Saturday, July 27, 2024

ಭಾರತದ ಗೆಲುವಿಗೆ 231 ರನ್ ಗಳ ಸವಾಲು ಒಡ್ಡಿದ ಇಂಗ್ಲೆಂಡ್

Most read

ಹೈದರಾಬಾದ್: ಓಲಿ ಪೋಪ್ ಅವರ ಹೋರಾಟದ 196 ರನ್ ಗಳ ನೆರವಿನೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಪ್ರದರ್ಶನ ತೋರಿದ ಪ್ರವಾಸಿ ಇಂಗ್ಲೆಂಡ್ ತಂಡ ಭಾರತಕ್ಕೆ 231 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ ಐದು ಟೆಸ್ಟ್ ಗಳ ಸುದೀರ್ಘ ಸರಣಿಯ ಮೊದಲ ಟೆಸ್ಟ್ನ ನಾಲ್ಕನೇ ದಿನವಾದ ಇಂದು ಇಂಗ್ಲೆಂಡ್ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿತು.

ಮಧ್ಯಮ ಕ್ರಮಾಂಕದ ಆಟಗಾರ ಓಲಿ ಪೋಪ್ ಇಂದು ಬೆಳಿಗ್ಗೆ ಸಹ ಭಾರತೀಯ ಬೌಲರ್ಗಳನ್ನು ಕಾಡಿದರು. ನಿನ್ನೆ 148 ರನ್ ಗಳಿಸಿ ಆಡುತ್ತಿದ್ದ ಪೋಪ್ ಇಂದು ಬೆಳಿಗ್ಗೆ ಆಕ್ರಮಣಕಾರಿಯಾಗಿ ಆಡಿದರು. ಒಟ್ಟಾರೆಯಾಗಿ 278 ಎಸೆತಗಳನ್ನು ಎದುರಿಸಿದ ಪೋಪ್ 21 ಬೌಂಡರಿಗಳ ನೆರವಿನೊಂದಿಗೆ 196 ರನ್ ಗಳಿಸಿದರು.

ಓಲಿ ಪೋಪ್ ಅವರೊಂದಿಗೆ ಆಟ ಆರಂಭಿಸಿದ ರೆಹಾನ್ ಅಹ್ಮದ್ ಅಮೂಲ್ಯ 28 ರನ್ ಗಳ ಕಾಣಿಕೆ ನೀಡಿ ಜಸ್ಪೀತ್ ಬುಮ್ರಾ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ.ಎಸ್.ಭರತ್ ಗೆ ಕ್ಯಾಚ್ ನೀಡಿ ಔಟಾದರು. ನಂತರ ಟಾಮ್ ಹಾರ್ಟ್ಲೀ ಸಹ ಭಾರತವನ್ನು ಕಾಡಿದರು. ಕೊನೆಗೆ ಆರ್ ಅಶ್ವಿನ್ ಅವರ ಚೆಂಡನ್ನು ಗುರುತಿಸಲಾಗದೆ ಬೌಲ್ಡ್ ಆದರು. ಮಾರ್ಕ್ ವುಡ್ ಅವರನ್ನು ರವೀಂದ್ರ ಜಡೇಜಾ ಔಟ್ ಮಾಡಿದರೆ, ಓಲಿ ಪೋಪ್ ಅವರನ್ನು ಜಸ್ಪೀತ್ ಬುಮ್ರಾ ಬೌಲ್ಡ್ ಮಾಡಿದರು.

ಗೆಲುವಿಗೆ 231 ರನ್ ಗಳಿಸಬೇಕಿರುವ ಭಾರತದ ಆಟಗಾರರು ಜೋ ರೂಟ್ ನೇತೃತ್ವದ ಇಂಗ್ಲೆಂಡ್ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬೇಕಿದೆ. ಇಂದು ಪಂದ್ಯದ ನಾಲ್ಕನೇ ದಿನವಾದ ಹಿನ್ನೆಲೆಯಲ್ಲಿ ಪಿಚ್ ಚೆಂಡು ಸ್ಪಿನ್ನರ್ ಗಳಿಗೆ ಅನುಕೂಲಕರವಾಗಿರಲಿದೆ.
ಇಂಗ್ಲೆಂಡ್: 246 ಮತ್ತು 420
ಭಾರತ: 436

More articles

Latest article