Wednesday, May 22, 2024

ಒಬ್ಬರ ಜೊತೆ ಮದುವೆ, ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ: ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ

Most read

ಬಿಹಾರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೂ ನಿತೀಶ್ ಕುಮಾರ್ ಆರ್ ಜೆಡಿ-ಜೆಡಿಯು ಮೈತ್ರಿ ಪತನಗೊಂಡಿದ್ದು, ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಜೊತೆ ಸರ್ಕಾರ ರಚಿಸಲು ಸಿದ್ಧವಾಗಿದ್ದಾರೆ. ಈ ಕಾಂಗ್ರೆಸ್ ನಾಯಕ ತಾರಿಕ್, ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿತೀಶ್ ಕುಮಾರ್ ವಿರುದ್ಧ ಕಾಂಗ್ರೆಸ್ ನಾಯಕ ತಾರಿಕ್ ಅನ್ವರ್ ನಿತೀಶ್ ಕುಮಾರ್ X ನಲ್ಲಿ ಪೋಸ್ಟ್ ಮಾಡಿದ್ದು, “ಒಬ್ಬರನ್ನು ಮದುವೆ, ಮತ್ತೊಬ್ಬರೊಂದಿಗೆ ಅನೈತಿಕ ಸಂಬಂಧ” ಹೊಂದುವುದು ನಿತೀಶ್ ಕುಮಾರ್‌ಗೆ ಅಭ್ಯಾಸವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

“ಆಶ್ಚರ್ಯಪಡುವಂಥದ್ದೇನೂ ಇಲ್ಲ. ಯಾರೊಂದಿಗಾದರೂ ಮದುವೆಯಾಗಿ, ಇನ್ನೊಬ್ಬರೊಂದಿಗೆ ಸಂಬಂಧ ಹೊಂದುವುದು ನಿತೀಶ್ ಕುಮಾರ್ ಅವರ ಸ್ವಭಾವವಾಗಿದೆ,” ಎಂದು ಬರೆದುಕೊಂಡಿದ್ದಾರೆ.

More articles

Latest article