ಮಂತ್ರಾಲಯ ಬಳಿ ಭೀಕರ ಅಪಘಾತ, 8 ಜನ ದುರ್ಮರಣ

ಕರ್ನೂಲ್‌ :  ಆಂಧ್ರದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ಬಳಿಯ ಚಿಲಕನಡೋಣ ಹತ್ತಿರ ಸಂಭವಿಸಿದ ಅಪಘಾತದಲ್ಲಿ 8 ಮಂದಿ ಮೃತಪಟ್ಟಿದ್ದಾರೆ.

ಚಿಕ್ಕಮಗಳೂರಿನಿಂದ ಮಂತ್ರಾಲಯಕ್ಕೆ ಬರುತ್ತಿದ್ದ ಬೊಲೆರೋ ವಾಹನಕ್ಕೆ, ಬೀದರ್‌ನಿಂದ ತುಮಕೂರಿಗೆ ಹೋಗುತ್ತಿದ್ದ ಫ್ಲೈಯಾಶ್ ಟ್ಯಾಂಕರ್ ಡಿಕ್ಕಿಯಾಗಿದೆ.

ಹಾಸನ, ಚಿಕ್ಕಮಗಳೂರಿನವರು : ಬೆಳಗಿನ ಜಾವ 4 ಗಂಟೆ ಸುಮಾರಿಗೆಭೀಕರ ರಸ್ತೆ ಅಪಘಾತ ನಡೆದಿದೆ.  ಹಾಸನ, ಚಿಕ್ಕಮಗಳೂರು ಮೂಲದ 18 ಜನ   ರಾಯರ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. 

ಚಿಕ್ಕಮಗಳೂರಿನ  ಅಮೃತ, ತೇಜಶ್ವಿನಿ, ಧನ್ಯ, ದೀಪಿಕ, ದಿಕ್ಷಿತ, ಪ್ರತಾಪ್, ಕುಮಾರ್, ಯಶೋದಮ್ಮ ಮೃತರು.  ಮೃತರಲ್ಲಿ ಐವರು ಮಹಿಳೆಯರು , ಇಬ್ಬರು ಪುರುಷರು, ಮೂರು ವರ್ಷದ ಮಗು ಸೇರಿದೆ.  

ಇನ್ನುಳಿದ  9 ಮಂದಿಗೆ  ಗಾಯಾಳುಗಳಾಗಿದ್ದು,  ಕರ್ನೂಲು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

More articles

Latest article

Most read