Saturday, December 7, 2024

ಕಾಂಗ್ರೆಸ್ – ಬಿಜೆಪಿ ಪೋಸ್ಟರ್ ಸಮರ

Most read

ಕೇಂದ್ರ ಬಜೆಟ್ಟಿನಲ್ಲಿ ಕಳೆದ ಐದಾರು ವರ್ಷಗಳಿಂದ ರಾಜ್ಯಕ್ಕೆ ಆಗುತ್ತಿರುವ ಆರ್ಥಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದಕ್ಕಾಗಿ ರಾಜ್ಯ ಸರಕಾರ ಕರೆ ಕೊಟ್ಟಿದ್ದ ‘ಚಲೋ ದಿಲ್ಲಿ’ ಹೋರಾಟದ ಕುರಿತು ಫೆ. 6 ರಂದು ರಾಜ್ಯದ ಎಲ್ಲ ಮಾಧ್ಯಮಗಳಲ್ಲಿ ಸರ್ಕಾರಿ ಜಾಹೀರಾತು ಪ್ರಕಟವಾಗಿತ್ತು. ಈ ಜಾಹಿರಾತಿಗೆ ಪ್ರತಿಯಾಗಿ ಇಂದು ರಾಜ್ಯ ಬಿಜೆಪಿ ಪಕ್ಷವು ಅದೇ ವಿನ್ಯಾಸದ ಜಾಹೀರಾತೊಂದನ್ನು ರಚಿಸಿ ಟ್ವಿಟರ್ ಮೂಲಕ ಟಾಂಗ್ ನೀಡಿದೆ. 

ರಾಜ್ಯ ಸರ್ಕಾರದ ಪೋಸ್ಟರ್ ಜಾಹೀರಾತಿನಲ್ಲಿ ಏನಿತ್ತು?

ರಾಜ್ಯ ಸರ್ಕಾರ ನೀಡಿದ ಪೋಸ್ಟರ್ ಜಾಹೀರಾತಿನಲ್ಲಿ ಚಲೋ ದಿಲ್ಲಿ ಶೀರ್ಷಿಕೆಯೊಂದಿಗೆ ಮಹಾತ್ಮಾ ಗಾಂಧೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಳಗೊಂಡ ಚಿತ್ರವನ್ನು ಒಳಗೊಂಡಿತ್ತು.

ಕೇಂದ್ರ ಸರಕಾರ ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಹಾಗೂ ಸೌಲಭ್ಯ ನೀಡುವಲ್ಲಿ ಕನ್ನಡಿಗರಿಗೆ ಮಾಡಿದ ಅನ್ಯಾಯವನ್ನು ಸಾರ್ವಜನಿಕವಾಗಿ ರಾಜ್ಯ ಸರಕಾರ ಪ್ರಕಟಿಸಿದೆ. ಇದರಲ್ಲಿ, ಬರ ಪರಿಹಾರಕ್ಕೆ ರಾಜ್ಯ ಸರಕಾರ 18,177 ಕೋಟಿ ರೂ. ಬೇಡಿಕೆ ಇಟ್ಟರೂ ಬಿಡಿಗಾಸನ್ನೂ ಕೇಂದ್ರ ಕೊಟ್ಟಿಲ್ಲ. 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಸಿಗಬೇಕಾದ 5,495 ಕೋಟಿ ರೂ. ವಿಶೇಷ ಅನುದಾನದಲ್ಲಿ ನೈಯಾಪೈಸೆಯನ್ನು ಕೇಂದ್ರವು ರಾಜ್ಯಕ್ಕೆ ನೀಡಿಲ್ಲ. 14 ನೇ ಹಣಕಾಸು ಆಯೋಗದಲ್ಲಿ 4.72 ರಷ್ಟಿದ್ದ ರಾಜ್ಯದ ಅನುದಾನದ ಪಾಲನ್ನು 15 ನೇ ಹಣಕಾಸು ಆಯೋಗದಲ್ಲಿ 3.64ಕ್ಕೆ ಇಳಿಸಿರುವುದರಿಂದ ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62,098 ಕೋಟಿ ರೂ ನಷ್ಟವಾಗಿದೆ. ಹೀಗೆ ಸಹಭಾಗಿತ್ವ ಯೋಜನೆಗೆ 2021-22ರಲ್ಲಿ 20 ಸಾವಿರ ಕೋಟಿ ಹಾಗೂ 2022-23ರಲ್ಲಿ 13 ಸಾವಿರ ಕೋಟಿ ರೂ. ಅನುದಾನ ಕಡಿತ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 2023-24 ರಲ್ಲಿ ಘೋಷಿಸಿದ 5,300 ಕೋಟಿ ರೂ. ನಲ್ಲಿ ಕೇಂದ್ರದ ಪಾಲು ಸೊನ್ನೆಯಾಗಿದೆ. ಘೋಷಣೆ ಮಾಡಿದ ಏಮ್ಸ್ ಕನಸಾಗಿಯೇ ಉಳಿದಿದ್ದು, ರಾಜ್ಯದ ಮಹದಾಯಿ ಯೋಜನೆಗೆ ಮನ್ನಣೆಯೇ ಇಲ್ಲ. ಇವೆಲ್ಲವೂ ಸೇರಿ 2017-18ರಿಂದ ಇಲ್ಲಿಯವರೆಗೆ ಕೇಂದ್ರದಿಂದ ರಾಜ್ಯಕ್ಕೆ 1,87,000 ಕೋಟಿ ರೂ. ನಷ್ಟ ಆಗಿರುವ ಇಂಚಿಂಚು ಮಾಹಿತಿಯನ್ನು ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಜಾಹಿರಾತಿನಲ್ಲಿ ಪ್ರಕಟಿಸಿತ್ತು.

ಪ್ರತಿಯಾಗಿ ಬಿಜೆಪಿ ಪೋಸ್ಟರಿನಲ್ಲಿ….

ಬಿಜೆಪಿಯ ಪ್ರಮುಖರು ಸಾಮಾಜಿಕ ಮಾಧ್ಯಮಗಳ ಮೂಲಕ ಇಂದು ಹಂಚಿಕೊಂಡಿರುವ ಪೋಸ್ಟರಿನಲ್ಲಿ ಮಹಾತ್ಮಾ ಗಾಂಧಿಜಿ ತಿರುಗಿ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವವರಿಗೆ, “ನೀವು ಮಾಡುವ ಮಾನಗೆಟ್ಟ ಕೆಲಸಗಳಿಗೆ ನನ್ನ ಯಾಕೋ ಬಳಸಿಕೊಳ್ತೀರಾ” ಎಂದು ಕಾಂಗ್ರೆಸ್ ನಾಯಕರನ್ನು ಜರಿದು ದಂಡಿಸುತ್ತಿರುವಂತೆ ಬಿಜೆಪಿ ಮಾಡಲಾಗಿದೆ.

ಇದಕ್ಕೆ ಪ್ರತಿಯಾಗಿ, ಮಹಾತ್ಮಾ ಗಾಂಧೀಜಿಯವರ ನಿರ್ಮಲ ಭಾರತ ಯೋಜನೆಯನ್ನು ತಮ್ಮ ಪ್ರಚಾರಕ್ಕಾಗಿ ಸ್ವಚ್ಛ ಭಾರತ ಅಭಿಯಾನ ಎಂದು ಬದಲಾಯಿಸಿ ಗಾಂಧಿಜಿಯವರಿಗೆ ಅವಮಾನಿಸಿರುವ ಬಿಜೆಪಿಗೆ, ಗಾಂಧಿಜಿಯವರನ್ನು ಕೊಂದ ಗೋಡ್ಸೆಯ ಅಭಿಮಾನಿ ಬಳಗವನ್ನು ಹೊಂದಿರುವ ಬಿಜೆಪಿಯವರಿಗೆ ಕಾಂಗ್ರೆಸ್ ನಾಯಕರನ್ನು ಸುಳ್ಳು ಆರೋಪಗಳ ಮೂಲಕ ಜರಿಯಲು ಈಗ ಗಾಂಧಿಜಿಯವರು ಬೇಕಾಗಿದ್ದಾರೆಯೇ? ಎನ್ನುವ ವ್ಯಂಗ್ಯೋಕ್ತಿಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ನಾಯಕರ ಜಾಹಿರಾತಿನಲ್ಲೇನಿದೆ?

# ಬಜೆಟ್ಟಿನಲ್ಲಿ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ನನ್ನತೆರಿಗೆನನ್ನಹಕ್ಕು ಆಷ್ ಟ್ಯಾಗ್ ಬಳಸಿ ರಾಜ್ಯಾದ್ಯಂತ ಟ್ವಿಟರ್ ಅಭಿಯಾನ ಆರಂಭವಾಗಿದೆ. ಇದೇ ಆಷ್ ಟ್ಯಾಗ್ ಬಳಸಿ ರಾಜ್ಯ ಕಾಂಗ್ರೆಸ್ ಸರಕಾರವು, ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರಕಾರದ ಆರ್ಥಿಕ ದೌರ್ಜನ್ಯದ ವಿರುದ್ಧ “ಚಲೋ ದಿಲ್ಲಿ” ಹೋರಾಟ ಹಮ್ಮಿಕೊಂಡಿರುವ ಕುರಿತು ಫೆ.6 ರಂದು ರಾಜ್ಯದಲ್ಲಿ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಿತ್ತು.

ಈ ಜಾಹಿರಾತಿನಲ್ಲಿ, ಕೇಂದ್ರ ಸರಕಾರ ಅನುದಾನ ನೀಡಿಕೆಯಲ್ಲಿ ಕರ್ನಾಟಕಕ್ಕೆ ಮಾಡಿರುವ ತಾರತಮ್ಯ ಹಾಗೂ ಸೌಲಭ್ಯ ನೀಡುವಲ್ಲಿ ಕನ್ನಡಿಗರಿಗೆ ಮಾಡಿದ ಅನ್ಯಾಯವನ್ನು ಸಾರ್ವಜನಿಕವಾಗಿ ರಾಜ್ಯ ಸರಕಾರ ಪ್ರಕಟಿಸಿದೆ. ಇದರಲ್ಲಿ, ಬರ ಪರಿಹಾರಕ್ಕೆ ರಾಜ್ಯ ಸರಕಾರ 18,177 ಕೋಟಿ ರೂ. ಬೇಡಿಕೆ ಇಟ್ಟರೂ ಬಿಡಿಗಾಸನ್ನೂ ಕೇಂದ್ರ ಕೊಟ್ಟಿಲ್ಲ. 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಸಿಗಬೇಕಾದ 5,495 ಕೋಟಿ ರೂ. ವಿಶೇಷ ಅನುದಾನದಲ್ಲಿ ನೈಯಾಪೈಸೆಯನ್ನು ಕೇಂದ್ರವು ರಾಜ್ಯಕ್ಕೆ ನೀಡಿಲ್ಲ. 14 ನೇ ಹಣಕಾಸು ಆಯೋಗದಲ್ಲಿ 4.72 ರಷ್ಟಿದ್ದ ರಾಜ್ಯದ ಅನುದಾನದ ಪಾಲನ್ನು 15 ನೇ ಹಣಕಾಸು ಆಯೋಗದಲ್ಲಿ 3.64ಕ್ಕೆ ಇಳಿಸಿರುವುದರಿಂದ ಕಳೆದ 5 ವರ್ಷಗಳಲ್ಲಿ ರಾಜ್ಯಕ್ಕೆ 62,098 ಕೋಟಿ ರೂ ನಷ್ಟವಾಗಿದೆ. ಹೀಗೆ ಸಹಭಾಗಿತ್ವ ಯೋಜನೆಗೆ 2021-22ರಲ್ಲಿ 20 ಸಾವಿರ ಕೋಟಿ ಹಾಗೂ 2022-23ರಲ್ಲಿ 13 ಸಾವಿರ ಕೋಟಿ ರೂ. ಅನುದಾನ ಕಡಿತ ಮಾಡಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 2023-24 ರಲ್ಲಿ ಘೋಷಿಸಿದ 5,300 ಕೋಟಿ ರೂ. ನಲ್ಲಿ ಕೇಂದ್ರದ ಪಾಲು ಸೊನ್ನೆಯಾಗಿದೆ.

ಘೋಷಣೆ ಮಾಡಿದ ಏಮ್ಸ್ ಕನಸಾಗಿಯೇ ಉಳಿದಿದ್ದು, ರಾಜ್ಯದ ಮಹದಾಯಿ ಯೋಜನೆಗೆ ಮನ್ನಣೆಯೇ ಇಲ್ಲ. ಇವೆಲ್ಲವೂ ಸೇರಿ 2017-18ರಿಂದ ಇಲ್ಲಿಯವರೆಗೆ ಕೇಂದ್ರದಿಂದ ರಾಜ್ಯಕ್ಕೆ 1,87,000 ಕೋಟಿ ರೂ. ನಷ್ಟ ಆಗಿರುವ ಇಂಚಿಂಚು ಮಾಹಿತಿಯನ್ನು ರಾಜ್ಯ ಕಾಂಗ್ರೆಸ್ ಸರಕಾರ ತನ್ನ ಜಾಹಿರಾತಿನಲ್ಲಿ ಪ್ರಕಟಿಸಿತ್ತು.

ಬಿಜೆಪಿಯ ಪ್ರತಿಪೋಸ್ಟರಿನಲ್ಲೇನಿದೆ?

ಡ್ರಾಮಾ ಇನ್ ದಿಲ್ಲಿ ಎಂಬ ಶೀರ್ಷಿಕೆ ನೀಡಿರುವ ಬಿಜೆಪಿ ಪೋಸ್ಟರ್ ನಲ್ಲಿ ಕಾಂಗ್ರೆಸ್ ನಾಯಕರು ತಾವೇ  ಸರಕಾರ ಯಾವುದೇ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡದೆ ದ್ರೋಹ ಬಗೆದಿದ್ದೇವೆ, ಸುಳ್ಳು ಹೇಳಿ ಅಧಿಕಾರ ಹಿಡಿದು ಕನ್ನಡಿಗರ ಕಿವಿಗೆ ಹೂವು ಇಟ್ಟಿದ್ದೇವೆ, ಕಾಂಗ್ರೆಸ್ ಸರಕಾರ ರೈತರಿಗೆ ನೀರು ಕೊಡದೆ, ವಿದ್ಯುತ್ ಕೊಡದೆ, ಬೆಳೆ ಪರಿಹಾರ ನೀಡದೆ ರೈತರನ್ನು ಯಾಮಾರಿಸಿದ್ದೇವೆ, ಕನ್ನಡಿಗರ ತೆರಿಗೆ ದುಡ್ಡನ್ನು ತೆಲಂಗಾಣದಲ್ಲಿ ಸುರಿದು ರಾಜ್ಯದ ಬೊಕ್ಕಸ ಬರಿದು ಮಾಡಿದ್ದೇವೆ. ದಲಿತರ 11 ಸಾವಿರ ಕೋಟಿ ರೂ. ಕಿತ್ತುಕೊಂಡು ಆ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇವೆ; ಮುಸ್ಲಿಮರಿಗೆ ಆದ್ಯತೆ ಕೊಟ್ಟು ಔರಂಗಜೇಬ್, ಟಿಪ್ಪು, ತುಘಲಕ್ ಜಯಂತಿಗೆ ಅವಕಾಶ ಕೊಡುವ ನಮ್ಮದು ತುಘಲಕ್ ಸರಕಾರ; ಮಹಿಳೆಯರ ಮೇಲಿನ ದೌರ್ಜನ್ಯ ನಮಗೆ ಕಾಮನ್, ತುಘಲಕ್ ಆಡಳಿತ ನಮಗೆ ಮಾದರಿ, ನಮ್ಮ ಸರಕಾರದಲ್ಲಿ ಅಪರಾಧಿಗಳಿಗೆ ರಕ್ಷೆ, ನಿರಪರಾಧಿಗಳಿಗೆ ಶಿಕ್ಷೆ ಎಂದೆಲ್ಲಾ ಬಿಜೆಪಿ ಪ್ರಕಟಿಸಿದೆ.

ಕಳೆದ ಕೆಲವು ದಿನಗಳಿಂದ ಕೇಂದ್ರ ಸರ್ಕಾರದ ತೆರಿಗೆ ಅನ್ಯಾಯದ ಕುರಿತು ಕನ್ನಡಿಗರಲ್ಲಿ ದೊಡ್ಡ ಮಟ್ಟದ ಜಾಗೃತಿಯಾದ ಹಿನ್ನೆಲೆಯಲ್ಲಿ #ನನ್ನತೆರಿಗೆನನ್ನಹಕ್ಕು ಎಂಬ ಟ್ವಿಟರ್ ಅಭಿಯಾನ ನಡೆದಿತ್ತು. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ನೀಡಿತ್ತು. ಕಾಂಗ್ರೆಸ್ ಮುಖಂಡರು ಅಂಕಿಸಂಕ್ಯೆಗಳೊಂದಿಗೆ ಕೇಂದ್ರ ಸರ್ಕಾರದ ತೆರಿಗೆ ಹಣದ ವಂಚನೆ ಮತ್ತು ಅನುದಾನ ನೀಡದಿರುವ ಕುರಿತು ಮಾಧ್ಯಮಗಳ ಮೂಲಕ ಹೇಳುವ ಹೊತೆಗೆ ದೆಹಲಿ ಜಂತರ್ ಮಂತರ್ ನಲ್ಲಿ ಇಂದು ಹೋರಾಟ ನಡೆಸಿದ್ದಾರೆ. ಇದರ ಕಾವು ಹೆಚ್ಚಿದರೆ ಲೋಕಸಭೆಯ ಮೇಲೆ ಬಿಜೆಪಿಗೆ ನಕಾರಾತ್ಮಕ ಪರಿಣಾಮ ಉಂಟಾಗುವ ಭಯವೂ ಬಿಜೆಪಿಯಲ್ಲಿ ಮೂಡಿರಲಿಕ್ಕೆ ಸಾಕು. ಅಂತೂ ರಾಜ್ಯ ಸರ್ಕಾರ ಹೊರಡಿಸಿರುವ ಒಂದು ಪೋಸ್ಟರ್ ಜಾಹೀರಾತನ್ನೂ ಬಿಜೆಪಿ ಗುರಿಪಡಿಸಿದೆ ಎಂದರೆ ಇದರ ಪರಿಣಾಮ ಸರಿಯಾಗಿಯೇ ತಟ್ಟಿರುತ್ತದೆ.

More articles

Latest article