ಕರ್ನಾಟಕಕ್ಕೆ ಡಾ.ಸುಧಾ ಯಾದವ್ ನೂತನ ರಾಜ್ಯಪಾಲ

ಬೆಂಗಳೂರು : ಕರ್ನಾಟಕದ ನೂತನ ರಾಜ್ಯಪಾಲರಾಗಿ ಹರಿಯಾಣ ಮೂಲದ ಡಾ.ಸುಧಾ ಯಾದವ್ ಅವರನ್ನು ನೇಮಿಸಲಾಗಿದೆ.

ಸದ್ಯ ಹಾಲಿ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹ್ಲೋಟ್ ಅವರು 2021ರ ಜುಲೈ 11ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಗೆಹ್ಲೋಟ್ ಸುಮಾರು 5 ವರ್ಷ 3 ತಿಂಗಳುಗಳ ಕಾಲ ರಾಜ್ಯಪಾಲರಾಗಿ ಅಧಿಕಾರ ನಿರ್ವಹಿಸಿದ್ದು, ಸದ್ಯ ಕೇಂದ್ರ ಸರ್ಕಾರ ಅವರಿಗೆ ಯಾವುದೇ ಹೊಸ ಹುದ್ದೆ ತೋರಿಸಿಲ್ಲ.

ಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ರಾಜ್ಯಪಾಲರ ಜವಾಬ್ದಾರಿ ವಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ್ದಾರೆ.

ವಿ.ಎಸ್. ರಮಾದೇವಿ ಅವರು ಕರ್ನಾಟಕದ ರಾಜ್ಯಪಾಲರಾಗಿ (1999ರ ಡಿಸೆಂಬರ್‌ನಿಂದ 2002ರ ಫೆಬ್ರವರಿ) ಕಾರ್ಯನಿರ್ವಹಿಸಿದ್ದರು. ಅವರನ್ನು ಹೊರತುಪಡಿಸಿದರೆ ಡಾ.ಸುಧಾ ಯಾದವ್ ಅವರು ರಾಜ್ಯದ ಎರಡನೇ ಮಹಿಳಾ ರಾಜ್ಯಪಾಲ ಆಗಲಿದ್ದಾರೆ.

ಕರ್ನಾಟಕದ ಜೊತೆಗೆ ಕೇರಳದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಸಿಕ್ಕಿಂನ ರಾಜ್ಯಪಾಲರಾದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನಿಯೋಜಿಸಲಾಗಿದೆ.

ಒಡಿಶಾದ ರಾಜ್ಯಪಾಲರನ್ನಾಗಿ ಬ್ರಜ್ ಮೋಹನ್ ರಾಮ್ ಅವರನ್ನು ನೇಮಿಸಿದ್ದರೆ, ಡಾ. ಧಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಹಾಗೂ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.

More articles

Latest article

Most read