ಬೆಂಗಳೂರು: ಕುಡಿಯುವ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಬೆಂಗಳೂರು ಜಲ ಮಂಡಳಿ ಹದಿನೈದು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಒಂದು ವೇಳೆ ಕಾವೇರಿ ನೀರನ್ನು ಕಾರು ತೊಳೆಯುವುದು, ಗಿಡಗಳಿಗೆ ನೀರು ಹಾಕುವುದು ಮೊದಲಾದ ಉದ್ದೇಶಗಳಿಗೆ ಬಳಸಿದರೆ ದಂಡ ಹಾಕುವುದಾಗಿಯೂ ಎಚ್ಚರಿಕೆ ನೀಡಿತ್ತು. ಆದರೂ ಬೆಂಗಳೂರು ನಾಗರೀಕರು ನೀರನ್ನು ದುರ್ಬಳಕೆ ಮಾಡುವುದನ್ನು ನಿಲ್ಲಿಸಿರಲಿಲ್ಲ. ಇದೀಗ
ನಗರದ ನಿವಾಸಿಗಳಿಗೆ ದಂಡ ವಿಧಿಸುವ ಮೂಲಕ ಜಲಮಂಡಳಿ ಬಿಸಿ ಮುಟ್ಟಿಸಿದೆ. ಮಂಡಳಿ ಆದೇಶವನ್ನೂ ಲೆಕ್ಕಿಸದೆ ಕುಡಿಯುವ ನೀರನ್ನು ಅನ್ಯ ಕಾರ್ಯಗಳಿಗೆ ಬಳಿಸಿದವರಿಗೆ ದಂಡ ಹಾಕಲಾಗಿದೆ.
ಬೆಂಗಳೂರಿನ 417 ಜನರಿಗೆ ನೋಟಿಸ್ ನೀಡಿ ಜಲಮಂಡಳಿ ದಂಡ ಹಾಕಿ 20.85 ಲಕ್ಷ ದಂಡ ಸಂಗ್ರಹಿಸಿದೆ. ಬೆಂಗಳೂರು ಪೂರ್ವ ಭಾಗದ ಜನರು ಹೆಚ್ಚು ನಿಯಮ ಉಲ್ಲಂಘನೆ ಮಾಡಿದ್ದಾರೆ.
ಎಲ್ಲೆಲ್ಲಿ ಎಷ್ಟು ಕೇಸ್?
- ಬೆಂಗಳೂರು ಪೂರ್ವ ವಲಯ : 105 ಪ್ರಕರಣ ದಾಖಲು, ರೂ. 4.25 ಲಕ್ಷ ದಂಡ ಸಂಗ್ರಹ
- ಬೆಂಗಳೂರು ಪಶ್ಚಿಮ ವಲಯ – 111 ಪ್ರಕರಣ ದಾಖಲು, ರೂ. 5.55 ಲಕ್ಷ ದಂಡ ಸಂಗ್ರಹ
- ಬೆಂಗಳೂರು ಉತ್ತರ ವಲಯ – 84 ಪ್ರಕರಣ ದಾಖಲು, ರೂ. 3.20 ಲಕ್ಷ ದಂಡ ಸಂಗ್ರಹ
- ಬೆಂಗಳೂರು ದಕ್ಷಿಣ ವಲಯ – 115 ಪ್ರಕರಣ ದಾಖಲು, ರೂ. 5.70 ಲಕ್ಷ ದಂಡ ಸಂಗ್ರಹ