ಡೊನಾಲ್ಡ್‌ ಟ್ರಂಪ್-ನರೇಂದ್ರ ಮೋದಿ ಸಂಬಂಧ ಹದಗೆಟ್ಟಿದೆ; ಅಮೆರಿಕ ಮಾಜಿ ಸಲಹೆಗಾರ ಜಾನ್ ಬೋಲ್ಟನ್

Most read

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ಹಳಸಿದೆ ಎಂದು ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಬೋಲ್ಟನ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.

ಬ್ರಿಟಿಷ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಇಬ್ಬರೂ ನಾಯಕರ ನಡುವಿನ ಸಂಬಂಧ ಕುರಿತು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಅಮೆರಿಕ ಅಧ್ಯಕ್ಷರ ಜತೆಗೆ ನಿಕಟ ಬಾಂಧವ್ಯ ಹೊಂದಿದ್ದರೆ ಮಾತ್ರ ವಿಷಮ ಪರಿಸ್ಥಿತಿಯಿಂದ ಯಾವುದೇ ದೇಶ ಪಾರಾಗಲು ಸಾಧ್ಯ. ಸಾಮಾನ್ಯವಾಗಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಟ್ರಂಪ್ ಅವರು ತೀರಾ ವೈಯಕ್ತಿಕವಾಗಿ ಪರಿಗಣಿಸುತ್ತಾರೆ.

ಟ್ರಂಪ್ ಅವರು ಮೋದಿ ಅವರ ಜತೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಈಗ ಆ ಸಂಬಂಧ ಹಳಸಿದೆ. ವೈಯಕ್ತಿಕ ಸಂಬಂಧಗಳು ಕೆಲವೊಮ್ಮೆ ಸಹಾಯಕ್ಕೆ ಬರುತ್ತವೆ. ಆದರೆ ಅದು ನಿಮ್ಮನ್ನು ಕೆಟ್ಟ ಪರಿಸ್ಥಿಯಿಂದ ಪಾರು ಮಾಡುತ್ತಾರೆ ಎಂದಯ ಹೇಳಲಾಗದು ಎಂದಿದ್ದಾರೆ.

ಸುಂಕ ನೀತಿಗಳು ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೂ ದುಷ್ಪರಿಣಾಮ ಬೀರಿವೆ ಎಂದು ಹೇಳಿರುವ ಬೋಲ್ಟನ್‌ ಅಮೆರಿಕ-ಭಾರತ ಸಂಬಂಧ ದಶಕಗಳಷ್ಟು ಹಿಂದಕ್ಕೆ ಹೋಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಅವರೊಂದಿಗೆ ಪುಟಿನ್ ಉತ್ತಮ ಸಂಬಂಧ ಹೊಂದಿದ್ದರೆ, ರಷ್ಯಾ ಕೂಡ ಅಮೆರಿಕದ ಜತೆ ಉತ್ತಮ ಬಾಂಧವ್ಯ ಹೊಂದಿರುವ ಅವಕಾಶ ಇರುತ್ತಿತು. ಇದು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

More articles

Latest article