ಪತಾಳಗಂಗಾ ನದಿಯಲ್ಲಿ ತೇಲುತ್ತಿರುವ 3 ಸಾವಿರ ಸಿಲಿಂಡರ್‌ಗಳು

ರಾಯಗಡ : ಮಹಾರಾಷ್ಟ್ರದ ರಾಯಗಡದಿಂದ ಭಾರೀ ಮಳೆಯ ನಡುವೆ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದೆ. HPCL ಪಾತಾಳಗಂಗಾ LPG ಬಾಟ್ಲಿಂಗ್ ಪ್ಲಾಂಟ್‌ನಿಂದ ನೀರಿನ ಬಲವಾದ ಹರಿವಿನಿಂದ ಸುಮಾರು 3,000 ಗ್ಯಾಸ್ ಸಿಲಿಂಡರ್‌ಗಳು ಕೊಚ್ಚಿಹೋಗಿ ಪಾತಾಳಗಂಗಾ ನದಿಯಲ್ಲಿ ತೇಲುತ್ತಿರುವಂತೆ ಕಂಡುಬಂದಿದೆ.

ಧಾರಾಕಾರ ಮಳೆಯಿಂದಾಗಿ, ಸ್ಥಾವರದ ರಕ್ಷಣಾ ಗೋಡೆ ಕುಸಿದು ಪ್ರವಾಹದ ನೀರು ನೇರವಾಗಿ ಆವರಣಕ್ಕೆ ಪ್ರವೇಶಿಸಿ ಸಿಲಿಂಡರ್‌ಗಳು ತೇಲಿ ಹೋದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಸಿಲಿಂಡರ್‌ಗಳು ಪಾತಾಳಗಂಗಾ ನದಿ ಮತ್ತು ಖಾರ್ಪಾಡಾ ಕ್ರೀಕ್‌ಗೆ ಕೊಚ್ಚಿಹೋಗಿವೆ. ಜನರು

ಸೇತುವೆಯಿಂದ ತೇಲುವ ಸಿಲಿಂಡರ್‌ಗಳ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ. 

ರಾಯಗಡ ಜಿಲ್ಲಾಧಿಕಾರಿ ಕಿಶನ್ ಜವಾಲೆ ಅವರು, ನದಿಯಲ್ಲಿ ಕಂಡುಬರುವ ಅಥವಾ ದಡಕ್ಕೆ ಬರುವ ಸಿಲಿಂಡರ್ ಯಾವ ಸ್ಥಿತಿಯಲ್ಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇದರಿಂದಾಗಿ ಅವುಗಳ ಬಳಿಗೆ ಹೋಗದಂತೆ ಜನರಿಗೆ ಮನವಿ ಮಾಡಿದ್ದಾರೆ. ಯಾವುದೇ ಸಿಲಿಂಡರ್‌ನ್ನು ಎತ್ತಿಕೊಳ್ಳಬಾರದು, ಸ್ಥಳಾಂತರಿಸಬಾರದು ಅಥವಾ ಮನೆಗೆ ತೆಗೆದುಕೊಂಡು ಹೋಗಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಸಿಲಿಂಡರ್ ಕಾಣಿಸಿದರೂ ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅದರಿಂದ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು. ಅವುಗಳನ್ನು ಮುಟ್ಟುವುದರಿಂದ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ನಿವಾಸಿಗಳು ಜಾಗರೂಕರಾಗಿರಲು ಪದೇ ಪದೇ ಒತ್ತಾಯಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article

Most read