ಮಹಾರಾಷ್ಟ್ರ : ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರ ಮೇಲೆ ಗುರುವಾರ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಮಾತಾ ಸಾಹಿಬ್ ಗುರುದ್ವಾರದ ಬಳಿ ದಾಳಿ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದುಷ್ಕರ್ಮಿಯೊಬ್ಬ ಹರಿತವಾದ ಆಯುಧದಿಂದ ಬಾದಲ್ ಅವರ ಮೇಲೆ ದಾಳಿ ನಡೆಸಿದ್ದಾನೆ. ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲಗಳ ಪ್ರಕಾರ, ನಾಂದೇಡ್‌ನ ಗುರುದ್ವಾರಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಬಳಿಕ ನಗರದ ಹೊರವಲಯದಲ್ಲಿ ಬಾದಲ್ ಅವರ ಮೇಲೆ ದಾಳಿ ನಡೆದಿದೆ. ನಿಹಾಂಗ್ ಸಿಖ್ಖ್‌ವೊಬ್ಬ ಕಿರ್ಪಾಣ್‌ನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ದಾಳಿಯಲ್ಲಿ ಬಾದಲ್ ಅವರ ಭದ್ರತೆಗೆ ನಿಯೋಜಿಸಲಾಗಿದ್ದ ಓರ್ವ ಭದ್ರತಾ ಸಿಬಂದಿಗೂ ಗಾಯವಾಗಿದೆ. ಘಟನೆಯ ವೇಳೆ ಬಾದಲ್ ಅವರ ಪತ್ನಿ ಹಾಗೂ ಅಕಾಲಿ ದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಕೂಡ ಅವರೊಂದಿಗೆ ಇದ್ದರು. ದಾಳಿಯ ಬಳಿಕದ ವಿಡಿಯೋದಲ್ಲಿ ಬಾದಲ್ ಅವರ ಬಲಗೈಗೆ ಕೇಸರಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡು ನಡೆಯುತ್ತಿರುವುದು ಕಂಡುಬಂದಿದೆ.
ಅಕಾಲಿ ದಳದ ಮೂಲಗಳ ಪ್ರಕಾರ, ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರ ಸ್ಥಿತಿ ಅಪಾಯಕಾರಿಯಾಗಿಲ್ಲ. ಗಾಯಕ್ಕೆ ಹೊಲಿಗೆ ಹಾಕಲಾಗಿದ್ದು, ನಾಂದೇಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಬಾದಲ್ ಅವರು ಗುರುವಾರ ಕುಟುಂಬ ಸಮೇತ ನಾಂದೇಡ್‌ನ ತಮ್ ಶ್ರೀ ಹಜೂರ್ ಸಾಹಿಬ್ ಗೆ ಭೇಟಿ ನೀಡಿದ್ದ ವೇಳೆ ದಾಳಿ ನಡೆದಿದೆ.
ಪಂಜಾಬ್ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಗೆ ಇರಿತ