ದಕ್ಷಿಣ ಕನ್ನಡವೇ ಹೆಸರು ಬದಲಾಯಿಸಿ ಕನ್ನಡವನ್ನು ಮರೆಮಾಚುವ ಪ್ರಯತ್ನ ಸಹಿಸುವುದಿಲ್ಲ: ರಾಝಿಕ್ ಆತೂರ್

ಮಂಗಳೂರು ಅ.7: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಬದಲಾಯಿಸಿ ಕೇವಲ ‘ಮಂಗಳೂರು ಜಿಲ್ಲೆ’ ಎಂದು ಮರುನಾಮಕರಣ ಮಾಡುವ ಯಾವುದೇ ಪ್ರಯತ್ನವನ್ನು ಕನ್ನಡಿಗರು ಒಪ್ಪುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮುಖಂಡ ರಾಝಿಕ್ ಆತೂರ್ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿನ ಕುರಿತು ಪ್ರತಿಕ್ರಿಯಿಸಿರುವ ಅವರು, “ದಕ್ಷಿಣ ಕನ್ನಡವೇ ಸೂಕ್ತ ಹೆಸರು. ಮಂಗಳೂರು ಎಂದು ಬದಲಾವಣೆ ಮಾಡಿ ಕನ್ನಡವನ್ನು ಮರೆಮಾಚುವ ಯೋಚನೆಯನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆ, ಉಳ್ಳಾಲ ಸೇರಿದಂತೆ ಹಲವು ಪ್ರಮುಖ ನಗರಗಳು ಹಾಗೂ ತಾಲೂಕು ಕೇಂದ್ರಗಳಿವೆ. ಹೀಗಿರುವಾಗ ಕೇವಲ ಮಂಗಳೂರಿನ ಹೆಸರನ್ನೇ ಇಡೀ ಜಿಲ್ಲೆಗೆ ಹೆಸರಾಗಿ ಘೋಷಿಸುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದ್ದಾರೆ.

ದಕ್ಷಿಣ ಕನ್ನಡ ಎಂಬುದು ಬಹುಕಾಲದಿಂದಲೂ ಈ ಪ್ರದೇಶದ ಪ್ರಸಿದ್ಧ ಹಾಗೂ ಐತಿಹಾಸಿಕ ಹೆಸರು. ಆ ಹೆಸರನ್ನು ಬದಲಾಯಿಸುವ ಮೂಲಕ ಕನ್ನಡದ ಹೆಸರನ್ನು ಮರೆಮಾಚುವ ಕೆಲಸವನ್ನು ಕನ್ನಡಿಗರು ಒಪ್ಪಿಕೊಳ್ಳುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಜಿಲ್ಲೆಯ ಹೆಸರಿನ ಬದಲಾವಣೆ ಅದರ ಕನ್ನಡದ ಅಸ್ಮಿತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದ ಎಂದು ರಾಝಿಕ್ ಆತೂರ್ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯ ಹೆಸರಿನ ಬದಲಾವಣೆ ಕೇವಲ ಆಡಳಿತಾತ್ಮಕ ವಿಚಾರವಲ್ಲ. ಅದರ ಹಿಂದೆ ಇರುವ ಸ್ಥಳೀಯ ಇತಿಹಾಸ, ಭಾಷೆ, ಸಂಸ್ಕೃತಿ ಮತ್ತು ಜನರ ಭಾವನೆಗಳನ್ನೂ ಪರಿಗಣಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಕನ್ನಡ ಕರ್ನಾಟಕದ ಅವಿಭಾಜ್ಯ ಅಂಗ. ದಕ್ಷಿಣ ಕನ್ನಡವನ್ನು ಕಿತ್ತು ಕೇವಲ ಮಂಗಳೂರು ಎಂಬ ಹೆಸರನ್ನು ಮುನ್ನೆಲೆಗೆ ತರುವುದರಿಂದ ನಮ್ಮ ಜಿಲ್ಲೆಯ ಕನ್ನಡದ ಅಸ್ಮಿತೆ ಸಡಿಲವಾಗುವ ಅಪಾಯವಿದೆ. ಇದು ಒಂದು ರೀತಿಯ ಭಾವನಾತ್ಮಕ ರಾಜಕೀಯ. ಇದನ್ನು ಅರ್ಥ ಮಾಡಿಕೊಳ್ಳಲಾಗದಷ್ಟು ದಡ್ಡರು ಇಲ್ಲಿ ಯಾರೂ ಇಲ್ಲ ಎಂದು ರಾಝಿಕ್ ಆತೂರ್ ಹೇಳಿದ್ದಾರೆ.

ಜಿಲ್ಲೆಯ ಹೆಸರಿನ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ದಕ್ಷಿಣ ಕನ್ನಡದ ಜನರ ಅಭಿಪ್ರಾಯ, ಜಿಲ್ಲೆಯ ಇತಿಹಾಸ ಮತ್ತು ಕನ್ನಡದ ಅಸ್ಮಿತೆಯನ್ನು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

More articles

Latest article

Most read