ಸಾಂಸ್ಕೃತಿಕ ಸರ್ವಾಧಿಕಾರ; ಸನಾತನಿಗಳ ಸಂತತ ದಾಳಿ

ಹರಿವ ಹಾವಿಗಂಜೆ ಉರಿಯ ನಾಲಗೆಗಂಜೆ
ಕತ್ತಿಯ ಮೊನೆಗಂಜೆ
ಒಂದಕ್ಕಂಜುವೆ ಒಂದಕ್ಕಳುಕುವೆ
ಪರಧನ ಪರಸ್ತ್ರೀ ಎಂಬೀ ಜೂಬಿಂಗಂಜುವೆ
ಮುನ್ನಮಂಜದ ರಾವಣನೆ ವಿಧಿಯಾದ
ಅಂಜುವೆನಯ್ಯ ಕೂಡಲ ಸಂಗಮದೇವ

ಬಸವಣ್ಣ ಮತ್ತು ಆತ ಕಟ್ಟಿದ ಸಾಮಾಜಿಕ ಪರಿವರ್ತನೆಯ ಚಳವಳಿಯ ಮೇಲಿನ ದಾಳಿ ಇಂದು ನಿನ್ನೆಯದಲ್ಲ. ಬಸವ ಬದುಕಿದ್ದ ಕಾಲದಿಂದಲೆ ಚಳವಳಿ ಹಲವಾರು ದಾಳಿಗಳನ್ನು ಎದುರಿಸಿದೆ. ಲೋಕದ ಮನುಜರೆಲ್ಲರೂ ತನ್ನಂತೆಯೆ ಎಂಬ ಪರಹಿತ ಭಾವನೆಯಿಂದ ಹುಟ್ಟಿದ ಇದು ಭಾರತೀಯ ವರ್ಣಾಧಾರಿತ ಸಾಮಾಜಿಕ ಸಂರಚನೆಯಲ್ಲಿರುವ ಪಿರಮಿಡ್ಡಿನ ಆಕಾರವನ್ನು ಚಪ್ಪಟೆಯ ಆಕಾರಕ್ಕೆ ತರಲು ಪ್ರಯತ್ನಿಸಿದ ಕಾರಣಕ್ಕೆ ಬಸವಣ್ಣ ಮೊದಲಾಗಿ ಎಲ್ಲ ಶರಣರ ಮೇಲೆ ತೀವ್ರವಾದ ದಾಳಿಗಳು ನಡೆದವು. ಸಮಾನತೆಯ ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಾಪುಗಾಲನ್ನಿಟ್ಟಿದ್ದ ಹನ್ನೆರಡನೆ ಶತಮಾನದ ಕನಸುಗಾರರನ್ನು ಇಲ್ಲಿನ ಸನಾತನತ್ವ ತನ್ನದೆ ಷಡ್ಯಂತ್ರ, ಪಿತೂರಿ, ಕುಯುಕ್ತಿ ಮತ್ತು ಕೊಲೆಗಳಿಂದ ಇಲ್ಲವಾಗಿಸಿತು. ಇದರ ಐತಿಹಾಸಿಕ ಹಿನ್ನೆಲೆಗೆ ಹೋಗದೆ ವರ್ತಮಾನದಲ್ಲಿ ಶರಣಚಳವಳಿಯ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ನಾವು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ.

ಬಸವಣ್ಣನವರ ಮೇಲೆ ಇಲ್ಲಿನ ಸನಾತನಕ್ಕೆ ಎಂದೂ ತೀರದ ವಿದ್ವೇಷವಿದೆ. ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಯಾಜಮಾನ್ಯಕ್ಕೆ ಬಲವಾದ ಪೆಟ್ಟು ಕೊಟ್ಟವನು ವರ್ತಮಾನದಲ್ಲಿ ಮತ್ತೆ ಮತ್ತೆ ಎದ್ದು ಬರುತ್ತಿರುವುದು ಅವರ ಅಸಹನೆಯ ಮೂಲಬಿಂದು. ಮನುಷ್ಯನ ದೇಹವನ್ನು ಹುಟ್ಟಿನ ಕಾರಣಕ್ಕೆ ಮತ್ತು ಬೇರೆ ಬೇರೆ ಕಾರಣಕ್ಕೆ ತುಚ್ಛೀಕರಿಸಿದ್ದ ಸನಾತನರ ಸಂಕಥನಗಳಿಗೆ ಎಲ್ಲ ದೇಹಗಳೂ ಪವಿತ್ರವಾದವುಗಳು ಮತ್ತು ಪೂಜೆಗೆ ಅರ್ಹವಾದವು ಎಂದು ಬಸವಣ್ಣ ಹೇಳಿದ್ದೆ ಕಾರಣವಾಗಿ ತಮ್ಮ ಪಾರಂಪರಿಕ ವಾರಸುದಾರಿಕೆಗೆ ಕುತ್ತು ತಂದನಲ್ಲ ಎನ್ನುವ ಭಯಾನಕ ಕೋಪ ಸನಾತನರ ಮನದಿಂದ ಎಂದೂ ಅಳಿಸಿಹೋಗುವುದಿಲ್ಲ. ಸಾಂಪ್ರದಾಯಿಕ ಸಮಾಜಕ್ಕೆ ಪೆಟ್ಟುಕೊಟ್ಟ ಎಲ್ಲ ದಾರ್ಶನಿಕರೂ ಸನಾತನಿಗಳ ದಾಳಿಗೆ ತುತ್ತಾಗಿದ್ದಾರೆ. ಆದ್ದರಿಂದ ಈಗ ನಡೆಯುತ್ತಿರುವ ಬಸವಣ್ಣನವರ ಪ್ರಕರಣ ಒಂದು ಬಿಡಿಯಾದುದ್ದಲ್ಲ. ಇಡಿಯಾದದ್ದನ್ನು ರೂಪಿಸಲು ಯೋಜಿಸಿರುವ ಹಲವು ಯೋಜನೆಗಳ ಒಂದು ಎಪಿಸೋಡ್. ಇಂತಹ ನೇತ್ಯಾತ್ಮಕ ನೆಲೆಯ ಹಲವು ಪ್ರಕರಣಗಳ ಮೂಲಕ ಬಸವಣ್ಣನವರನ್ನು ಖಳನಾಯಕನೆಂದು ಬಿಂಬಿಸಿಬಿಟ್ಟರೆ ಅಲ್ಲಿಗೆ ನಾವು ಎದುರಿಗಿರುವ ಮಹಾಪ್ರವಾಹವನ್ನು ಈಜಿದಂತೆ ಎಂದು ಈ ಕುಕೃತ್ಯ ನಡೆಯುತ್ತಿದೆ. ತನ್ನ ಹುಟ್ಟಿನಲ್ಲಿಯೆ ಬೆತ್ತಲಾಗಿರುವ ಚರಿತ್ರೆಯನ್ನು ತಿರುಚಿ ತನಗೆ ಬೇಕಾದ ಬಣ್ಣವನ್ನು ಬಳಿಯಬಹುದೆಂಬುದನ್ನು ಇಲ್ಲಿನ ವೈದಿಕಶಾಹಿ ಮನಗಂಡಿದೆ. ಈ ಸಮಾಚಾರ ಅರ್ಥವಾಗಬೇಕೆಂದರೆ ಈಗ ಕೆಲವೆ ವರ್ಷಗಳ ಹಿಂದೆ ನಮ್ಮ ಇಲ್ಲಿಯೆ ನಡೆದಾಡಿಕೊಂಡಿದ್ದ, ನಮ್ಮ ಅಜ್ಜ ಅಜ್ಜಿ ನೋಡಿರುವ ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವವನ್ನು ವಿರೂಪಗೊಳಿಸಲು ನಡೆದಿರುವ ಸಂತತ ನಿರೂಪಣೆಗಳನ್ನು ನೆನಪಿಸಿಕೊಳ್ಳಿ.

ಕಳೆದೊಂದು ದಶಕದಲ್ಲಿ ಕರ್ನಾಟಕ ಮತ್ತು ಭಾರತ ರಾಜಕಾರಣದಲ್ಲಿ ಬಸವಣ್ಣನವರನ್ನು ಮತ್ತು ಅವರ ತಾತ್ವಿಕತೆಯನ್ನು ಕುರಿತು ಆಳುವ ಸರ್ಕಾರಗಳು ಎದುರುಗೊಂಡಿರುವ ಬಗೆಯನ್ನೊಮ್ಮೆ ಮುಂದೆ ಪಟ್ಟಿ ಮಾಡಲಾಗಿದೆ.

1. ಮಾನ್ಯ ಪ್ರಧಾನಮಂತ್ರಿಗಳು 2015 ನವಂಬರ್ 14ರಂದು ಇಂಗ್ಲೆಂಡಿನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡುತ್ತ ಇಂಗ್ಲೆಂಡಿನ ಮ್ಯಾಗ್ನಾಕಾರ್ಟಾ ಮತ್ತು ಅಬ್ರಾಹಂ ಲಿಂಕನ್ನಿಗೂ ಮೊದಲು ಭಾರತದಲ್ಲಿ ಬಸವಣ್ಣನವರು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದ್ದರೆಂದು ಜಗತ್ತಿನ ಗಮನ ಸೆಳೆದರು. ಈ ಮೂಲಕ ಥೇಮ್ಸ್ ನದಿಯ ದಂಡೆಯ ಮೇಲೆ ಲೋಕವನ್ನು ಸಂಪನ್ನಗೊಳಿಸಲು ಸೆಣಸಿದ ದಾರ್ಶನಿಕರ ಸಾಲಿನಲ್ಲಿ ಬಸವಣ್ಣನವರ ಪುತ್ಥಳಿ ರಾರಾಜಿಸಿತು. ಮತ್ತೆ 2018ರಲ್ಲಿ ಏಪ್ರಿಲ್ 18 ಬಸವ ಜಯಂತಿಯ ಸಂದರ್ಭಕ್ಕೆ ಇಂಗ್ಲೆಂಡಿಗೆ ಭೇಟಿ ಕೊಟ್ಟಿದ್ದ ಮಾನ್ಯ ಪ್ರಧಾನ ಮಂತ್ರಿಗಳು ಬಸವಣ್ಣನವರ ಬಗ್ಗೆ ಮನದುಂಬಿ ಮಾತನಾಡುತ್ತ 12ನೆ ಶತಮಾನದ ಹೊತ್ತಿಗೆಯೆ ಇದ್ದ ‘ಅನುಭವ ಮಂಟಪ’ವನ್ನು ‘ಪ್ರಜಾಪ್ರಭುತ್ವದ ಮೊದಲ ಸಂಸತ್ತು’ ಎಂದು ಕೀರ್ತಿಸಿಬಿಟ್ಟರು.

2. ಕರ್ನಾಟಕ ಸರ್ಕಾರ ಕಳೆದೊಂದು ದಶಕದಿಂದ 12 ಜನ ವಚನಕಾರರ ಜಯಂತಿಯನ್ನು ಆಚರಿಸುತ್ತಿದೆ.

4. ವಿಜಯಪುರ ಮತ್ತು ಬಾಗಲಕೋಟೆಗಳಲ್ಲಿ ಶರಣರಿಗೆ ಸಂಬಂಧಿಸಿದ ಅನೇಕ ಪುನರುತ್ಥಾನದ ಕೆಲಸಗಳು ನಡೆಯುತ್ತಿವೆ.

6. ಶರಣರ ಸ್ಮೃತಿ ಶ್ರೀಮಂತಿಕೆ ಬರುವಂತೆ ಶರಣ ಧರ್ಮದ ಲಿಂಗಾಯತರು ಸಾಂದ್ರವಾಗಿರುವ ಉತ್ತರ ಕರ್ನಾಟಕದ ಆರು ಜಿಲ್ಲೆಗಳಿಗೆ ‘ಕಲ್ಯಾಣ ಕರ್ನಾಟಕ’ ಎಂದು ನಾಮಕಾರಣ ಮಾಡಲಾಗಿದೆ.

7. ಸದನದಲ್ಲಿ ಬಸವಣ್ಣನವರ ವಚನಗಳನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತ ತಮ್ಮ ರಾಜಕೀಯ ಎದುರಾಳಿಗಳನ್ನು ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಖಾಮುಖಿಯಾಗುತ್ತಿದ್ದರು.

ಹೀಗೆ ಬಸವನೆಂಬ ಬಳ್ಳಿ ಎತ್ತೆತ್ತಲೂ ಹಬ್ಬುತ್ತಿರಲು ಇತ್ತ ಸನಾತನರು ನಿದ್ರಾಹೀನರಾದರು. ಚರಿತ್ರೆಯಲ್ಲಿ ತಮ್ಮ ಸಾಂಸ್ಕೃತಿಕ ವಾರಸುದಾರಿಕೆಗೆ ಅಡ್ಡಿಯಾಗಿದ್ದವನು ಈಗ ವರ್ತಮಾನದಲ್ಲಿ ಧುತ್ತನೆ ಎದ್ದು ಬಂದಿದ್ದರಿಂದ ದುಗುಡಗೊಳ್ಳುತ್ತಲೆ ವ್ಯಗ್ರರಾದರು. ಅಂದಮಾತ್ರಕ್ಕೆ ಬಸವಣ್ಣನವರನ್ನು ಜನಗಳ ಸ್ಮೃತಿ ಸಂಚಯದಿಂದ ನಿರ್ನಾಮ ಮಾಡುವ ಕೆಲಸ ಇಲ್ಲಿ ದಾಖಲಾಗಿರುವ ದಿನಾಂಕಗಳಿಂದ ಆರಂಭವಾಗುವುದಿಲ್ಲ. ಕರ್ನಾಟಕದ ಸಂದರ್ಭದಲ್ಲಿ ಸನಾತನ ವರ್ಣಾಶ್ರಮಕ್ಕೆ ಬಲವಾದ ಎದುರಾಳಿ ಬಸವಣ್ಣನಾಗಿರುವುದರಿಂದ ಆತನ ಫಿಲಾಸಫಿಯನ್ನು ನಾಡಿಗೆ ಹರಡುತ್ತಿರುವ ಚಿಂತಕರನ್ನು ಅದು ಮೊದಲು ಭೇಟೆಯಾಡತೊಡಗಿತು. ಅನಂತಮೂರ್ತಿಯವರು ಬರೆದುಕೊಂಡಿದ್ದ ಸಾಲೊಂದನ್ನು ಕಲ್ಬುರ್ಗಿಯವರು ಹೇಳಿದ್ದಕ್ಕಷ್ಟೆ ಅವರ ಕೊಲೆಯಾಗಿಬಿಡಬೇಕೆ? ತಮ್ಮ ಇಡೀ ಜೀವಮಾನವನ್ನು ಶರಣರ ತಾತ್ತ್ವಿಕತೆಯನ್ನು ಶೋಧಿಸಲು ಮುಡಿಪಾಗಿಟ್ಟಿದ್ದ ಎಂ.ಎಂ.ಕಲ್ಬುರ್ಗಿಯವರ ಸಾವು ಹಠಾತ್ತನೆ ಸಂಭವಿಸಿದ ಒಂದು ಕ್ರಿಮಿನಲ್ ಅಪರಾಧವಲ್ಲ. ಬದಲಿಗೆ ಅವರು ನಡೆದುಹೋಗುತ್ತಿದ್ದ ‘ಮಾರ್ಗ’ಗಳು ಪಟ್ಟಭದ್ರರ ಅಧಿಕಾರಕ್ಕೆ ಸಂಚಕಾರ ತರುತ್ತಿದ್ದ ಹಾದಿಗಳಾಗಿದ್ದರಿಂದ ಅವರನ್ನು ಇಲ್ಲವಾಗಿಸಲು ರೂಪಿಸಿದ ಸಂಚಿನ ಭಾಗ. ಏಕೆಂದರೆ ಭಾರತದಲ್ಲಿ ಸನಾತನತ್ವ ಅಧಿಕಾರಕ್ಕೆ ಯಾವಾಗಲೂ ಸಂಸ್ಕೃತಿಯನ್ನೆ ಮಾನದಂಡ ಮತ್ತು ಮೆಟ್ಟಿಲುಗಳನ್ನಾಗಿ ಇಟ್ಟುಕೊಂಡಿರುತ್ತದೆ. ಆಳುವ ಸರ್ಕಾರಗಳು ತಮ್ಮ ಸಂಸ್ಕೃತಿಯ ಪ್ರತಿಷ್ಠಾಪಕರಾಗಿರುವ ಆಚಾರ್ಯರುಗಳನ್ನು ಬದಿಗೆ ಸರಿಸಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದನ್ನು ಸಾಂಪ್ರದಾಯಿಕ ಮನಸು ಹೇಗೆ ಸ್ವೀಕರಿಸಲು ಸಾಧ್ಯ? ಸಂವಿಧಾನದ ಮೂಲಕ ಈಗಾಗಲೆ ತಮ್ಮ ಆಧಿಪತ್ಯಕ್ಕೆ ಬೀಳುತ್ತಿರುವ ಏಟುಗಳಿಂದ ವಿಚಲಿತವಾಗಿರುವ ಈ ವರ್ಗ ತಮ್ಮ ಹಿತಾಸಕ್ತಿಗೆ ಧಕ್ಕೆ ತಂದ ವ್ಯಕ್ತಿಯನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಹೇಗೆ ಒಪ್ಪಿಕೊಳ್ಳುತ್ತದೆ?

       ಈ ಎಲ್ಲ ಘಟನೆಗಳ ತರುವಾಯ ನಡೆದದ್ದು ಮುಂದಿನಂತಿದೆ; ಆಧ್ಯಾತ್ಮಿಕ ಚಿಂತಕಿ ಎಂದು ಘೋಷಿಸಿಕೊಂಡಿರುವ ವೀಣಾ ಬನ್ನಂಜೆಯವರು ಅನುಭವ ಮಂಟಪ ಎನ್ನುವುದೆ ಇರಲಿಲ್ಲ. ಅದುವೆ ಭಾರತದ ಮೊದಲ ಸಂಸತ್ತಾಗಿರಲಿಲ್ಲ. ವಚನಗಳಲ್ಲಿರುವುದು ಉಪನಿಷತ್ತುಗಳಲ್ಲಿತ್ತು. ವೇದಗಳ ಕಾಲದಲ್ಲಿಯೆ ಆಧ್ಯಾತ್ಮಿಕ ಸಂಸತ್ತು ಇತ್ತು ಎಂದು ತಮ್ಮ ಹೊಸ ನಿರೂಪಣೆಗಳನ್ನು ಕಥಿಸಲು ಶುರುಮಾಡಿದರು. ಸದ್ಯಕ್ಕೀಗ ಭಾರತದಲ್ಲಿ ನಡೆಯುತ್ತಿರುವುದು ಇದುವೆ; ಐವತ್ತು ವರ್ಷಗಳ ತರುವಾಯ ಯೂರೋಪಿನಲ್ಲಿ ಯಾವುದಾದರೂ ಸಂಶೋಧನೆಗಳಾದರೆ ಅದೀಗಾಗಲೆ ವೇದಗಳ ಕಾಲದಲ್ಲಿತ್ತು ಎಂದು ಹೇಳಿಬಿಡುವುದು. ನಮ್ಮ ಕಾಲೇಜು, ವಿಶ್ವವಿದ್ಯಾಲಯಗಳ ಯಾವ ಪ್ರೊಫೆಸರ್‌ಗಳು ವೀಣಾ ಬನ್ನಂಜೆಯವರ ಈ ಕುತರ್ಕವನ್ನು ತಪ್ಪು ಎಂದು ಹೇಳಲಿಲ್ಲ. ಆದರೆ ಇದಕ್ಕೆ ಸ್ಪಷ್ಟವಾದ ದಾಖಲೆಗಳು ಮತ್ತು ಖಚಿತವಾದ ತಾತ್ತ್ವಿಕತೆಯಿಂದ ಉತ್ತರ ಕೊಟ್ಟ ಧೀಮಂತ ವ್ಯಕ್ತಿ ಶರಣ ಫಿಲಾಸಫಿಯ ಉತ್ಕೃಷ್ಟ ಸ್ಕಾಲರ್ ನಿವೃತ್ತ ಐ.ಎ.ಎಸ್.ಅಧಿಕಾರಿ ಎಸ್.ಎಂ.ಜಾಮದಾರ್. ಏತನ್ಮಧ್ಯೆ ವಚನಕಾರರ ಹೆಸರಿನಲ್ಲಿ ಮೂಲಭೂತವಾದಿ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಿದವು. ಬಸವಣ್ಣನವರನ್ನು ತಮ್ಮ ಸಾಂಸ್ಕೃತಿಕ ವಾರಸುದಾರರೆಂದು ಎದೆ ತಟ್ಟಿ ಹೇಳಿಕೊಳ್ಳುವ ಸ್ವಾಮೀಜಿಗಳು ಮತೀಯ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಪ್ರವಚನ ಕೊಟ್ಟರು. ದಯವಿಲ್ಲದ ಧರ್ಮ ಅದಾವುದಯ್ಯ? ದಯವೆ ಧರ್ಮದ ಮೂಲವಯ್ಯ ಎಂಬ ಬಸವಣ್ಣನ ಭಾವಚಿತ್ರ ಮತೀಯ ಸಂಘಟನೆಗಳ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಲ್ಲಿ ಪಾಲ್ಗೊಂಡ ಸ್ವಾಮೀಜಿಗಳಿಗೆ ಬೇಸರವೇನೂ ಆಗಲಿಲ್ಲ. ವಚನಕಾರರನ್ನು ಕುರಿತು ಕಾರಿಕೊಳ್ಳುವ ಕನ್ಹೇರಿ ಸ್ವಾಮಿಗಳು ನಮ್ಮ ಸಂವಿಧಾನದಲ್ಲಿ ಮನುಸ್ಮೃತಿಯ ಆಶಯಗಳಿವೆ ಎಂದು ಉವಾಚಿಸಿದರು. ಮನುಸ್ಮೃತಿಯನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ್ದ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಲ್ಲಿ ಮನುಸ್ಮೃತಿಯನ್ನು ಕಾಣಹೊರಟಿರುವುದು ಹುಚ್ಚುತನದ ಹೇಳಿಕೆಯಲ್ಲ. ಈ ಹೇಳಿಕೆಯನ್ನು ಮಾಜಿ ಸಂಸದರೊಬ್ಬರು ‘ಸಂವಿಧಾನವನ್ನು ಬದಲಾಯಿಸುತ್ತೇವೆ’ ಎನ್ನುವುದರ ಜೊತೆಗೆ ಮತ್ತು ಕುಂಭಮೇಳದಲ್ಲಿ 500ಕ್ಕೂ ಹೆಚ್ಚು ಕಾರ್ಯಸೂಚಿಗಳಿರುವ ವೈದಿಕ ಸಂವಿಧಾನದ ಕರಡನ್ನು ರಚಿಸಿದ್ದರ ಅಕ್ಕಪಕ್ಕ ಇಟ್ಟುನೋಡಿದರೆ ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ನಮಗೆ ಗೋಚರಿಸುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಬಸವಣ್ಣನವರ ಬಗ್ಗೆ ಬರೆದದ್ದು ನನ್ನ ಸೀಮಿತ ಓದಿನ ವ್ಯಾಪ್ತಿಗೆ ದಕ್ಕಿಲ್ಲ. ಆದರೆ ಆಶ್ಚರ್ಯಕರವೆಂಬಂತೆ ನಮ್ಮ ಸಂವಿಧಾನದ ಆಶಯಗಳು ಬಸವಣ್ಣನ ಕನಸುಗಳನ್ನು ಸಾಕಾರಗೊಳಿಸುತ್ತ ಸಾಗುತ್ತಿವೆ. ಇದು ಅಕ್ಷರಶಃ ಸನಾತನಿಗಳ ಆಳದಲ್ಲಿ ವ್ರಣವಾಗಿ ಕಾಡುತ್ತಿದೆ.

       ಕುವೆಂಪುರವರ ಪ್ರೀತಿಯ ಶಿಷ್ಯರಾಗಿದ್ದ ಪ್ರಭುಶಂಕರ್ ಅವರು ‘ಬೆರಗು’ ಎನ್ನುವ ಪುಸ್ತಕವೊಂದನ್ನು ರಚಿಸಿದ್ದಾರೆ. ಬೇರೆ ಬೇರೆ ಶರಣರ ಕಣ್ಣೋಟದಲ್ಲಿ ಬಸವಣ್ಣನವರನ್ನು ಚಿತ್ರಿಸುವ ಈ ಕೃತಿಯಲ್ಲಿ ಎರಡು ಪ್ರಸಂಗಗಳು ಬರುತ್ತವೆ. ಬಸವಣ್ಣನವರ ಸಂಸಾರ ನಿರ್ವಹಣೆಗೆಂದು ಬಿಜ್ಜಳ ಕೊಟ್ಟ ಹಣವನ್ನು ಬಸವಣ್ಣ ಹಾದಿಯಲ್ಲಿ ಬರುತ್ತ ಸಿಕ್ಕ ಶರಣರಿಗೆ ತಿದ್ದಿ ಬರಿಗೈಯ್ಯಲ್ಲಿ ಮನೆಗೆ ಬರುತ್ತಾನೆ. ಇನ್ನೊಂದು ಪ್ರಸಂಗದಲ್ಲಿ ಕಳ್ಳನೊಬ್ಬ ತನ್ನ ಮಡದಿ ನೀಲಾಂಬಿಕೆಯ ಕೊರಳಿಗೆ ಕೈ ಹಾಕಿ ಗಬಕ್ಕನೆ ಹೊನ್ನಿನ ಸರವನ್ನು ಹರಿದುಕೊಂಡು ಓಡಿದಾಗ ಕಳ್ಳನಿಗಿದ್ದ ಅನಿವಾರ್ಯತೆಯ ಬಗ್ಗೆ ಬಸವಣ್ಣ ಚಿಂತೆಗೀಡಾಗುತ್ತಾನೆ. ಇಂತಹ ಬಸವಣ್ಣನವರನ್ನು ಈಗ ಡಕಾಯಿತ, ಲೂಟಿಕೋರ, ಕೊಲೆಗಾರ ಎಂದು ತನ್ನ ನಂಜಿನ ನಾಲಗೆಯಿಂದ ಸನಾತನತ್ವ ಕಾರಿಕೊಳ್ಳುತ್ತಿದೆ. ಆದರೆ ರವಿ ಹಂಜ್ ಎಂಬ ಹುತ್ತವನ್ನಷ್ಟೆ ಬಡಿಯಲಾಗುತ್ತಿದೆ. ವಿಶ್ವವಾಣಿಯಲ್ಲಿ ಸರಣಿ ಬರಹಗಳನ್ನು ಹೇಳಿ ಬರೆಯಿಸಿದ ಸಂಪಾದಕರು ಇದರ ಹಿಂದಿರುವ ವಿಷಸರ್ಪ ಎನ್ನುವುದನ್ನು ಗಮನಕ್ಕೆ ತಂದುಕೊಳ್ಳುತ್ತಿಲ್ಲ. ಮಹಾತ್ಮ ಗಾಂಧೀಜಿಯವರ ಬಗ್ಗೆಯೂ ಇಂತಹುದೆ ಮಿಥ್ಯಕಥನಗಳನ್ನು ಜನಮನದಲ್ಲಿ ಬಿತ್ತಿ ಅವರನ್ನು ಕೊಂದವನ ಕೃತ್ಯವನ್ನು ನ್ಯಾಯಸಮ್ಮತಗೊಳಿಸುವ ನಿಟ್ಟಿನಲ್ಲಿ ನಮ್ಮ ರಾಜಕಾರಣ ಬಹುದೂರ ಸಾಗಿರುವ ಈ ಸಂದರ್ಭದಲ್ಲಿ ಬಸವಣ್ಣನವರ ತಾತ್ತ್ವಿಕ ಆಶಯಗಳಿಗೆ ಎರಡು ಬಗೆಯುತ್ತಿರುವುದನ್ನು ನೋಡಿ ಸುಮ್ಮನೆ ಕೂರುವ ಕಾಲವಿದಲ್ಲ.

ಮೇಲೆ ಪಟ್ಟಿ ಮಾಡಿದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಳೆದೊಂದು ದಶಕದಲ್ಲಿ ಶರಣ ಫಿಲಾಸಫಿಯ ಮೇಲೆ ನಡೆಯುತ್ತಿರುವ ನಿರಂತರ ಬೌದ್ಧಿಕ ಉಗ್ರವಾದಿ ಚಟುವಟಿಕೆಗಳನ್ನು ನಾವು ಮನಗಾಣಬೇಕಿದೆ. ‘ಬಸವ ಮಂಟಪ’ ಹಿಂದೆಯೆ ನಡೆದಿದ್ದ ಅಯೋಧ್ಯಾ ಪಬ್ಲಿಕೇಷನ್ಸ್ ಹೊರತಂದಿರುವ ‘ವಚನ ದರ್ಶನ’ ಪುಸ್ತಕದ ನಾಲ್ಕು ಜನ ಸಂಪಾದಕರಲ್ಲಿ ಒಬ್ಬರಾದರೂ ಶರಣಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದ ಸಂಶೋಧಕರಿಲ್ಲ. ಅದರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ತಮ್ಮ ಲೇಖನವನ್ನು ಬರೆದುಕೊಂಡಿದ್ದಾರೆ. ಮಲ್ಲೇಪುರಂ ಅವರ ಮುನ್ನುಡಿ ಸಿದ್ಧಗಂಗಾ ಮಠದ ಶ್ರೀಗಳ ಹಾರೈಕೆಯೂ ಸೇರಿದೆ. ಸನಾತನರ ಆಕ್ರಮಣದಿಂದ ಭೂಗತವಾಗಿದ್ದ ವಚನಗಳನ್ನು ಶೋಧಿಸಿ ‘ನೋಡಿ ಇಲ್ಲೊಂದು ಅವಿಚ್ಛಿನ್ನವಾದ ಸಾಮಾಜಿಕ ಚಳವಳಿ’ ನಡೆದಿದೆ’ ಎಂದು ಲೋಕದ ಕಣ್ಣೆದುರಿಗಿಟ್ಟ ಫ.ಗು.ಹಳಕಟ್ಟಿ ಮತ್ತು ಅದಕ್ಕೆ ತಮ್ಮ ಅಪಾರ ಶ್ರಮ ಮತ್ತು ವಿದ್ವತ್ತಿನ ಬಲದಿಂದ ತಾತ್ತ್ವಿಕ ತಳಹದಿಯನ್ನು ರೂಪಿಸಿಕೊಟ್ಟ ಕಲ್ಬುರ್ಗಿಯವರಿಂದ ಲಿಂಗಾಯತ ಸಮುದಾಯಕ್ಕೆ ಮತ್ತು ಅದರ ಮಠೀಯ ಪರಂಪರೆಗೆ ಅಪಾರ ತಾತ್ತ್ವಿಕ ಲಾಭವಾಗಿದೆ. ಕಲ್ಯಾಣದ ಶರಣರ ಕನಸುಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ದುಡಿದ ಕಲ್ಬುರ್ಗಿಯವರನ್ನು ಧಾರವಾಡದ ಕಲ್ಯಾಣ ನಗರದಲ್ಲಿನ ಅವರ ಮನೆಯಲ್ಲಿ ಕೂಗಿ ಕರೆದು ಅವರ ಎದೆಗೆ ಗುಂಡಿಕ್ಕಲಾಯಿತು. ಅಕ್ಷರಶಃ ಶರಣರ ತಾತ್ತ್ವಿಕತೆಯ ಹೃದಯಭಾಗವನ್ನು ಛಿದ್ರಿಸುವ ಪಾಶವೀಕೃತ್ಯವಿದು. ತಮ್ಮ ಸ್ಮೃತಿಸಂಪತ್ತಿನ ಮೇಲಿನ ವ್ಯವಸ್ಥಿತವಾದ ದಾಳಿಯಾಗಿರುವ ಇದನ್ನು ಲಿಂಗಾಯತ ಮಠೀಯ ಪರಂಪರೆ ಸಂಘಟನಾತ್ಮಕವಾಗಿ ಖಂಡಿಸಲಿಲ್ಲ ಮತ್ತು ಅದಕ್ಕಾಗಿ ನ್ಯಾಯ ಕೇಳಲಿಲ್ಲ ಎನ್ನುವುದು ಕರ್ನಾಟಕದ ಚರಿತ್ರೆಯಲ್ಲಿ ದಾಖಲಾದ ಕರಾಳ ಅಧ್ಯಾಯ. ಕರ್ನಾಟಕದ ಸಂದರ್ಭದಲ್ಲಿ ಸನಾತನ ಧರ್ಮಕ್ಕೆ ತೀವ್ರ ಎದುರಾಳಿ ಬಸವಣ್ಣ ಎನ್ನುವುದರಲ್ಲಿ ಸಂದೇಹವಿಲ್ಲ.

ನಮ್ಮ ದೇಶದ ಮತೀಯವಾದ ಒಂದು ಬಗೆಯ ಜಾದೂ ಇದ್ದಂತೆ. ಜಾದೂವಿನಲ್ಲಿ ಒಂದನ್ನು ತೋರಿಸಿ ಇನ್ನೊಂದನ್ನು ಕಾಣಿಸಲಾಗುತ್ತದೆ. ಇಲ್ಲಿಯೂ ಹಾಗೆಯೆ. ಮುಸಲ್ಮಾನರನ್ನು ಎದುರಿಗೆ ತೋರಿಸಿ ಆಳದಲ್ಲಿ ದಲಿತರನ್ನು, ಹಿಂದುಳಿದವರನ್ನು ಮತ್ತು ತಮ್ಮ ಸಾಂಸ್ಕೃತಿಕ ರಾಜಕಾರಣಕ್ಕೆ ಎರವಾಗಿರುವ ಲಿಂಗಾಯತರನ್ನು ಗುರಿಯಾಗಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕೊಲೆಗೀಡಾದ ಕಲ್ಬುರ್ಗಿ ಮತ್ತು ಗೌರಿಯರ ಹಿನ್ನೆಲೆ ಲಿಂಗಾಯತರಾಗಿರುವುದು ಕಾಕಾತಾಳೀಯವಲ್ಲ. ಹಾಗಾಗಿ ಇಂಡಿಯಾದ ಮತೀಯ ರಾಜಕಾರಣದ ವೈರಿಗಳು ಮುಸ್ಲಿಮರಾಗಲಿ, ಕ್ರಿಶ್ಚಿಯನ್ನರಾಗಲಿ ಅಲ್ಲ. ಅಖಿಲ ಭಾರತದ ಮಟ್ಟದಲ್ಲಿರುವ ಅಂಬೇಡ್ಕರ್ ಮತ್ತು ಗಾಂಧೀಜಿ ಅನುಯಾಯಿಗಳು, ಕರ್ನಾಟಕದ ಸಂದರ್ಭದಲ್ಲಿ ಬಸವಾನುಯಾಯಿಗಳು.

ಡಾ.ಜಿ.ಎನ್.ಧನಂಜಯ ಮೂರ್ತಿ

ಇವರು ಕನ್ನಡ ಉಪನ್ಯಾಸಕರು, ಲೇಖಕರು ಮತ್ತು ವಿಮರ್ಶಕರಾಗಿದ್ದಾರೆ.

ಇದನ್ನೂ ಓದಿ- ಬಸವಣ್ಣ ಕಳ್ಳನೇ? ಸುಳ್ಳುಗಾರನೇ? ಕೊಲೆಗಾರನೇ?ಇತಿಹಾಸ ಹೇಳುವುದೇನು?

More articles

Latest article

Most read