Saturday, July 27, 2024

ಕೈ ಶಾಸಕ ಭರತ್‌ ರೆಡ್ಡಿ ನಿವಾಸದ ಮೇಲೆ ಇಡಿ ದಾಳಿ

Most read

ಜಾರಿ ನಿರ್ದೇಶನಾಲಯ (ಇಡಿ) ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಅಂಗಸಂಸ್ಥೆಯಂತೆ ವರ್ತಿಸುತ್ತಿದೆ ಎಂಬ ವಿರೋಧಪಕ್ಷಗಳ ಟೀಕೆಯ ನಡುವೆ ಇಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ನಿವಾಸ ಸೇರಿದಂತೆ ಅವರಿಗೆ ಸಂಬಂಧಿಸಿದ ಕಡೆಗಳಲ್ಲಿ ಇಡಿ ದಾಳಿ ನಡೆದಿದೆ.

ಬಳ್ಳಾರಿ ಶಾಸಕ ಭರತ್‌ ರೆಡ್ಡಿಯವರ ನಿವಾಸ, ಅವರ ತಂದೆ ಸೂರ್ಯನಾರಾಯಣರೆಡ್ಡಿ ಅವರ ಕಚೇರಿ, ಚಿಕ್ಕಪ್ಪ ಪ್ರತಾಪ್‌ ರೆಡ್ಡಿಯವರ ಮನೆಗೆ ಹಲವು ತಂಡಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 6-30ರಿಂದ ಇಡಿ ದಾಳಿ ಆರಂಭಗೊಂಡಿದ್ದು, ನಾಲ್ಕು ಕಡೆ ಏಕಕಾಲಕ್ಕೆ ಆಗಮಿಸಿದ ಇಡಿ ಅಧಿಕಾರಿಗಳು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.

ಶಾಸಕ ಭರತ್‌ ರೆಡ್ಡಿಯವರ ಮೇಲಿನ ಆರೋಪಗಳೇನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದ್ದು, ಬೆಂಗಳೂರಿನಿಂದ ಬಂದಿರುವ ಇಡಿ ಅಧಿಕಾರಿಗಳು ತನಿಖೆಯ ನಂತರ ಹೇಳಿಕೆ ನೀಡುವ ಸಾಧ್ಯತೆ ಇದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಜನಾರ್ಧನ ರೆಡ್ಡಿ ಪತ್ನಿ ಅರುಣಾ ಮತ್ತು ಸೋದರ ಸೋಮಶೇಖರ ರೆಡ್ಡಿ ವಿರುದ್ಧ ಭಾರೀ ಅಂತರದಿಂದ ಜಯಿಸಿದ್ದರು. ಚಲಾವಣೆಯಾದ ಮತಗಳಲ್ಲಿ ಶೇ.48ರಷ್ಟನ್ನು ಮತಗಳನ್ನು ಭರತ್‌ ರೆಡ್ಡಿ ಗಳಿಸಿದ್ದು ವಿಶೇಷವಾಗಿತ್ತು.

ದೇಶದಾದ್ಯಂತ ವಿರೋಧ ಪಕ್ಷಗಳನ್ನು ಹಣಿಯಲು ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪ ಬಲವಾಗುತ್ತಿರುವ ಸಮಯದಲ್ಲೇ ಕಾಂಗ್ರೆಸ್‌ ಯುವ ಶಾಸಕನ ಮನೆ ಮೇಲೆ ದಾಳಿ ನಡೆದಿದೆ.

ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿಗೆ ಇಡಿ ಶಾಕ್. ಕಾಂಗ್ರೆಸ್ ಶಾಸಕನ ಮನೆ, ಕಚೇರಿ ಮೇಲೆ ಇಡಿ ದಾಳಿ. ಮನೆ ಸೇರಿದಂತೆ 4 ಕಡೆ ಇಡಿ ಅಧಿಕಾರಿಗಳಿಂದ ದಾಳಿ.

ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ್ ರೆಡ್ಡಿ ಮನೆ. ಬೆ. 6.30ಕ್ಕೆ 4 ಕಡೆ ಏಕಕಾಲಕ್ಕೆ ದಾಳಿ, ಪರಿಶೀಲನೆ. ಬೆಂಗಳೂರಿನಿಂದ ಆಗಮಿಸಿದ ಹತ್ತಾರು ಅಧಿಕಾರಿಗಳು. ಬಳ್ಳಾರಿ ನಗರ ಭರತ್ ರೆಡ್ಡಿಗೆ ಇಡಿ ಶಾಕ್. ಕಾಂಗ್ರೆಸ್ ಶಾಸಕನ ಮನೆ, ಕಚೇರಿ ಮೇಲೆ ಇಡಿ ದಾಳಿ. ಮನೆ ಸೇರಿದಂತೆ 4 ಕಡೆ ಇಡಿ ಅಧಿಕಾರಿಗಳಿಂದ ದಾಳಿ. ಮನೆ, ತಂದೆಯ ಕಚೇರಿ, ಚಿಕ್ಕಪ್ಪ ಪ್ರತಾಪ್ ರೆಡ್ಡಿ ಮನೆ. ಬೆ. 6.30ಕ್ಕೆ 4 ಕಡೆ ಏಕಕಾಲಕ್ಕೆ ದಾಳಿ, ಪರಿಶೀಲನೆ. ಬೆಂಗಳೂರಿನಿಂದ ಆಗಮಿಸಿದ ಅಧಿಕಾರಿಗಳು.

More articles

Latest article