ಚಿಕ್ಕಬಳ್ಳಾಪುರ, ಸೆ.22 : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕಬಳ್ಳಾಪುರ ತಾಲ್ಲೂಕು ಅಧ್ಯಕ್ಷ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮರಳಕುಂಟೆ ರಾಮಾಂಜಿನಪ್ಪ (75) ವರ್ಷ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಾಲೂಕಿನ ಮರಳುಕುಂಟೆ ಗ್ರಾಮದ ನಿವಾಸಿಯಾದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷ ರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಾಂಜಿನಪ್ಪ ಮಂಗಳವಾರ ತಡರಾತ್ರಿ ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಮಹಡಿಯ ಮೇಲೆ ಕರ್ನಾಟಕ ರಾಜ್ಯದ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಚೇರಿ ತೆರೆದಿದ್ದು ರಾಮಾಂಜಿನಪ್ಪ ಇದೇ ಕಚೇರಿಯಲ್ಲಿ ಕಿಟಕಿ ಬಾಗಿಲು ಹುಕ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತೀವ್ರ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಕಳೆದ ಹತ್ತು ತಿಂಗಳ ಹಿಂದೆಯೇ ತಮ್ಮ35 ಗುಂಟೆ ಜಮೀನನ್ನು ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ ನಂತರ ಸಕಾಲದಲ್ಲಿ ಹಣ ನೀಡದ ವಿವರವನ್ನು ತಾವು ಬರೆದ ಡೆತ್ ನೋಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
ಈಗಾಗಲೇ ತಮ್ಮ ಜಮೀನನ್ನು ರವೀಂದ್ರರೆಡ್ಡಿ ಎಂಬುವರಿಗೆ ಮಾರಾಟ ಮಾಡಿದ ರಿಜಿಸ್ಟಾರ್ ಮಾಡಿಕೊಟ್ಟು 57 ಲಕ್ಷದ 50 ಸಾವಿರೂ.ಗಳ ಹಣ ಪಡೆದಿದ್ದರು. ಆದರೆ ಖರೀದಿದಾರ ರೆಡ್ಡಿ ಅವರು ಇನ್ನೂ 19ಲಕ್ಷ 50 ಸಾವಿರ ರೂ ಗಳನ್ನು ನೀಡದೆ ವಿಳಂಬ ಮಾಡಿ ಸತಾಯಿಸಿದ್ದ ಕಾರಣ ಹಾಗೂ ಸಾಲಗಾರರಿಗೆ ಉತ್ತರ ನೀಡಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ವಿವರ ಡೆತ್ ನೋಟ್ ನಲ್ಲಿ ದಾಖಲಾಗಿದೆ. ಪತ್ನಿ ರತ್ನಮ್ಮ ಸೇರಿದಂತೆ ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿರುವ ರಾಮಾಂಜಿನಪ್ಪ ಅವರ ಸಾವಿನ ಸುದ್ದಿ ತಿಳಿಯಿತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಿಮಿಸಿದ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಎಪಿಎಂಸಿ ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳು ದೌಡಾಯಿಸಿದ್ದಾರೆ.
ರಾಮಾಂಜಿನಪ್ಪ ಅವರ ಸಾವಿನ ಕುರಿತು ಅಘಾತ ವ್ಯಕ್ತಪಡಿಸಿರುವ ಭೈರೇಗೌಡರು ಕಳೆದ 12 ವರ್ಷಗಳಿಂದ ಕ್ರಿಯಾಶೀಲರಾಗಿ ಹೋರಾಟದಲ್ಲಿ ತೊಡಗಿದ್ದ ಇವರು, ನೂರಾರು ರೈತರ ಕಣ್ಣೊರೆಸಿದ್ದಾರೆ ಆದರೆ ಜಮೀನು ಕೊಟ್ಟ ನಂತರ ಎಲ್ಲ ಸಮಸ್ಯೆಯಿಂದ ಮುಕ್ತರಾಗಿದ್ದರು ಕೇವಲ 20 ಲಕ್ಷ ರೂ.ಗಳ ಸಮಸ್ಯೆಯನ್ನು ಮಾತುಕತೆ ಮೂಲಕ ಪರಿಹರಿಸಬಹುದಾಗಿತ್ತು ಆದರೆ ಅಷ್ಟರಲ್ಲೇ ದುಡುಕಿನ ನಿರ್ಧಾರಕ್ಕೆ ಮುಂದಾಗಿರುವುದು ದುರಾದೃಷ್ಟ ಎಂದರು. ಕೇವಲ 19 ಲಕ್ಷದ 50,000 ರೂ ಗಳಿಗೆ ನೇಣಿಗೆ ಶರಣಾಗಿರುವ ರಾಮಾಂಜಿನಪ್ಪನ ಸಾವಿನ ಸುತ್ತ ಹತ್ತಾರು ಅನುಮಾನ ಮಾಡಿದ್ದು, ನಿಷ್ಪಕ್ಷಪಾತವಾದ ಪೊಲೀಸರ ತನಿಕೆಯಿಂದ ಮಾತ್ರ ಸತ್ಯಾಸತ್ಯತೆ ಹೊರ ಬರಬೇಕಿದೆ.
ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

