ಬೆಂಗಳೂರಿನಲ್ಲಿ ಸೋನು ನಿಗಮ್‌ ಗಾಯನ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಕರವೇ ಎಚ್ಚರಿಕೆ

ಬೆಂಗಳೂರು, ಅ.16 :  ಸೋನು ನಿಗಮ್ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಥಣೀಸಂದ್ರ ದಲ್ಲಿರುವ ಭಾರತೀಯ ಮಾಲ್ ಗೆ ಕರವೇ ಮುಖಂಡರು ಭೇಟಿ ನೀಡಿ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಲಿದ್ದಾರೆ.

ಈ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಹೇಳಿಕೆ ನೀಡಿರುವ ಕರವೇ ರಾಜ್ಯಾಧ್ಯಕ್ಷ  ಟಿ.ಎ.ನಾರಾಯಣ ಗೌಡ,  ಗಾಯಕ ಸೋನು ನಿಗಮ್ ಸ್ಪಷ್ಟನೆ ನೀಡುವ ಧಾಟಿಯಲ್ಲಿ ಮತ್ತೆ ತನ್ನ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಕನ್ನಡ ಹಾಡು ಹಾಡಲು ಕೇಳಿದ್ದನ್ನೇ ಪೆಹಲ್ಗಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ್ದಕ್ಕೆ ಯಾವುದೇ ಸಮರ್ಥನೆ ಇರಲು ಸಾಧ್ಯವಿಲ್ಲ. ಕಾರಣ, ಸಂದರ್ಭ ಏನೇ ಇರಲಿ, ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸುವುದು, ಭಯೋತ್ಪಾದಕ ಕೃತ್ಯಗಳಿಗೆ ಒಂದು ಹಾಡಿನ ಬೇಡಿಕೆಯೇ ಕಾರಣ ಎನ್ನುವುದು ನೀಚತನದ ಪರಮಾವಧಿ. ಇದಕ್ಕೆ ಈಗ ಕಾರಣಗಳನ್ನು ಜೋಡಿಸುತ್ತ ಹೋಗುವುದೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ ಎಂದಿದ್ದಾರೆ. 

ಸೋನು ಅವರಿಗೆ ಕನ್ನಡ ಮಣ್ಣಿನ ಋಣವಿದೆ. ಇಲ್ಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸಿದ್ದಾರೆ. ಅದಕ್ಕಿಂತ ಮಿಗಿಲಾಗಿ ಲಕ್ಷಾಂತರ ಜನರ ಬೆಲೆ ಕಟ್ಟಲಾಗದ ಪ್ರೀತಿ ಗಳಿಸಿದ್ದಾರೆ. ಆ ಪ್ರೀತಿಗೆ ದ್ರೋಹ ಎಸಗುವುದು ಎಷ್ಟು ಸರಿ ಎಂಬುದನ್ನು ಅವರು ತಮಗೆ ತಾವೇ ಕೇಳಿಕೊಳ್ಳಲಿ.

ಪೆಹಲ್ಗಮ್ ದಾಳಿಗೂ ಮುನ್ನ ಕರ್ನಾಟಕದ ದಂಪತಿಗಳು ಮಾಡಿರುವ ಒಂದು ವಿಡಿಯೋ ಪೋಸ್ಟ್ ಮಾಡಿ ಸೋನು ನಿಗಮ್ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಆ ದಾಳಿಯ ಭೀಕರತೆ ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಾವೆಲ್ಲರೂ ಕಣ್ಣೀರಿಟ್ಟಿದ್ದೀವಿ. ಆ ದಾಳಿಯ ಭಯಾನಕತೆ ಗೊತ್ತಿರುವ ಕಾರಣಕ್ಕಾಗಿಯೇ ಸೋನು ಅವರ ಹೇಳಿಕೆಯನ್ನು ನಾವೆಲ್ಲರೂ ಅಷ್ಟು ತೀವ್ರವಾಗಿ ವಿರೋಧಿಸಿದ್ದು. ಆ ಕಾರಣಕ್ಕಾಗಿಯೇ ಸೋನು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು. ಈಗ ಅವರು ಪೆಹಲ್ಗಮ್ ದಾಳಿಯಲ್ಲಿ ಅಸು ನೀಗಿದ ಜೀವಗಳನ್ನು ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಿಕೊಳ್ಳುವ ಅಗತ್ಯ ಇರಲಿಲ್ಲ ಎಂದು ಹೇಳಿದ್ದಾರೆ.

ಒಂದು ಭಾಷಾ ಸಮುದಾಯವನ್ನು ಭಯೋತ್ಪಾದಕರಿಗೆ ಹೋಲಿಸಿದ ಸೋನು ನಿಗಮ್ ಮಾಡಬೇಕಾದ, ಮಾಡಬಹುದಾದ ಒಂದೇ ಒಂದು ಕೆಲಸವೇನೆಂದರೆ ತಾನು ಅಪಮಾನಿಸಿದ ಜನರಿಗೆ, ಆ ಮಣ್ಣಿಗೆ ತಲೆಬಾಗಿ ಕ್ಷಮೆ ಕೋರುವುದು ಮತ್ತು ಇನ್ನೆಂದೂ ಇಂಥ ಕೃತ್ಯ ಎಸಗುವುದಿಲ್ಲ ಎಂದು ಪ್ರಮಾಣ ಮಾಡುವುದು. ಅದನ್ನು ಬಿಟ್ಟು ದೇಶಭಕ್ತಿ, ಧರ್ಮ, ಹುತಾತ್ಮ ಜೀವಗಳ ಬೆನ್ನಲ್ಲಿ ಅಡಗಿಕೊಂಡು ಸಮರ್ಥನೆಗೆ ಇಳಿಯುವುದು ನೀಚತನ. ಅದನ್ನು ಯಾರೂ ಕೂಡ ಮಾಡಬಾರದು.

ಸೋನು ನಿಗಮ್ ಒಬ್ಬ ಗಾಯಕರಾಗಿ ನಮಗೆಲ್ಲರಿಗೂ ಇಷ್ಟ. ಅದರಲ್ಲಿ ಎರಡು ಮಾತಿಲ್ಲ. ಕನ್ನಡ ಚಿತ್ರ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಸೋನು ಅವರನ್ನೂ ಕೂಡ ಕನ್ನಡ ಚಿತ್ರರಂಗ ಪೊರೆದಿದೆ. ಒಬ್ಬ ಗಾಯಕನಾಗಿ ಹಾಡುಗಳಿಗೆ ಜೀವ ತುಂಬುವಾಗ ಅವರು ತೋರುವ ಸೂಕ್ಷ್ಮತೆಯನ್ನೇ ಸಾರ್ವಜನಿಕ ನಡವಳಿಕೆ, ಆಡುವ ಮಾತುಗಳಲ್ಲಿ ತೋರಬೇಕು ಅನ್ನುವುದಷ್ಟೇ ನಮ್ಮ ಅಪೇಕ್ಷೆ. ಇದನ್ನು ಅವರು ಬೇಗ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ. 

ಕನ್ನಡಿಗರು ಎಲ್ಲಾ ಅರ್ಥದಲ್ಲೂ ನಿಜವಾದ ದೇಶಭಕ್ತರು. ಸ್ವಾತಂತ್ರ್ಯ ಪೂರ್ವದಲ್ಲಿ, ನಂತರದಲ್ಲಿ ದೇಶಕ್ಕಾಗಿ ನಮ್ಮನ್ನು ನಾವು ತೇಯ್ದುಕೊಂಡಿದ್ದೇವೆ. ಬೇಕಾದಷ್ಟು ಕಳೆದುಕೊಂಡಿದ್ದೇವೆ. ಸೋನು ಅವರಿಗೆ ಬೇಕಿದ್ದರೆ, ಮಾಹಿತಿ ತಲುಪಿಸುತ್ತೇವೆ.

More articles

Latest article

Most read