Thursday, July 25, 2024

ಕೊಡಗಿನಲ್ಲಿ ಭಯಾನಕ ಕ್ರೌರ್ಯ: ಅಪ್ರಾಪ್ತ ಬಾಲಕಿಯ ದಾರುಣ ಕೊಲೆ

Most read

ಸೋಮವಾರಪೇಟೆ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಮುಟ್ಲು ಗ್ರಾಮ ಭಯಾನಕ ಕ್ರೌರ್ಯವೊಂದಕ್ಕೆ ಸಾಕ್ಷಿಯಾಗಿದ್ದು, ವಿದ್ಯಾರ್ಥಿನಿಯೋರ್ವಳ ರುಂಡ ಮುಂಡ ಬೇರ್ಪಡಿಸಿ ಕೊಂದು ಹಾಕಲಾಗಿದೆ.

ಹಮ್ಮಿಯಾಲ ಗ್ರಾಮದ ಮೊಣ್ಣಂಡ ಪ್ರಕಾಶ್ ಎಂಬಾತ ವಿದ್ಯಾರ್ಥಿನಿಯ ಕತ್ತು ಕತ್ತರಿಸಿ ಕೊಲೆಗೈದ ಆರೋಪಿಯಾಗಿದ್ದಾ‌ನೆ.

ವಿದ್ಯಾರ್ಥಿನಿಯ ನಿಶ್ಚಿತಾರ್ಥ ಇತ್ತೀಚಿಗೆ ನಿಶ್ಚಯವಾಗಿದ್ದು. ಆಕೆ ಅಪ್ರಾಪ್ತ ಬಾಲಕಿ ಎಂಬ ಕಾರಣಕ್ಕೆ ಪೊಲೀಸರು ಮಧ್ಯಪ್ರವೇಶಿಸಿ ನಿಶ್ಚಿತಾರ್ಥ‌ ರದ್ದುಗೊಳಿಸಿದ್ದರು.

ಮದುವೆ ರದ್ದಾಗಿದ್ದರಿಂದ ಸಿಟ್ಟಿಗೆದ್ದ ಕ್ರೂರಿ ಪ್ರಕಾಶ್ ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.‌ ಸೂರ್ಲಬ್ಬಿಯ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿ SSLC ಓದುತ್ತಿದ್ದಳು. ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

More articles

Latest article