ಲೂಲಾ ಗೆಲುವು ಪ್ರಜಾಪ್ರಭುತ್ವದ ಉಳಿವು

ಮೊನ್ನೆ ನಡೆದ ಬ್ರೆಜಿಲ್‌ ನ ಚುನಾವಣೆಯಲ್ಲಿ ಲೂಲಾ ಡಿ ಸಿಲ್ವಾ 4ನೇ ಬಾರಿ ಗೆದ್ದಿದ್ದು ಅತ್ಯಂತ ಮಹತ್ವದ್ದು. ಇದರಿಂದ ದಕ್ಷಿಣ ಅಮೆರಿಕಾವನ್ನು ತನ್ನ ಹತೋಟಿಗೆ ತೆಗೆದುಕೊಳ್ಳಬೇಕೆಂದು ಹೊರಟಿರುವ ಟ್ರಂಪ್ ನ ಹೊಸ ಸಾಮ್ರಾಜ್ಯಶಾಹಿ ನೀತಿಗೆ ಲೂಲಾ ಬಹುದೊಡ್ಡ ಪೆಟ್ಟು ನೀಡಿದ್ದಾರೆ. (ಈ ಹಿಂದೆ ಟ್ರಂಪ್ ದಕ್ಷಿಣ ಅಮೆರಿಕಾದ ವೆನೆಜುವೆಲಾ ದೇಶದ ಅಧ್ಯಕ್ಷ ಮದುರೋನನ್ನು ಅನೈತಿಕವಾಗಿ ಅಪಹರಿಸಿ ಜೈಲಲ್ಲಿಟ್ಟಿರುವುದನ್ನು ಇಲ್ಲಿ ಗಮನಿಸಬೇಕು).- ವಸಂತ ಕಲಾಲ್‌, JNU

ಸೋವಿಯತ್ ಒಕ್ಕೂಟದ ಪತನದ ನಂತರ ಮತ್ತು ಅಮೆರಿಕದ ಬೆಂಬಲಿತ ಬಲಪಂಥೀಯ ನಾಯಕರ ದಬ್ಬಾಳಿಕೆಯಿಂದ ದಕ್ಷಿಣ ಅಮೆರಿಕದಲ್ಲಿ ಸಮಾಜವಾದ ಹಾಗೂ ಎಡಪಂಥೀಯ ಚಳುವಳಿಗಳು ಗೊಂದಲದಲ್ಲಿದ್ದವು. ಅಂತಹ ಕಠಿಣ ಸಮಯದಲ್ಲಿ ಸಮಾಜವಾದಕ್ಕೆ ಹೊಸ ಆಯಾಮ ನೀಡಿದ್ದು ಲೂಲಾ ಡಿ ಸಿಲ್ವಾ.

ಕಡು ಬಡತನದಲ್ಲಿ ಬೆಳೆದ ಲೂಲಾ ಡಿ ಸಿಲ್ವಾ ಬಾಲ್ಯದಲ್ಲಿ ಬೂಟ್ ಪಾಲಿಶ್ ಮಾಡುತ್ತ ಮತ್ತು ರಸ್ತೆ ಬದಿ ಕಡಲೆ ಮಾರಾಟ ಮಾಡುತ್ತ ಬೆಳೆದರು. ತದನಂತರ ಸಾವೊಪಾಲೊ ನಗರದಲ್ಲಿನ ಲೋಹದ ಕಾರ್ಖಾನೆಯಲ್ಲಿ ಕಾರ್ಮಿಕರಾದರು. ಈ ಕಾರ್ಖಾನೆಯಲ್ಲಿ ಮಷಿನ್ ನ ಅಪಘಾತದಲ್ಲಿ ಅವರು ತಮ್ಮ ಎಡಗೈ ಕಿರುಬೆರಳನ್ನು ಕಳೆದುಕೊಂಡರು. ಇದೇ ಮುಂದೆ ಅವರ ಹೋರಾಟದ ಸಂಕೇತವಾಯಿತು. ನಂತರದಲ್ಲಿ ಕಾರ್ಮಿಕ ಚಳುವಳಿಗೆ ಧುಮುಕಿ ಮೆಟಲ್‌ವರ್ಕರ್ಸ್ ಯೂನಿಯನ್‌ನ ನಾಯಕರಾದರು. ಈ ಕಾರ್ಮಿಕ ಸಂಘಟನೆ ಬ್ರೆಜಿಲ್‌ನ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಐತಿಹಾಸಿಕ ಮುಷ್ಕರಗಳನ್ನು ನಡೆಸಿತು. ಲೂಲಾ 1978-1980 ರ ನಡುವೆ ಮುಷ್ಕರ ನಿಷೇಧವನ್ನು ಧಿಕ್ಕರಿಸಿ ಸುಮಾರು 60000-1,50,000 ಕಾರ್ಮಿಕರನ್ನು ಸೇರಿಸಿ ಮುಷ್ಕರ ಮಾಡಿದರು. ಇದರ ಪರಿಣಾಮ ಇಡಿ ದೇಶದಲ್ಲಿ ಸುಮಾರು 30 ಲಕ್ಷ ಜನ ಕಾರ್ಮಿಕರು ಬ್ರೆಜಿಲ್ ಮಿಲಿಟರಿ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸಿದರು. ಇದೇ ಮುಂದೆ ಮಿಲಿಟರಿ ಸರ್ಕಾರದ ಪತನಕ್ಕೆ ದಾರಿ ಮಾಡಿತು.

1980ರಲ್ಲಿ ಲೂಲಾ ಅವರು ‘ವರ್ಕರ್ಸ್ ಪಾರ್ಟಿ’ (PT) ಸ್ಥಾಪಿಸಿದರು. ಸಹಜವಾಗಿಯೇ ಮಾರ್ಕ್ಸ್‌ವಾದಿ ವಿಚಾರಗಳಿಂದ ಪ್ರಭಾವಿತವಾಗಿದ್ದ ಲೂಲಾ ಪ್ರಾಯೋಗಿಕ (practical) ನಾಯಕರಾಗಿದ್ದರು. ಸತತ ಮೂರು ಅಧ್ಯಕ್ಷೀಯ ಚುನಾವಣೆಗಳಲ್ಲಿ ಸೋತು ನಂತರ ಅಧಿಕಾರಕ್ಕೆ ಬಂದ ಲೂಲಾ 2003ರಿಂದ 2010ರವರೆಗಿನ ತಮ್ಮ ಮೊದಲ ಅವಧಿಯ ಆಡಳಿತದಲ್ಲಿ “ಬೋಲ್ಸಾ ಫ್ಯಾಮಿಲಿಯಾ “ ಯೋಜನೆ ತಂದರು. ಈ ಯೋಜನೆ ಇಂದು ಬ್ರೆಜಿಲ್ ನಲ್ಲಿ ಸುಮಾರು 3 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ. ಅಲ್ಲದೆ ಕನಿಷ್ಠ ವೇತನವನ್ನು ಕೂಡ ಅವರು ಹೆಚ್ಚಿಸಿದರು. ಲೂಲಾ ಮುಕ್ತ ಮಾರುಕಟ್ಟೆಯ ನೀತಿಗಳನ್ನು ನೇರವಾಗಿ ವಿರೋಧಿಸಲಿಲ್ಲ ಬದಲಾಗಿ ಅದರ ಮೂಲಕ ಬಂಡವಾಳವನ್ನು ದೇಶೀಯ ಮಾರುಕಟ್ಟೆ/ಕೈಗಾರಿಕೆಗಳಿಗೆ ಆಹ್ವಾನಿಸಿ, ಅದರಿಂದ ಹರಿದುಬಂದ ಅಪಾರ ಸಂಪತ್ತನ್ನು ನೇರವಾಗಿ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಪರಿವರ್ತಿಸಿದರು. ಈ ಕಾರ್ಯಾಚರಣೆ ಪ್ರಸ್ತುತ ಸಂದರ್ಭದಲ್ಲಿ ಬಹಳ ಮುಖ್ಯ.

ಲೂಲಾ ಗೆಲುವಿನ ಸಂಭ್ರಮಾಚರಣೆ

ಇದರ ಹೊರತಾಗಿ ಲೂಲಾ 1990ರಲ್ಲಿ ಕ್ಯೂಬಾದ ನಾಯಕ ಫಿಡೆಲ್ ಕ್ಯಾಸ್ಟ್ರೋ ಸೇರಿ ‘ಸಾವೊ ಪಾಲೊ ಫೋರಮ್’ ಸ್ಥಾಪಿಸಿದರು. ಇದರ ಮೂಲಕ ದಕ್ಷಿಣ ಅಮೆರಿಕದ ಎಲ್ಲಾ ದೇಶಗಳ 100ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಮತ್ತು ಕಮ್ಯುನಿಸ್ಟ್ ಪಕ್ಷಗಳನ್ನು ಒಂದೇ ವೇದಿಕೆಗೆ ತಂದರು. ಬಂದೂಕು ಹಿಡಿದು ಹೋರಾಡುವ ಬದಲು ಪ್ರಜಾಪ್ರಭುತ್ವ ಮತ್ತು ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬರಲು ಕಮ್ಯುನಿಸ್ಟ್ ಗುಂಪುಗಳಿಗೆ ಲೂಲಾ ಮಾರ್ಗ ಸೂಚಿಸಿದರು. ಅಲ್ಲದೇ ಲೂಲಾ ಅಮೆರಿಕನ್ ಡಾಲರ್ ಪ್ರಾಬಲ್ಯಕ್ಕೆ ಪ್ರತಿಯಾಗಿ ಜಾಗತಿಕ ವ್ಯಾಪಾರದಲ್ಲಿ ಮತ್ತು ‘ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್’ (BRICS ಬ್ಯಾಂಕ್) ಮೂಲಕ ಸ್ಥಳೀಯ ಕರೆನ್ಸಿಗಳಲ್ಲೇ ವ್ಯಾಪಾರ ವಹಿವಾಟು ನಡೆಸಲು ಬಲವಾಗಿ BRICS ಶೃಂಗಸಭೆಗಳಲ್ಲಿ ಪ್ರತಿಪಾದಿಸಿದ್ದಾರೆ ಮತ್ತು ಉತ್ತೇಜಿಸಿದ್ದಾರೆ.

ಇವೆಲ್ಲಾ ಕಾರಣಗಳಿಂದ ಲೂಲಾ ಅಮೆರಿಕಾದ ಸಾಮ್ರಾಜ್ಯಶಾಹಿಗೆ ಪರಮ ಶತ್ರು. ಲೂಲಾ ಸೋಲಿಸಲು ಅಮೆರಿಕ ಬಿಲಿಯನ್ ಡಾಲರ್ ಗಟ್ಟಲೆ ಹಣ ಸುರಿಯಿತು. ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಲೂಲಾ ವಿರುದ್ಧ ಅಭಿಪ್ರಾಯ ರೂಪಿಸಲು ಯತ್ನಿಸಿತು. ಇದರ ಪರಿಣಾಮ ಚುನಾವಣೆಯ ಮೊದಲ ಸುತ್ತಿನಲ್ಲಿ ಲೂಲಾದ ಪ್ರತಿಸ್ಪರ್ಧಿ ಫ್ಲವಿಯೋ ಬೋಲ್ಸನಾರೊ ಗೆ ಅತಿ ಹೆಚ್ಚು ಮತಗಳು ಬಂದಿದ್ದವು. ನಂತರ ವರ್ಕರ್ಸ್ ಪಾರ್ಟಿ ಕಾರ್ಯಕರ್ತರು / ಬ್ರೆಜಿಲ್ ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಕೆಲಸಕ್ಕೆ ರಜೆ ಹಾಕಿ ಒಂದು ತಿಂಗಳ ಕಾಲ ಹಳ್ಳಿ-ನಗರ ಎನ್ನದೆ ತಿರುಗಾಡಿ ಲೂಲಾ ಗೆಲ್ಲಲು ಶ್ರಮಿಸಿದರು ಏಕೆಂದರೆ ಲೂಲಾ ಗೆಲುವು ಪ್ರಜಾಪ್ರಭುತ್ವದ ಉಳಿವಾಗಿತ್ತು. ಅಮೆಜಾನ್ ಕಾಡೀನ ಉಳಿವಿಗಾಗಿ ಅಂತರಾಷ್ಟ್ರೀಯ ಪರಿಸರ ಹೊರಾಟಗಾರ್ತಿ ಗ್ರೇಟಾ ಟ್ಯುನ್ಬರ್ಗ್ ಕೂಡ ಲುಲಾಗೆ ಬೆಂಬಲಿದಳು.

ಹೀಗೆ ಕೊನೆಗೆ ಲೂಲಾ ಯಶಸ್ವಿಯಾದರು.

ವಸಂತ ಕಲಾಲ್
ಸಂಶೋಧನಾ ವಿದ್ಯಾರ್ಥಿ, JNU

ಇದನ್ನೂ ಓದಿ-ಶಾಸ್ತ್ರೀಯ ಸ್ಥಾನಮಾನ: ಬದುಕಿನ ಭಾಷೆ-ಭವಿಷ್ಯದ ದಾರಿ

More articles

Latest article

Most read