ಮೋಹನ್‌ ದಾಸ್‌ ಪೈಗೆ ಶಕುನಿ ಎಂದಿದ್ದು ಯಾಕೆ? ಕಾರಣ ಕೊಟ್ಟ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು: ನ.4: ಉದ್ಯಮಿ ಮೋಹನ್ ದಾಸ್ ಪೈ ಅವರಿಗೆ ಕರ್ನಾಟಕದ ಪಾಲಿನ ಶಕುನಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ, ಪೈ ಅವರಿಗೆ ಶಕುನಿ ಎಂಬ ಪದ ಬಳಸಿದ್ದಕ್ಕೆ ಕಾರಣಗಳನ್ನು ಅವರು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು ಶಕುನಿ ಎಂಬ ಪದ ಬಳಸಿದ್ದ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಕನ್ನಡಿಗರ ಹಿತಾಸಾಕ್ತಿಯ ವಿಷಯದಲ್ಲಿ ಮೋಹನ್‌ ದಾಸ್‌ ಪೈ ಮಾಡಿರುವುದು ಈ ಶಕುನಿ ಕೆಲಸಗಳನ್ನೇ ಎಂದು ಪುನರುಚ್ಚರಿಸಿದ್ದಾರೆ.

ನನಗೆ ಕರ್ನಾಟಕದ ಉದ್ಯಮ ಮತ್ತು ಉದ್ಯಮಿಗಳ ವಿಷಯದಲ್ಲಿ ಯಾವುದೇ ಅಸಹನೆ, ದ್ವೇಷ, ಪೂರ್ವಾಗ್ರಹ ಇಲ್ಲ. ಆದರೆ ಪದೇ ಪದೇ ಕನ್ನಡಿಗರ ಆಶೋತ್ತರಗಳ ವಿರುದ್ಧ ಮಾತಾಡುವ ಕೆಲವು ಬೆರಳೆಣಿಕೆಯ ಉದ್ಯಮಿಗಳ ಉದ್ದೇಶ ಏನು ಎಂಬುದನ್ನು ನಾವು ಸರಿಯಾಗಿ ಗ್ರಹಿಸಬೇಕಾಗುತ್ತದೆ. ಅಂಥವರಿಗೆ ಸರಿಯಾದ ಸಮಯದಲ್ಲಿ ಸರಿಯಾದ ಉತ್ತರವನ್ನು ನೀಡಲೇಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದೇ ಮೋಹನ್ ದಾಸ್ ಪೈ ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿ ಆಗಬೇಕು ಎಂದು ನಾವು ಹೋರಾಟ ನಡೆಸುತ್ತಿದ್ದಾಗ, ಸ್ವತಃ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿದ್ದೇನೆ ಎಂದು ಹೇಳಿದಾಗ ಇದೇ ಪೈ ಟೀಕಿಸಿದರು. ಪಠ್ಯ ಕ್ರಮದಲ್ಲಿ ಹಿಂದಿ ಇರಲೇಬೇಕು ಎಂದು ವಾದಿಸಿದ್ದರು. ಇಂಥ ವಿರೋಧಗಳಿಂದಲೇ ಸ್ವತಃ ಮುಖ್ಯಮಂತ್ರಿ ಗಳೇ ಎರಡು ನುಡಿ ಕಲಿಕೆಯ ಪರವಾಗಿದ್ದರೂ ಈ ನೀತಿ ಜಾರಿಗೆ ಬರಲಿಲ್ಲ.

ಸಿದ್ದರಾಮಯ್ಯ ಸರ್ಕಾರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲು ಹೊರಟಾಗ ಮತ್ತೆ ಅದಕ್ಕೆ ಅಡ್ಡಿಯಾಗಿದ್ದು ಇದೇ ಮೋಹನ್ ದಾಸ್ ಪೈ, ಕಿರಣ್ ಮಜುಮ್ ದಾರ್ ಶಾ ಮೊದಲಾದ ಬೆರಳೆಣಿಕೆಯ ಉದ್ಯಮಿಗಳು. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದ್ದ ಕಾಯ್ದೆ ಜಾರಿಯಾಗಲು ಈ ಬ್ಲಾಕ್ ಮೇಲ್ ಗ್ಯಾಂಗ್ ಬಿಡಲಿಲ್ಲ. ಸರ್ಕಾರವನ್ನು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳು ನಡೆಸುತ್ತಿದ್ದಾರಾ ಅಥವಾ ಸ್ವಯಂ ಘೋಷಿತ ಉದ್ಯಮ ನಾಯಕರೆಂಬ ಕಿಡಿಗೇಡಿಗಳು ನಡೆಸುತ್ತಿದ್ದಾರಾ ಎಂಬ ಅನುಮಾನ ನನಗೆ ಮೂಡಿತ್ತು ಎಂದು ಅವರು ಹೇಳಿದ್ದಾರೆ.

ಈಗ ನಾವು ಐಟಿ ಸಂಸ್ಥೆಗಳಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸುತ್ತಿದ್ದಂತೆ ಇದೇ ಪೈ ಮತ್ತೆ ರಾಗ ಎಳೆಯುತ್ತಿದ್ದಾರೆ. ಸ್ವಯಂಘೋಷಿತ ಕಾವಲುಪಡೆಯವರು ಐಟಿ ಸಂಸ್ಥೆಗಳಿಗೆ ಹೋಗುತ್ತಿದ್ದಾರೆ, ಮಾಹಿತಿ ಕೇಳುತ್ತಿದ್ದಾರೆ, ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎಂದೆಲ್ಲ ಗೋಳಾಡುತ್ತಿದ್ದಾರೆ. ನಾವು ಸ್ವಯಂಘೋಷಿತ ಕಾವಲುಪಡೆಯವರಾದರೆ, ಸರ್ಕಾರದ ತಲೆಯ ಮೇಲೆ ಕುಳಿತು ಸದಾ ಬ್ಲಾಕ್‌ ಮೇಲ್‌ ಮಾಡಿಕೊಂಡು ಬಂದಿರುವ ಇವರನ್ನು ಏನೆಂದು ಕರೆಯುವುದು? ಎಂದು ಅವರು ಪ್ರಶ್ನಿಸಿದ್ದಾರೆ.

ವಾಸ್ತವವಾಗಿ ನಮ್ಮ ಅಭಿಯಾನಕ್ಕೆ ಐಟಿ ಉದ್ಯಮ ವಲಯದಿಂದ ನಮ್ಮ ನಿರೀಕ್ಷೆಗೆ ಮೀರಿದ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಮ್ಮ ಮುಖಂಡರನ್ನು ಬರಮಾಡಿಕೊಂಡು ಗೌರವಯುತವಾಗಿ ಮನವಿ ಪತ್ರಗಳನ್ನು ಸ್ವೀಕರಿಸಲಾಗುತ್ತಿದೆ. ಕೆಲವು ಉದ್ಯಮಿಗಳಂತೂ ಈ ಅಭಿಯಾನ ಅಗತ್ಯವಾಗಿತ್ತು ಎಂದು ನಮ್ಮ ಬಳಿ ಹೇಳುತ್ತಿದ್ದಾರೆ. ಅಭಿಯಾನ ಯಶಸ್ವಿಯಾಗುತ್ತಿರುವುದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

ಮೋಹನದಾಸ್ ಪೈ ಅವರು ಹಿಂದೆ ಗೋವಾ ರಾಜಕೀಯಕ್ಕೆ ಸಂಬಂಧಿಸಿದಂತೆ ಮಾಡಿದ್ದ ಟ್ವೀಟ್‌ ಒಂದನ್ನು ನನ್ನ ಗೆಳೆಯರು ಗಮನಕ್ಕೆ ತಂದರು. ಅವರ ಹೇಳಿಕೆ ಹೀಗಿದೆ: ʻʻನಮ್ಮ ಗೋವಾ ಮತ್ತು ನಮ್ಮ ಗೋವನ್ನರ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ! ನಾವು ಕೊಂಕಣಿಗರಿಗೆ ಈ ಅರಾಜಕತಾವಾದಿಗಳಿಂದ ಯಾವುದೇ ಉಚಿತ ಕೊಡುಗೆಗಳ ಅಗತ್ಯವಿಲ್ಲ. ಅವರು ನಮ್ಮ ತೆರಿಗೆ ಹಣವನ್ನೇ ಕದ್ದು, ನಮಗೆ ಉಚಿತ ಸೌಲಭ್ಯಗಳನ್ನು ನೀಡುವುದಾಗಿ ಹೇಳುತ್ತಾರೆ! ಇದು ದೊಡ್ಡ ಅವಮಾನ ಮತ್ತು ಅವಹೇಳನ! ಗೋವಾ ದೆಹಲಿಯೂ ಅಲ್ಲ, ಬಂಗಾಳವೂ ಅಲ್ಲ. ಇದು ನಮ್ಮ ಗೋವಾ!ʼʼ

ಮೋಹನ್‌ ದಾಸ್‌ ಪೈ ಅವರಿಗೆ ತಮ್ಮ ಗೋವಾ ರಾಜ್ಯದ ಮೇಲೆ ಎಷ್ಟು ಅಪಾರವಾದ ಪ್ರೇಮವಿದೆ ನೋಡಿ. ತಮ್ಮ ತಾಯಿನುಡಿಯನ್ನಾಡುವ ಕೊಂಕಣಿಗರ ಬಗ್ಗೆ ಎಷ್ಟೊಂದು ಕಾಳಜಿ ಇದೆ ನೋಡಿ. ಇದನ್ನು ನಾನು ತಪ್ಪೆಂದು ಹೇಳುವುದಿಲ್ಲ. ಇದೇ ಪ್ರೇಮವನ್ನು ಅವರು ಕನ್ನಡಿಗರ ಕುರಿತು, ಕನ್ನಡಿಗರ ಹಿತಾಸಕ್ತಿಯ ಕುರಿತು ಎಂದಾದರೂ ತೋರಿಸಿದ್ದು ಇದೆಯೇ? ಈ ನಾಡು ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಆದರೆ ಈ ನಾಡಿನ ಜನರ ವಿಷಯ ಬಂದಾಗ ಅವರು ಯಾಕೆ ವಿಷ ಕಾರುತ್ತಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಮೋಹನ್‌ ದಾಸ್‌ ಪೈಯವರು ಗೋವಾದಲ್ಲೇ ತಮ್ಮ ಉದ್ಯಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಜನರನ್ನು ಪ್ರೀತಿಸಿ, ಅವರ ಉನ್ನತಿಗೆ ದುಡಿದರೆ ಯಾರೂ ಬೇಡವೆನ್ನುವುದಿಲ್ಲ. ಕರ್ನಾಟಕದಲ್ಲಿ ಇದ್ದುಕೊಂಡು ಇಲ್ಲಿ ಯಾವುದೇ ಸರ್ಕಾರ ಬಂದರೂ ಬ್ಲಾಕ್‌ ಮೇಲ್‌ ಮಾಡುತ್ತ, ನಾಡಿನ ಹಿತಾಸಕ್ತಿಯ ವಿಷಯಗಳಿಗೆ ಅಡ್ಡಗಾಲು ಹಾಕುತ್ತ ಕುಳಿತರೆ ನಾವು ನೋಡುತ್ತ ಕುಳಿತುಕೊಳ್ಳಬೇಕೆ? ಇಂಥವರನ್ನು ಶಕುನಿ ಎನ್ನದೆ ಬೇರೆ ಇನ್ನೇನು ಹೇಳಲಿ, ನೀವೇ ಹೇಳಿ ಪ್ರಶ್ನಿಸಿದ್ದಾರೆ.

ಮೋಹನ್‌ ದಾಸ್‌ ಪೈ ಅವರಿಗೆ ಅವರ ಗೋವಾ ಮತ್ತು ಗೋವನ್ನರ ಮೇಲೆ ಹೇಗೆ ಅಪಾರ ಹೆಮ್ಮೆಇದೆಯೋ ಹಾಗೆಯೇ ನಮಗೆ ನಮ್ಮ ಕರ್ನಾಟಕ ಮತ್ತು ಕನ್ನಡಿಗರ ಕುರಿತು ಅಪಾರ ಹೆಮ್ಮೆ ಇದೆ. ನಮ್ಮ ಹೆಮ್ಮೆಯನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ.

ಈಗಲೂ ಕಾಲ ಮಿಂಚಿಲ್ಲ. ಮೋಹನ್‌ ದಾಸ್‌ ಪೈ ಅವರು ಇನ್ನಾದರೂ ಕನ್ನಡಿಗರ ನೆಲೆಯಲ್ಲಿ ನಿಂತು ಕರ್ನಾಟಕದ ಸಮಸ್ಯೆಗಳ ಬಗ್ಗೆ ಚಿಂತಿಸುವುದನ್ನು ಆರಂಭಿಸಲಿ. ಕನ್ನಡಿಗರ ಬೇಡಿಕೆಗಳಿಗೆ ಅಡ್ಡ ನಿಲ್ಲುವ ದ್ರೋಹವನ್ನು ಮಾಡದೇ ಇರಲಿ. ತಾವು ನಿಂತ ನೆಲಕ್ಕೆ ನಿಯತ್ತಾಗಿ ಇರಲಾದವನು ಒಳ್ಳೆಯ ಮನುಷ್ಯನಾಗಿ ಇರಲು ಸಾಧ್ಯವೇ ಇಲ್ಲ. ಅವರಿಗೆ ಒಳ್ಳೆಯ ಬುದ್ಧಿಯನ್ನು ತಾಯಿ ರಾಜರಾಜೇಶ್ವರಿ ಕರುಣಿಸಲು ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

More articles

Latest article

Most read