Friday, December 6, 2024

ಬ್ಯಾಂಕ್ ಗ್ರಾಹಕರೆ ಗಮನಿಸಿ; ಮಾರ್ಚ್ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜಗಳು

Most read

ಮಾರ್ಚ್ ತಿಂಗಳಲ್ಲಿ ಮುಖ್ಯವಾದ ಬ್ಯಾಂಕ್ ವ್ಯವಹಾರ, ಶೀಘ್ರ ಹಣ ವಿನಿಮಯ ಕೆಲವನ್ನು ಇಟ್ಟುಕೊಂಡಿದ್ದರೆ ದಯವಿಟ್ಟು ಈ ಸುದ್ದಿಯನ್ನು ಓದಲೇ ಬೇಕು. ಈ ವರ್ಷ ಮಾರ್ಚ್ ನಲ್ಲಿ ಸಾಲು ಸಾಲು ಹಬ್ಬ ಹರಿದಿನಗಳು ಬರಲಿದ್ದು,  ಬ್ಯಾಂಕ್ ಗಳಿಗೆ ರಜೆ ಇರಲಿವೆ. ಹಾಗಾಗಿ ಬ್ಯಾಂಕ್ ಕೆಲಸಗಳು ಏನಾದರು ಇದ್ದರೆ ಆದಷ್ಟು ಬೇಗ ಮುಗಿಸಿಕೊಳ್ಳುವುದು ಒಳಿತು.

ಮಾರ್ಚ್ ತಿಂಗಳಿನಲ್ಲಿ ಬರೋಬ್ಬರಿ 18 ದಿನಗಳು ಬ್ಯಾಂಕ್ ಗಳು ರಜೆಯಲ್ಲಿರುತ್ತದೆ. ಅರ್ಧ ತಿಂಗಳಿಗೂ ಹೆಚ್ಚು ದಿನಗಳು ಬ್ಯಾಂಕ್ಗಳು ರಜೆ ಇರುತ್ತದೆ. ಆಯಾ ರಾಜ್ಯದ ಹಬ್ಬದ ವಿಶೇಷತೆಗೆ ಆಧರಿಸಿ ಕೆಲ ರಾಜ್ಯದಲ್ಲಿ ರಜೆಯನ್ನು ನೀಡಲಾಗುತ್ತದೆ. ಇನ್ನು ಬ್ಯಾಂಕ್ ಗಳು ಮುಚ್ಚಿದ್ದರು ಕೂಡ ಗ್ರಾಹಕರಿಗೆ ಆನ್ ಲೈನ್ ನಲ್ಲಿ ಸೇವೆಗಳು ಲಭ್ಯವಿರುತ್ತದೆ.

ಮಾರ್ಚ್ ತಿಂಗಳಲ್ಲಿ ಈ 18 ದಿನಗಳು ಬ್ಯಾಂಕ್ ಮುಚ್ಚಿರಲಿದೆ


1 ಮಾರ್ಚ್ 2024 ಶುಕ್ರವಾರ, ಚಪ್ಚೂರ್ ಕುಟ್ ಕಾರಣ ಮಿಜೋರಾಂ ನಲ್ಲಿ ರಜೆ.

3 ಮಾರ್ಚ್ 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

6 ಮಾರ್ಚ್ 2024 ಬುಧವಾರ, ಮಹರ್ಷಿ ದಯಾನಂದ ಸರಸ್ವತಿ ಜಯಂತಿ.

 8 ಮಾರ್ಚ್ 2024 ಶುಕ್ರವಾರ, ಮಹಾ ಶಿವರಾತ್ರಿ

9 ಮಾರ್ಚ್ 2024 ಶನಿವಾರ, ಎರಡನೇ ಶನಿವಾರ ದೇಶದಾದ್ಯಂತ ಬ್ಯಾಂಕುಗಳು ಮುಚ್ಚಲ್ಪಟ್ಟವು

10 ಮಾರ್ಚ್ 2024 ಭಾನುವಾರ, ಸಾಪ್ತಾಹಿಕ ರಜೆ ದೇಶದಾದ್ಯಂತ ಬ್ಯಾಂಕ್‌ ಗಳನ್ನು ಮುಚ್ಚಿರುತ್ತದೆ.

12 ಮಾರ್ಚ್ 2024 ಮಂಗಳವಾರ, ರಂಜಾನ್ ಆರಂಭ.

17 ಮಾರ್ಚ್ 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ

20 ಮಾರ್ಚ್ 2024 ಬುಧವಾರ, ಮಾರ್ಚ್ ವಿಷುವತ್ ಸಂಕ್ರಾಂತಿಯ ಆಚರಣೆ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳನ್ನು ಮುಚ್ಚಿರುತ್ತದೆ.

22 ಮಾರ್ಚ್ 2024 ಶುಕ್ರವಾರ, ಬಿಹಾರ ದಿನ.

23 ಮಾರ್ಚ್ 2024 ಶನಿವಾರ, ಭಗತ್ ಸಿಂಗ್ ಹುತಾತ್ಮ.

24 ಮಾರ್ಚ್ 2024 ಭಾನುವಾರ, ಹೋಲಿಕಾ ದಹನ್ ಕಾರಣ ಗೆಜೆಟೆಡ್ ರಜೆ.

25 ಮಾರ್ಚ್ 2024 ಸೋಮವಾರ, ಹೋಳಿ ಅಥವಾ ಡೋಲಾ ಯಾತ್ರೆ ಕಾರಣ ಗೆಜೆಟೆಡ್ ರಜೆ.

26 ಮಾರ್ಚ್ 2024 ಮಂಗಳವಾರ, ಯೋಸಾಂಗ್.

28 ಮಾರ್ಚ್ 2024 ಗುರುವಾರ, ಮಾಂಡಿ ಗುರುವಾರ ಆಚರಣೆ.

29 ಮಾರ್ಚ್ 2024 ಶುಕ್ರವಾರ, ಶುಭ ಶುಕ್ರವಾರ.

30 ಮಾರ್ಚ್ 2024 ಶನಿವಾರ, ನಾಲ್ಕನೇ ಶನಿವಾರ ರಾಷ್ಟ್ರವ್ಯಾಪಿ ರಜೆ.

31 ಮಾರ್ಚ್ 2024 ಭಾನುವಾರ, ದೇಶದಾದ್ಯಂತ ವಾರದ ಬ್ಯಾಂಕ್ ರಜೆ.

ಇದು ದೇಶದಾದ್ಯಂತ ಬ್ಯಾಂಕುಗಳ ರಾಜ ಪಟ್ಟಿಯಾಗಿದ್ದು ಇದರಲ್ಲಿ ಕೆಲವು ದಿನಗಳು ಕರ್ನಾಟಕದ ಬ್ಯಾಂಕುಗಳು ತೆರೆದಿರುತ್ತದೆ.

More articles

Latest article