“ಸೆಂದಿಲ್ ಕೋಟೆ – ಶ್ರೀಗಂಧದ ಕೋಟೆ”

ಕೋಟೆ ಎಂದರೆ ಕೇವಲ ಯುದ್ಧದ ಸಂಕೇತವಲ್ಲ, ಅದು ನಮ್ಮ ಆರ್ಥಿಕ ಇತಿಹಾಸದ ಸಂಕೇತವೂ ಹೌದು. ಸೆಂದಿಲ್ ಕೋಟೆ ಅಥವಾ ಶ್ರೀಗಂಧದ ಕೋಟೆ ನಮ್ಮ ಆರ್ಥಿಕ ಇತಿಹಾಸದ ಜೀವಂತ ಸಾಕ್ಷಿ. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ -ಕೆ ಎಸ್ ಜಯಶಂಕರ್, ಸಮರ್ಪಣ ಟ್ರಸ್ಟ್ , ಶ್ರೀರಂಗ ಪಟ್ಟಣ.

ಮೈಸೂರು ಎಂದರೆ ಅರಮನೆ, ಶ್ರೀರಂಗಪಟ್ಟಣ ಎಂದರೆ ಟಿಪ್ಪು ಕೋಟೆ ಎಂದು ಎಲ್ಲರಿಗೂ ಗೊತ್ತು. ಆದರೆ ಶ್ರೀರಂಗಪಟ್ಟಣದಲ್ಲೇ ಇರುವ ಒಂದು ಚಿಕ್ಕ ಕೋಟೆಯ ಬಗ್ಗೆ ಬಹಳ ಜನಕ್ಕೆ ಗೊತ್ತಿಲ್ಲ. ಅದೇ ಸೆಂದಿಲ್ ಕೋಟೆ. ಇದನ್ನೇ ಹಿಂದಿನ ಕಾಲದಲ್ಲಿ “ಶ್ರೀಗಂಧದ ಕೋಟೆ” ಎಂದು ಕರೆಯುತ್ತಿದ್ದರು.

ಮೈಸೂರು ಗೆಜೆಟಿಯರ್ ಸಂಪುಟ-5, ಪುಟ-242 ರಲ್ಲಿ ಈ ಕೋಟೆಯ ಬಗ್ಗೆ ಸ್ಪಷ್ಟ ಉಲ್ಲೇಖ ಇದೆ. ಗೆಜೆಟಿಯರ್ ಹೇಳುವ ಪ್ರಕಾರ, ಈ ಕೋಟೆ ಶ್ರೀ ರಂಗನಾಥಸ್ವಾಮಿ ದೇವಾಲಯದ ಪೂರ್ವ ದಿಕ್ಕಿನಲ್ಲಿ ಇದೆ. ಇದನ್ನು ಮೊದಲು ವಿಜಯನಗರ ಅರಸರು ಕಟ್ಟಿಸಿದರು. ಆಗ ಇದು ದೇವಾಲಯದ ರಕ್ಷಣಾ ಕೋಟೆಯಾಗಿತ್ತು. ನಂತರ ಮೈಸೂರು ಒಡೆಯರು ಮತ್ತು ಹೈದರ್ ಅಲಿ, ಟಿಪ್ಪು ಸುಲ್ತಾನ್ ಇದನ್ನು ಮತ್ತಷ್ಟು ಬಲಪಡಿಸಿದರು.

ಟಿಪ್ಪು ಸುಲ್ತಾನ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಶ್ರೀಗಂಧವು ಅತ್ಯಂತ ಬೆಲೆಬಾಳುವ ವಸ್ತುವಾಗಿತ್ತು. ಶ್ರೀಗಂಧದ ವ್ಯಾಪಾರ ಸರ್ಕಾರದ ಏಕಸ್ವಾಮ್ಯವಾಗಿತ್ತು. ಅಂದರೆ ರೈತರು ಶ್ರೀಗಂಧದ ಮರವನ್ನು ಕಡಿಯುವಂತಿರಲಿಲ್ಲ, ಮಾರುವಂತಿರಲಿಲ್ಲ. ಎಲ್ಲಾ ಶ್ರೀಗಂಧವನ್ನು ಸಂಸ್ಥಾನವೆ ಖರೀದಿಸುತ್ತಿತ್ತು. ಹೀಗೆ ಸಂಗ್ರಹಿಸಿದ ಸಾವಿರಾರು ಟನ್ ಶ್ರೀಗಂಧದ ದಿಮ್ಮಿಗಳನ್ನು ಎಲ್ಲಿ ಇಡಬೇಕು? ಅದಕ್ಕಾಗಿ ಟಿಪ್ಪು ಈ ಸೆಂದಿಲ್ ಕೋಟೆಯನ್ನು ಆಯ್ಕೆ ಮಾಡಿಕೊಂಡ. ಕೋಟೆಯ ಸುತ್ತ ಎತ್ತರದ ಗೋಡೆ, ಒಳಗೆ ಭದ್ರವಾದ ಕೊಠಡಿಗಳು, ಸೈನಿಕರ ಕಾವಲು ಇತ್ತು. ಆದ್ದರಿಂದ ಇದಕ್ಕೆ “ಶ್ರೀಗಂಧದ ಕೋಟೆ” ಅಥವಾ “ಸ್ಯಾಂಡಲ್ ಕೋಟೆ” ಎಂಬ ಹೆಸರು ಬಂತು. ಇದರ ಜೊತೆಗೆ ಮದ್ದು-ಗುಂಡುಗಳನ್ನು ಇಡುವ ಉಗ್ರಾಣವಾಗಿಯೂ ಇದನ್ನು ಬಳಸುತ್ತಿದ್ದರು.

ಸೆಂದಿಲ್ ಕೋಟೆ

ದಸರಾ ಕುಸ್ತಿಯ ನೆಲೆ

ಈ ಕೋಟೆಯ ಇನ್ನೊಂದು ವಿಶೇಷವೆಂದರೆ ದಸರಾ ಕುಸ್ತಿ. ಮೈಸೂರು ದಸರಾ ಎಂದರೆ ಕೇವಲ ಅರಮನೆಯಲ್ಲಿ ಮಾತ್ರವಲ್ಲ, ಶ್ರೀರಂಗಪಟ್ಟಣದಲ್ಲೂ ದಸರಾ ಆಚರಣೆ ನಡೆಯುತ್ತಿತ್ತು. ಈ ಸೆಂದಿಲ್ ಕೋಟೆಯ ಒಳಗಿನ ಬಯಲಿನಲ್ಲಿ ಪ್ರತಿವರ್ಷ ದಸರಾ ಕುಸ್ತಿ ಪಂದ್ಯಾವಳಿ ನಡೆಯುತ್ತಿತ್ತು. ರಾಜ್ಯದ ನಾನಾ ಭಾಗಗಳಿಂದ ಕುಸ್ತಿಪಟುಗಳು ಇಲ್ಲಿಗೆ ಬಂದು ತಮ್ಮ ಶಕ್ತಿ ಪ್ರದರ್ಶಿಸುತ್ತಿದ್ದರು.ಅಷ್ಟೇ ಅಲ್ಲದೆ ಶ್ರೀರಂಗಪಟ್ಟಣದ ಸ್ತ್ರೀರಂಗನಾಯಕಿ ಸಮಾಜದಿಂದ ಮಹಿಳೆಯರಿಗಾಗಿ ವಿವಿಧ ಕ್ರೀಡೆಗಳನ್ನು ನಡೆಸುತ್ತಿದ್ದು ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಆದರೆ ಕೋಟೆಯ ಸ್ಥಿತಿ ಮಾತ್ರ ಶೋಚನೀಯವಾಗಿದೆ.‌

ಇಂದಿನ ಸ್ಥಿತಿ

2021ರ ನವೆಂಬರ್ ನಲ್ಲಿ ಸುರಿದ ಭಾರೀ ಮಳೆಗೆ ಈ ಐತಿಹಾಸಿಕ ಕೋಟೆಯ ಮೇಲ್ಭಾಗ ಕುಸಿದು ಬಿತ್ತು. ಕೋಟೆಯ ಗೋಡೆಗಳಲ್ಲಿ ದೊಡ್ಡ ಬಿರುಕುಗಳು ಮೂಡಿವೆ. ಪುರಾತತ್ವ ಇಲಾಖೆ ಇಲ್ಲಿ ಕೇವಲ ಒಂದು ನಾಮಫಲಕ ಹಾಕಿ ತನ್ನ ಜವಾಬ್ದಾರಿ ಮುಗಿಸಿದೆ. ಸ್ಥಳೀಯರು ಈ ಕೋಟೆಯನ್ನು ಉಳಿಸಬೇಕು ಎಂದು ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ವಾಸ್ತವವಾಗಿ ಈ ಕೋಟೆ ಆಯತಾಕಾರದಲ್ಲಿದೆ. ಸುಮಾರು 200 ಅಡಿ ಉದ್ದ, 200 ಅಡಿ ಅಗಲ, 15 ಅಡಿ ಎತ್ತರದ ಗೋಡೆಗಳನ್ನು ಹೊಂದಿದೆ. ಸುಣ್ಣ ಮತ್ತು ಕಲ್ಲಿನಿಂದ ಕಟ್ಟಿದ ಈ ಗೋಡೆಗಳು 400 ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿವೆ.

ನಾವು ಉಳಿಸಬೇಕಾದ ಇತಿಹಾಸ

ಮೈಸೂರು ಒಂದು ಕಾಲದಲ್ಲಿ “ಶ್ರೀಗಂಧದ ನಾಡು” ಎಂದು ಕರೆಯಲ್ಪಡುತ್ತಿತ್ತು. ಆ ವೈಭವಕ್ಕೆ ಸಾಕ್ಷಿಯಾಗಿರುವುದು ಈ ಶ್ರೀಗಂಧದ ಕೋಟೆ. ಇಂದು ಮೈಸೂರಿನ ಅರಣ್ಯ ಭವನದಲ್ಲಿ, ಶಿವಮೊಗ್ಗ, ಧಾರವಾಡದಲ್ಲಿ ಶ್ರೀಗಂಧದ ಕೋಟೆಗಳಿವೆ. ಆದರೆ ಅದರ ಮೂಲ ಶ್ರೀರಂಗಪಟ್ಟಣದ ಈ ಸೆಂದಿಲ್ ಕೋಟೆಯೇ.

ಸರ್ಕಾರ ಈ ಕೋಟೆಯನ್ನು ಜೀರ್ಣೋದ್ಧಾರ ಮಾಡಿ, ಇಲ್ಲಿ ಒಂದು ಚಿಕ್ಕ ಶ್ರೀಗಂಧದ ವಸ್ತುಸಂಗ್ರಹಾಲಯ ಮಾಡಿದರೆ, ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರಿಗೆ ಹೊಸ ಇತಿಹಾಸ ಪರಿಚಯಿಸಿದಂತಾಗುತ್ತದೆ. ಶ್ರೀಗಂಧ ಹೇಗೆ ಸಂಗ್ರಹವಾಗುತ್ತಿತ್ತು, ಅದರ ಹರಾಜು ಹೇಗೆ ನಡೆಯುತ್ತಿತ್ತು, ಟಿಪ್ಪು ಕಾಲದ ವ್ಯಾಪಾರ ಹೇಗಿತ್ತು ಎಂಬುದನ್ನು ಜನರಿಗೆ ತಿಳಿಸಬಹುದು.

ಕೋಟೆ ಎಂದರೆ ಕೇವಲ ಯುದ್ಧದ ಸಂಕೇತವಲ್ಲ, ಅದು ನಮ್ಮ ಆರ್ಥಿಕ ಇತಿಹಾಸದ ಸಂಕೇತವೂ ಹೌದು. ಸೆಂದಿಲ್ ಕೋಟೆ ಅಥವಾ ಶ್ರೀಗಂಧದ ಕೋಟೆ ನಮ್ಮ ಆರ್ಥಿಕ ಇತಿಹಾಸದ ಜೀವಂತ ಸಾಕ್ಷಿ. ಅದನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶ್ರೀರಂಗಪಟ್ಟಣದ ಸಮರ್ಪಣ ಟ್ರಸ್ಟ್ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಿದೆ.

ಕೆ ಎಸ್ ಜಯಶಂಕರ್

ಸಮರ್ಪಣ ಟ್ರಸ್ಟ್., ಶ್ರೀರಂಗ ಪಟ್ಟಣ.

ಇದನ್ನೂ ಓದಿ- ಸಿನಿಮಾ | ಜಯ ಜಯ ಜಯ ಜಯ ಹೇ : ಪಿತೃಪ್ರಭುತ್ವಕ್ಕೆ ಜಯಾಳ ‘ಕರಾಟೆ’ ಕಿಕ್!

More articles

Latest article

Most read