ಚುನಾವಣೆ ಲಾಭಕ್ಕಾಗಿ ಬಿಜೆಪಿ ಅಯೋಧ್ಯೆಯಲ್ಲಿ ಬಾಂಬ್ ಸ್ಫೋಟಿಸಿ ಮುಸ್ಲಿಮರನ್ನು ದೂರಬಹುದು: ಅಜಯ್ ಯಾದವ್

ಲೋಕಸಭಾ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಅಯೋಧ್ಯೆಯಲ್ಲಿ ಬಾಂಬ್ ಸ್ಫೋಟಿಸಿ, ಇದಕ್ಕೆ ಪಾಕಿಸ್ತಾನ ಮತ್ತು ಮುಸ್ಲಿಮರು ಕಾರಣ ಎಂದು ದೂಷಿಸುತ್ತದೆ ಎಂದು ಆರ್ಜೆಡಿ ಶಾಸಕ ಅಜಯ್ ಯಾದವ್ ಭಾನುವಾರ ಹೇಳಿದ್ದಾರೆ.

ಅತ್ರಿ ವಿಧಾನಸಭಾ ಕ್ಷೇತ್ರದ ಆರ್ಜೆಡಿ ಶಾಸಕ ಅಜಯ್ ಯಾದವ್ ತಮ್ಮ ಮನೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ‘ಅಯೋಧ್ಯೆಗೆ ಭಾರಿ ಜನರು ಭೇಟಿ ನೀಡುತ್ತಿದ್ದು, ನಮಗೆ ಭಯವಾಗುತ್ತಿದೆ. ಚುನಾವಣೆಯ ಲಾಭಕ್ಕಾಗಿ ಅವರು (ಬಿಜೆಪಿ) ಅಲ್ಲಿ ಬಾಂಬ್ಗಳನ್ನು ಸ್ಫೋಟಿಸುತ್ತಾರೆ ಮತ್ತು ಅದಕ್ಕಾಗಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಸಂಘಟನೆಗಳು ಅಥವಾ ಮುಸ್ಲಿಮರನ್ನು ದೂರುತ್ತಾರೆ’ ಎಂದಿದ್ದಾರೆ.

ಭಗವಾನ್ ರಾಮನು ತನ್ನ ಹೆಂಡತಿಗಾಗಿ ಬಲಿಷ್ಠ ರಾವಣನ ವಿರುದ್ಧ ಹೋರಾಡಿದನು. ಆದರೆ, ಮೋದಿ ಜಿ ತನ್ನ ಹೆಂಡತಿಯನ್ನು ತೊರೆದಿದ್ದಾರೆ. ತನ್ನ ಹೆಂಡತಿಯನ್ನು ತೊರೆದ ವ್ಯಕ್ತಿಯು ಭಗವಾನ್ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ! ಇದರಿಂದ ನನಗೆ ನಾಚಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

More articles

Latest article

Most read