Thursday, September 19, 2024

ಜೆಎನ್‌ ಯೂನಲ್ಲಿ ABVP ದಾಂಧಲೆ: ವೇದಿಕೆಗೆ ನುಗ್ಗಿ ಗೂಂಡಾಗಿರಿ

Most read

ಹೊಸದಿಲ್ಲಿ: ಸೈದ್ಧಾಂತಿಕ ಸಂಘರ್ಷಕ್ಕಾಗಿ ಈ ನಡುವೆ ಸದಾ ಸುದ್ದಿಯಲ್ಲಿರುವ ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯ (JNU)ದಲ್ಲಿ ನಿನ್ನೆ ಮತ್ತೆ ಗಲಾಟೆ ನಡೆದಿದ್ದು, ಸಭೆಯ ವೇದಿಕೆಗೆ ನುಗ್ಗಿದ ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರು ಗೂಂಡಾಗಿರಿ ನಡೆಸಿದ್ದಾರೆ.

ಜವಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (JNUSU) ವಾರ್ಷಿಯ ಸಾಮಾನ್ಯ ಸಭೆ ನಿನ್ನೆ ವಿವಿ ಕ್ಯಾಂಪಸ್‌ ನ ಸಾಬರಮತಿ ಡಾಬಾದಲ್ಲಿ ಏರ್ಪಟಾಗಿತ್ತು. ಮುಂಬರುವ JNUSU ಚುನಾವಣೆಗೆ ಚುನಾವಣಾಧಿಕಾರಿಗಳ ನೇಮಕ ಸಂಬಂಧ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ABVP ಕಾರ್ಯಕರ್ತರು ಏಕಾಏಕಿ ಗಲಾಟೆ ಎಬ್ಬಿಸಿದ್ದಾರೆ.

ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ JNSU ಅಧ್ಯಕ್ಷೆ ಐಶೆ ಘೋಷ್‌ ಮೇಲೆ ಹಲ್ಲೆ ಯತ್ನ ನಡೆಯಲಾಯಿತಲ್ಲದೆ, ಅವರ ಮೇಲೆ ನೀರು ಎರಚಲಾಯಿತು. ABVP ಕಾರ್ಯಕರ್ತರು ಜನರಲ್‌ ಬಾಡಿ ಸಭೆಯಲ್ಲಿ ಕೌನ್ಸಿಲ್‌ ಸದಸ್ಯರು, ಭಾಷಣಕಾರರನ್ನು ನಿಂದಿಸಿ ಗಲಾಟೆ ಎಬ್ಬಿಸಿದರು. 2024ರ JNUSU ಚುನಾವಣೆಯ ಪ್ರಜಾತಾಂತ್ರಿಕ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲು ಎಬಿವಿಪಿಯು ಜೆಎನ್‌ ಯೂ ಆಡಳಿತದೊಂದಿಗೆ ಶಾಮೀಲಾಗಿ ಗದ್ದಲ ಎಬ್ಬಿಸುತ್ತಿದೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿದೆ.

ಐಶೆ ಘೋಷ್‌ ಅವರ ಮೇಲೆ ಎಬಿವಿಪಿ ಗೂಂಡಾಗಳು ದಾಳಿ ನಡೆಸಿದರು. ಒಬ್ಬ ಮಹಿಳಾ ನಾಯಕಿಯ ಮೇಲೆ ಈ ಬಗ್ಗೆಯ ನಾಚಿಕೆಗೆಟ್ಟ ನಡವಳಿಕೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು JNUSU ಹೇಳಿಕೆಯಲ್ಲಿ ತಿಳಿಸಿದೆ.

ಈ ನಡುವೆ ನಿನ್ನೆ ನಡೆದ ಗಲಾಟೆಯಲ್ಲಿ ತಮ್ಮ ಕಾರ್ಯಕರ್ತರೂ ಪೆಟ್ಟು ತಿಂದಿದ್ದಾರೆ ಎಂದು ಬಲಪಂಥೀಯ ವಿದ್ಯಾರ್ಥಿ ಸಂಘಟನೆ ABVP ಆರೋಪಿಸಿದೆ. ABVP ಕಾರ್ಯದರ್ಶಿ ವಿಕಾಸ್‌ ಪಟೇಲ್‌ ಅವರ ಮೇಲೆ ಡಿಎಸ್‌ ಎಫ್‌ ಸಂಘಟನೆ ದಾಳಿ ನಡೆಸಿದೆ, ಪ್ರಶಾಂತ್‌ ಬಾಗ್ಚಿ ಎಂಬ ಮತ್ತೋರ್ವ ಕಾರ್ಯಕರ್ತನ ಮೇಲೂ ಹಲ್ಲೆ ನಡೆದಿದೆ ಎಂದು ಅದು ಆರೋಪಿಸಿದೆ.
ನಿನ್ನೆ ನಡೆದ ಜನರಲ್‌ ಬಾಡಿ ಸಭೆಯಲ್ಲಿ ನಾವು ಭಾಗವಹಿಸುವುದು ಅವರಿಗೆ ಇಷ್ಟವಿರಲಿಲ್ಲ. ಅದಕ್ಕಾಗಿ AISA, SFI ಮತ್ತು DSF ಸಂಘಟನೆಗಳೇ ಗಲಾಟೆ ಎಬ್ಬಿಸಿವೆ ಎಂದು ABVP ಆರೋಪಿಸಿದೆ.

ಮುಂಬರುವ JNUSU ಚುನಾವಣೆಗೆ ಚುನಾವಣಾ ಅಧಿಕಾರಿಗಳನ್ನು ಆಯ್ಕೆ ಮಾಡುವ ಸಂಬಂಧ ಸಾಬರಮತಿ ಡಾಬಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆದಿದ್ದರು.

More articles

Latest article