜನರೊಂದಿಗೆ ಮಾತಾಡಿ ವಿಷಯವನ್ನು ಸುಲಭವಾಗಿ, ಶಾಂತಿಯುತವಾಗಿ ಬಗೆಹರಿಸಬಹುದಿತ್ತು. ಆದರೆ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಮುಂದುವರೆದು, ಕೆರಗೋಡು ದೊಡ್ಡ ಸಮುದ್ರ ಅಲ್ಲ, ಅದೊಂದು ಹಳ್ಳಿ. ಅಲ್ಲಿಯವರ ಜೊತೆ ಮಾತನಾಡಿ ಪರಿಹಾರ ನೀಡಬಹುದಿತ್ತು. ಇಷ್ಟೆಲ್ಲಾ ಆಗಲು ರಾಜ್ಯ ಸರ್ಕಾರ ನೇರ ಕಾರಣ. ಪಿಡಿಒ ಅಮಾನತು ಮಾಡಿ ಬಲಿಪಶು ಮಾಡುವ ಕೆಲಸ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.
ಹನುಮ ಧ್ವಜ ಹಾಕಲು ಕಂಬ ಮಾಡಿದ್ದಾರೆ ಅದಕ್ಕೆ ದೇಣಿಗೆ ಸಂಗ್ರಹ ಮಾಡಿ ಧ್ವಜ ಸ್ತಂಭ ನಿರ್ಮಿಸಿದ್ದಾರೆ. ಕೆರಗೋಡು ಧ್ವಜರೋಹಣ ಮಾಡಿದವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನಂತರ ಈ ಕುರಿತು ನೀಡಿದ್ದೀರ ಎಂದು ಕೇಳಿದ ಪ್ರಶ್ನೆಗೆ, ನಾನು ವಿವಾದಿತ ಸ್ಥಳಕ್ಕೆ ಹೋಗಲ್ಲ. ಮತ್ತೆ ಗೊಂದಲ ಆಗೋದು ಬೇಡ ಎಂದು ಉತ್ತರ ನೀಡಿದ್ದಾರೆ.