ದರ ಹೆಚ್ಚಿಸಲು ಒಪ್ಪದ ಕಾರ್ಖಾನೆಗಳು, 1000 ರೂ. ಪ್ರೋತ್ಸಾಹಧನ ನೀಡಲು ಹಣ ಇಲ್ಲ ಎಂದ ಸಿಎಂ ಡಿ.ಕೆ.ಶಿವಕುಮಾರ್

ಬೆಳಗಾವಿ, ಅ. 27 : ಕಬ್ಬು ಬೆಳೆಗಾರರ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಬೆಳಗಾವಿಗೆ ತೆರಳಿ ಸರಣಿ ಸಭೆಗಳನ್ನು ನಡೆಸಿದರೂ ಸಹ ಬಿಕ್ಕಟ್ಟು ಬಗೆಹರಿಸಲು ಸಾಧ್ಯವಾಗಿಲ್ಲ. ಈ ಮಧ್ಯೆ ಸಭೆಯಲ್ಲಿಯೇ ರೈತ ಸಂಘಟನೆಗಳ ಮಧ್ಯೆ ಮಾರಾಮಾರಿ ನಡೆದರೆ, ಅತ್ತ ಹೊರತೆ ರಸ್ತೆ ತಡೆಯ ಪ್ರತಿಭಟನೆಗಳು ಮುಂದುವರಿದಿದ್ದವು.

ಪ್ರತಿ ಟನ್ ಕಬ್ಬಿಗೆ ಸರ್ಕಾರದ ಪ್ರೋತ್ಸಾಹಧನ ಸೇರಿಸಿ 5,500 ರೂ. ನಿಗದಿ ಮಾಡಬೇಕು, ತೂಕದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು ಆಧುನಿಕ ಯಂತ್ರಗಳ ಅಳವಡಿಕೆಗೆ 500 ಕೋಟಿ ರೂ.ನಿಗದಿ ಮಾಡಬೇಕು, ಸಕ್ಕರೆ ಆಯುಕ್ತರ ನೇಮಕ ಮಾಡಬೇಕು ಎಂಬುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಿತ್ತೂರು ಕರ್ನಾಟಕದ ಕಬ್ಬು ಬೆಳೆಗಾರರು ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿದ್ದಾರೆ.

ರಾಜ್ಯ ಸರ್ಕಾರದಿಂದ ವಿವಿಧ ಸಭೆಗಳು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ನಡೆಸಿದರೂ ರೈತರು ಪಟ್ಟು ಬಿಡದಿರುವುದರಿಂದ ಇಂದು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿದರು.

ರೈತರ ಬೇಡಿಕೆಯಷ್ಟು ದರ ನಿಗದಿ ಮಾಡಲು ಕಾರ್ಖಾನೆಗಳು ಸಹ ಹಿಂದೇಟು ಹಾಕಿದವು. ಕೇಂದ್ರ ಸರ್ಕಾರ ಸಕ್ಕರೆಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಏರಿಕೆ ಆದರೆ ಮಾತ್ರ ಕಬ್ಬು ಖರೀದಿ ದರ ಹೆಚ್ಚಳ ಮಾಡಲು ಸಾಧ್ಯ ಎಂದು ಪಟ್ಟು ಹಿಡಿದರು. ಈ ಮಧ್ಯೆ ಸರ್ಕಾರ ಪ್ರತಿ ಟನ್ ಕಬ್ಬಿಗೆ 1000 ರೂ. ಪ್ರೋತ್ಸಾಹ ಧನ ನೀಡಬೇಕು ಎಂಬ ರೈತರ ಬೇಡಿಕೆ ಸಂಬಂಧ ಸಿಎಂ ಸಹ ಯಾವುದೇ ತೀರ್ಮಾನ ಪ್ರಕಟಿಸಲಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮತ್ತೆ ಮುಂದುವರಿಸಲು ಕಬ್ಬು ಬೆಳೆಗಾರರು ತೀರ್ಮಾನಿಸಿದ್ದಾರೆ.

ಸಭೆಯಲ್ಲಿಯೇ ಬಡಿದಾಟ:

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವ ಸಂಬಂಧ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಚುನ್ನಪ್ಪ ಪೂಜಾರಿ ಮತ್ತು ಕೋಡಿಹಳ್ಳಿ ಚಂದ್ರಶೇಖರ್ ಬಣಗಳ ರೈತರ ಮಧ್ಯೆ ಬಡಿದಾಟ ನಡೆಯಿತು.

ಪ್ರತಿ ಟನ್ ಕಬ್ಬಿಗೆ 5,500 ದರ ನೀಡಬೇಕೆಂಬ ಬೇಡಿಕೆ ಇದೆ. ಆದರೆ ಸಭೆಯಲ್ಲಿ 4,500ಕ್ಕೆ ಒಪ್ಪಿಕೊಳ್ಳುವ ಪ್ರಸ್ತಾಪ ಮುಂದಿಟ್ಟಿರುವ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಮುಖಂಡರು ಆಕ್ಷೇಪಿಸಿದರು.

ಆಗ ಚುನ್ನಪ್ಪ ಪೂಜಾರಿ, ನಾವು ನಿರಂತರ ಹೋರಾಟ ಮಾಡಿಕೊಂಡು ಬಂದು ಸರ್ಕಾರ ಸಭೆ ನಡೆಸುವ ಮಟ್ಟಕ್ಕೆ ಕರೆತಂದಿದ್ದೇವೆ. ಇದರ ಬಗ್ಗೆ ನಿಮಗೆ ಮಾಹಿತಿ ಇಲ್ಲ. ಈಗ ಬಂದು ಸಭೆ ಹಾಳು ಮಾಡಬೇಡಿ ಎಂದರು. ಆಗ ಪರಸ್ಪರ ಗದ್ದಲ ಪ್ರಾರಂಭವಾಯಿತು. ಆರೋಪ-ಪ್ರತ್ಯಾರೋಪಗಳು ಕೇಳಿಬಂದು ಕೆಲವರು ಗಾಜಿನ ಲೋಟಗಳನ್ನು ಎಸೆದಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಘರ್ಷಣೆಯಲ್ಲಿ ತೊಡಗಿದ್ದ ಇಬ್ಬರನ್ನು ಸಭಾಂಗಣದಿಂದ ಹೊರಗೆ ಕರೆದೊಯ್ದರು.

ಆಗ ಚುನ್ನಪ್ಪ ಪೂಜಾರಿ, ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಗಳು 4500 ರೂ. ದರ ನೀಡಬೇಕು. ಸರ್ಕಾರ ಪ್ರತಿ ಟನ್ ಕಬ್ಬಿಗೆ 1000 ರೂ. ಪ್ರೋತ್ಸಾಹಧನ ನೀಡಬೇಕು. ಆಗ ಎರಡೂ ಸೇರಿ 5500 ರೂ. ಆಗುತ್ತದೆ. ಇದು ರೈತರ ಬೇಡಿಕೆ ಎಂದು ಹೇಳಿದರು.

ನಾವು ಯಾರ ಪರವೂ ಇಲ್ಲ:

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ರೈತರ ಸಮಸ್ಯೆ, ಕಾರ್ಖಾನೆ ಸಮಸ್ಯೆಗಳನ್ನು ಆಲಿಸಿದ್ದೇವೆ. ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಪ್ರಗತಿ ಬಗ್ಗೆ ಸಂಸದರು ಹೇಳಿದ್ದಾರೆ. ಎಥನಾಲ್ ಮೊಲಾಸಿಸ್ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ನಮ್ಮ ರಾಜ್ಯದವರೇ ಆದ ಪ್ರಲ್ಹಾದ್ ಜೋಶಿಯವರು ಕೇಂದ್ರ ಸಚಿವರಿದ್ದು ಒತ್ತಡ ಹಾಕೋಣ. ಅವರಿಗೂ ಇಲ್ಲಿನ ಪರಿಸ್ಥಿತಿ ಗೊತ್ತಿದೆ. ಇಲ್ಲಿ ಆರೋಪ ಪ್ರತ್ಯಾರೋಪ ಮಾಡುವುದರಲ್ಲಿ ಅರ್ಥವಿಲ್ಲ. ಕಳೆದ ವರ್ಷ ವಾಹನಗಳಿಗೆ ಬೆಂಕಿ ಹಾಕಲಾಗಿತ್ತು, ಅಂತಹ ಘಟನೆ ಸಂಭವಿಸಬಾರದು ಎಂದರು.‌

ನಾವು ಯಾರ ಪರವೂ ಇಲ್ಲ. ಕಾರ್ಖಾನೆ ಇಲ್ಲವಾದರೆ ರೈತರಿಗೆ ತೊಂದರೆ. ರೈತರಿಲ್ಲ ಎಂದರೆ ಕಾರ್ಖಾನೆಗಳಿಗೆ ತೊಂದರೆ. ಹೀಗಾಗಿ ಎಲ್ಲರ ರಕ್ಷಣೆ ಮಾಡಬೇಕು. ನಾನು ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿದ್ದೆ. ಅವರು ಕೂಡ ನಮ್ಮ ರಾಜ್ಯದ ರೈತರ ವಿಚಾರ ಎಂದು ಈ ಬಗ್ಗೆ ಗಮನ ಹರಿಸಿದ್ದಾರೆ. ಇದು ದೇಶದ ವಿಚಾರವಾಗಿದೆ. ಹೀಗಾಗಿ ಈ ವಿಚಾರದಲ್ಲಿ ರಾಷ್ಟ್ರ ಮಟ್ಟದಲ್ಲಿ ತೀರ್ಮಾನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕೆಲವು ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ತೀರ್ಮಾನ ಮಾಡುತ್ತಾರೆ. ಕಾರ್ಖಾನೆ ಮಾಲೀಕರು ರೈತರನ್ನು ವಿಶ್ವಾಸಕ್ಕೆ ಪಡೆಯಬೇಕು. ಅವರ ಆಕ್ರೋಶಕ್ಕೆ ಅವಕಾಶ ನೀಡಬಾರದು. ರೈತರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸಫಲರಾಗಿಲ್ಲ. ನಿಮಗೆ ಹೊರೆ ಆದರೂ ಒಂದು ಪರಿಹಾರಕ್ಕೆ ಬರುವ ತೀರ್ಮಾನ ಮಾಡಿ ಎಂದು ಸಿಎಂ ಸೂಚಿಸಿದರು.

ಹೀಗೆ ಇಡೀ ದಿನ ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ರೈತರ ಮಧ್ಯೆ ಸಭೆ ನಡೆದರೂ ಸಹ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯ ಅಗಲಿಲ್ಲ. ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಬಿಕ್ಕಟ್ಟು ಮತ್ತೆ ಮುಂದುವರಿದಂತಾಗಿದೆ.

ಹಣ ಎಲ್ಲಿಂದ ನೀಡೋಣ: ಸಿಎಂ ಪ್ರಶ್ನೆ

ಸರ್ಕಾರದ ಹಣಕಾಸಿನ ಪರಿಸ್ಥಿತಿ ನೋಡಿ ಬೇಡಿಕೆ ಇಡಬೇಕು. ಇಂದೇ ಸಿಹಿ ಸುದ್ದಿ ನೀಡಿ ಎಂದರೆ ಎಲ್ಲಿಂದ ಹಣ ನೀಡೋಣ? ಎಂದು ಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ನಾವು ಮಹಾರಾಷ್ಟ್ರ ಸಿಎಂ ಜೊತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಸಮಿತಿ ಮಾಡಿದ್ದು, 29ರಂದು ರಾಜ್ಯಕ್ಕೆ ಬರುತ್ತಿದ್ದಾರೆ. ಕೇಂದ್ರ ಸರ್ಕಾರದ ಸಮಿತಿ ಮುಂದೆ ನಾನು ಬರುತ್ತೇನೆ ನಿಮ್ಮ ಪರವಾಗಿ ನಾನು ಮಾತನಾಡುತ್ತೇನೆ ಎಂದು ಹೇಳಿದರು.

ಸಕ್ಕರೆ ಎಂಎಸ್‌ಪಿ ಹೆಚ್ಚಾಗುವವರೆಗೂ ನಾವು ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ. ಇದು ಆತುರ, ಆವೇಶದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರ ಅಲ್ಲ. ನಿಮ್ಮ ಧ್ವನಿ ನನ್ನ ಧ್ವನಿಯಾಗುತ್ತದೆ. ನಾನು ನಿಮ್ಮ ಪರವಾಗಿದ್ದೇನೆ. ನೀವು ನನ್ನ ಹಾಗೂ ಸರ್ಕಾರದ ಪರಿಸ್ಥಿತಿ ಅರಿಯಬೇಕು. ನಾವು ನಿಮ್ಮ ಪರವಾಗಿ ವಾದ ಮಾಡಲು ಸಿದ್ಧವಿದ್ದೇವೆ. ನಾವು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ತೀರ್ಮಾನಕ್ಕೆ ಬರಬೇಕು ಎಂದು ಹೇಳಿದರು

ನಮ್ಮ ಆರ್ಥಿಕ ಪರಿಸ್ಥಿತಿ ಅರಿಯಬೇಕು. ನಾವು ಕಾರ್ಖಾನೆ ಹಾಗೂ ಕೇಂದ್ರ ಸರ್ಕಾರ ಒಪ್ಪಿಸಿ ಪರಿಹಾರ ನೀಡಲು ಪ್ರಯತ್ನ ಮಾಡುತ್ತಿದ್ದೇವೆ. ಕಳೆದ ವರ್ಷ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಿ 300 ರೂ. ನೀಡಲು ತೀರ್ಮಾನಿಸಿದೆವು.  ನಿಮ್ಮ ಬೇಡಿಕೆ ತಪ್ಪಿಲ್ಲ. ಡೀಸೆಲ್, ರಸಗೊಬ್ಬರ, ಕೀಟ ನಾಶಕ ಬೆಲೆ ಹೆಚ್ಚಾಗಿದೆ. ಸಕ್ಕರೆ ಬೆಲೆ ಏರಿಕೆಯಾಗಿಲ್ಲ. ನಾವು ರಾಜಕಾರಣ ಮಾಡಿ ಜಗಳವಾಡಿದರೆ ಪರಿಹಾರ ಸಿಗಲ್ಲ. ಕಾರ್ಖಾನೆ ಮಾಲೀಕರ ಜೊತೆ ಚರ್ಚೆ ಮಾಡಿದ್ದೇವೆ, ಇನ್ನು ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ರೈತರ ಬದುಕಿನ ಬಗ್ಗೆ ನನಗೆ ಅರಿವಿದೆ. ನಿಮಗೆ ಸಹಾಯ ಮಾಡಬೇಕು ಎಂದು ಜನಪ್ರತಿನಿಧಿಗಳು ಬಂದಿದ್ದಾರೆ. ಕಬ್ಬು ಇಳುವರಿ ಹಾಗೂ ಸಕ್ಕರೆ ಉತ್ಪಾದನೆ ಕುಸಿದಿದೆ. ಎಥನಾಲ್ ಉತ್ಪಾದನೆಗೆ ಕಬ್ಬು ಬಳಸಬಾರದು ಎಂದು ಹೇಳಿದ್ದಾರೆ. ಸಕ್ಕರೆ ಎಂಎಸ್‌ಪಿ ಏರಿಕೆ ಆದರೆ ನಾವು ನೀಡುತ್ತೇವೆ ಎಂದು ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಎಲ್ಲರೂ ಸೇರಿ ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ಅತ್ಯವಿದೆ ಎಂದರು. 

More articles

Latest article

Most read