ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಕ್ರಿಕೆಟ್ ಆವೃತ್ತಿಗೆ ನಿವೃತ್ತಿ ಘೋಷಿಸಿದ್ದಾರೆ. ಮತ್ತು 2027ರ ಐಪಿಎಲ್ ಆವೃತ್ತಿಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮೆಂಟರ್ (ಮಾರ್ಗದರ್ಶಕ) ಆಗಿ ನೇಮಕಗೊಂಡಿದ್ದಾರೆ.
2027ರ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆಗೂ ಮುನ್ನ ಆಟಗಾರನ ಪಯಣಕ್ಕೆ ತೆರೆ ಎಳೆದ ಧೋನಿ, ಸಿಎಸ್ಕೆ ತಂಡದ ಮೆಂಟರ್ ಆಗಿ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
45 ವರ್ಷದ ಧೋನಿ ಅವರು ಫಿಟ್ನೆಸ್ ಮತ್ತು ಕಣಕಾಲು/ಕರುವಿನ (calf) ಗಾಯದ ಸಮಸ್ಯೆಯಿಂದ 2026ರ ಐಪಿಎಲ್ ಆವೃತ್ತಿಯಿಂದ ಹೊರಗುಳಿದಿದ್ದರು. ಕಡೆಯ ಬಾರಿ 2025ರಲ್ಲಿ 14 ಪಂದ್ಯಗಳನ್ನು ಆಡಿದ್ದರು.
2008ರ ಉದ್ಘಾಟನಾ ಆವೃತ್ತಿಯಿಂದ ಸಿಎಸ್ಕೆ ತಂಡವನ್ನು ಪ್ರತಿನಿಧಿಸಿದ್ದ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ತಂಡಕ್ಕೆ 5 ಬಾರಿ ಐಪಿಎಲ್ ಟ್ರೋಫಿ ತಂದುಕೊಟ್ಟಿದ್ದು ದೋನಿ ಅವರ ನಿವೃತ್ತಿ ಘೋಷಣೆ CSK ಅಭಿಮಾನಿಗಳಿಗೆ ಆಘಾತ ಮೂಡಿಸಿದೆ ಧೋನಿ ಅವರು ಆಗಸ್ಟ್ 15, 2020 ರಂದು ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.

