ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರದೊಂದು ಮನವಿ ಇದೆ: ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಬೇಡಿ.
ಹೀಗೇಂದು, ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಗೆಲುವಿಗೆ “ಮಹಿಳೆಯರೇ ಪ್ರಮುಖ ಕಾರಣ” ಎಂದಿರುವ ಸಿಎಂ ವಿಜಯ್, ರಾಜಕೀಯ ಟೀಕೆಗಳು ಸಮಂಜಸವಾದವೇ ಆದರೂ, ಮಹಿಳೆಯರ ವಿರುದ್ಧದ ಅವಹೇಳನಕಾರಿ ಮಾತುಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ನನ್ನ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ, ಕಾನೂನು ಮತ್ತು ಸುವ್ಯವಸ್ಥೆಯ ವಿಷಯಕ್ಕೆ ಬಂದರೆ, ಮಾತನಾಡುವುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ನಾವು ಯೋಚಿಸಬೇಕಿದೆ. ರಾಜಕೀಯ ಕಾರಣಗಳಿಗಾಗಿ ಜನರು, ಮಹಿಳೆಯರು ಮತ್ತು ಇತರರನ್ನು ಕೀಳಾಗಿ ಕಾಣಬಾರದು ಎಂಬುದು ನನ್ನ ಮನವಿ. ಇದು ನನ್ನ ಸಾಮಾನ್ಯ ಮನವಿ. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ಅಶ್ಲೀಲತೆ ಮತ್ತು ದ್ವೇಷದ ಪ್ರವಾಹವೇ ಹರಿಯುತ್ತಿದೆ ಎಂಬ ಕಾರಣಕ್ಕೆ ನಾನು ಇದನ್ನು ಹೇಳುತ್ತಿದ್ದೇನೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಅಥವಾ ದ್ವಂದ್ವ ಹಾಗೂ ತ್ರಿವಳಿ ಅರ್ಥ ಬರುವಂತೆ ಮಾತನಾಡುವವರನ್ನು ಜನರು ಗಮನಿಸುತ್ತಿದ್ದಾರೆ. ನಮ್ಮ ಮನೆಗಳಲ್ಲೂ ತಾಯಿ ಮತ್ತು ಸಹೋದರಿಯರ ರೂಪದಲ್ಲಿ ಮಹಿಳೆಯರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಿಯಾಗಿ ಮಾತನಾಡುವುದು ಉತ್ತಮ. ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನಾನು ಜನರಲ್ಲಿ ವಿನಂತಿಸುತ್ತೇನೆ,” ಎಂದು ವಿಧಾನಸಭೆಯಲ್ಲಿ ವಿಜಯ್ ಹೇಳಿದರು.
“ವೈಯಕ್ತಿಕವಾಗಿ ಹೇಳುವುದಾದರೆ, ನನ್ನ ಹಿಂದಿನ ಸ್ಥಾನದಲ್ಲಿ (ತಾರೆಯಾಗಿ) ಇರಲಿ ಅಥವಾ ಈಗಿನ ಸ್ಥಾನದಲ್ಲಿ (ಮುಖ್ಯಮಂತ್ರಿಯಾಗಿ) ಇರಲಿ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ಜನರೇ. ಜೊತೆಗೆ ನಮ್ಮ ಮನೆಗಳ ಮಹಿಳೆಯರು ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಿಳೆಯರ ವಿರುದ್ಧದ ಯಾವುದೇ ಅಶ್ಲೀಲ ವರ್ತನೆ ಅಥವಾ ಹೇಳಿಕೆಗಳ ವಿಷಯದಲ್ಲಿ ಕಾನೂನು ತನ್ನ ಕ್ರಮವನ್ನು ಕೈಗೊಳ್ಳುತ್ತದೆ ಎಂದು ವಿಜಯ್ ಹೇಳಿದರು.
ಮಹಿಳೆಯರ ಬಗ್ಗೆ ಅಶ್ಲೀಲ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಯಾರ ವಿರುದ್ಧವಾದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ನಟರಾಗಿದ್ದ ವಿಜಯ್ ನಟಿ ತ್ರಿಷಾ ಅವರೊಂದಿಗೆ ಗೆಳೆತನವಿತ್ತು. ಸಿಎಂ ಆದ ಬಳಿಕ ಇವರಿಬ್ಬರ ನಡುವಿನ ಗಾಸಿಪ್ ಮತ್ತಷ್ಟು ಹೆಚ್ಚಾಗಿ, ಟ್ರೋಲ್ ಗೂ ವಿಜಯ್ ಹಾಗೂ ತ್ರಿಷಾ ಗುರಿಯಾಗಿದ್ದರು.
ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಬೇಡಿ : ತಮಿಳುನಾಡು ಸಿಎಂ ವಿಜಯ್ ಮನವಿ