ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್‌ ತಾಕೀತು

ಬೆಂಗಳೂರು:  ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್‌ ತಾಕೀತು ಮಾಡಿದೆ.
ಸಾರಿಗೆ ನೌಕರರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನೌಕರರು ನಾಳೆಯಿಂದ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಆದರೆ, ಮುಷ್ಕರದಿಂದ ಸಾವರ್ಜನಿಕರಿಗೆ ತೊಂದರೆಯಾಗಲಿದೆ ಎಂದು ಕಟ್ಟಡ ಕಾರ್ಮಿಕರು ಹಾಗೂ ಮನೆಕೆಲಸದ ಮಹಿಳೆ ಇಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌, ಮುಷ್ಕರ ನಡೆಸದಂತೆ ಸೂಚಿಸಿದೆ.

ಸರ್ಕಾರದ ಜೊತೆಗೆ ಮಾತುಕತೆ ನಡೆಸುವಂತೆ ಆದೇಶಿಸಿ, ಗುರುವಾರಕ್ಕೆ  ವಿಚಾರಣೆ ಮುಂದೂಡಿದೆ. ಸಾರಿಗೆ ನೌಕರರೊಂದಿಗೆ ಸಭೆ ನಡೆಸುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೂ  ನೋಟಿಸ್‌ ಜಾರಿಗೊಳಿಸಿದೆ.

2025ರ ಜು.18ರ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಮುಂದುವರಿದಿದೆ. ರಾಜಿ ಸಂಧಾನದ ಮುಂದಿನ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಈ ಮಧ್ಯೆ ಮುಷ್ಕರ ನಡೆಸುವುದು ಕಾನೂನುಬಾಹಿರ. 14 ದಿನಗಳ ನೋಟಿಸ್ ಬದಲು ಮುಷ್ಕರಕ್ಕೆ 7 ದಿನಗಳ ನೋಟಿಸ್ ನೀಡಲಾಗಿದೆ. SSLC ಪೂರಕ ಪರೀಕ್ಷೆಗಳೂ ಇದೇ ಅವಧಿಯಲ್ಲಿ ನಿಗದಿಯಾಗಿರುವ ಕಾರಣ ಮೇ 20ರಂದು ಕರೆ ನೀಡಿರುವ ಸಾರಿಗೆ ನೌಕರರ ಮುಷ್ಕರ ನಿರ್ಬಂಧಿಸಲು ಮನವಿ ಮಾಡಲಾಗಿತ್ತು.  
 
ಇಂದು ಮತ್ತೆ ಮಾತುಕತೆ : ಸಾರಿಗೆ ನೌಕರರ ಮುಷ್ಕರ ವಿಚಾರ ಸಂಬಂಧ ನಿನ್ನೆ ನಡೆದ ಮೊದಲ ಸುತ್ತಿನ ಮಾತುಕತೆ ಮುರಿದುಬಿದ್ದ ಹಿನ್ನೆಲೆ,  ಮೇ 25ರಂದು ಮತ್ತೆ  ಸಭೆಗೆ ಬರಲು ಅಧಿಕಾರಿಗಳು ತಿಳಿಸಿದ್ದರು. ಆದರೆ, ನಿಗಮದ ಅಧಿಕಾರಿಗಳ ಮನವಿಗೆ ಒಪ್ಪದ ಸಾರಿಗೆ ಮುಖಂಡರು, ಸಿಎಂ ಜೊತೆಗೆ ಸಭೆಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಇಂದು ಮಧ್ಯಾಹ್ನದ ಒಳಗಾಗಿ ಸಭೆ ಕರೆದು ಬೇಡಿಕೆ ಈಡೇರಿಕೆ ಸಂಬಂಧ ಮಾತನಾಡುವಂತೆ ಆಗ್ರಹಿಸಿದ್ದಾರೆ.

ಪರ್ಯಾಯ ವ್ಯವಸ್ಥೆ : ಸಾರಿಗೆ ನೌಕರರು ಮುಷ್ಕರ ನಡೆಸಿದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಿದ್ಧ ಎಂದು ಕೆಎಸ್‌ಆರ್‌ಟಿಸಿ ನಿರ್ದೇಶಕ ಅಕ್ರಂ ಪಾಷ ಹೇಳಿದ್ದಾರೆ.

More articles

Latest article

Most read