ಮನುವಾದದ ಮೇಲಾಟಕ್ಕೆ ಶೂದ್ರರೇ ಪೋಷಕರಾದರೇ?

ಎಲ್ಲಾ ಚಳುವಳಿಗಳಲ್ಲೂ ಹೋರಾಟಗಳಲ್ಲೂ ಲಾಭ ಬಡುಕರು, ಸಮಯ ಸಾಧಕರು, ವಂಚಕರು ಇದ್ದೇ  ಇರುತ್ತಾರೆ. ದಲಿತ ಹೋರಾಟ ಇದಕ್ಕೇನು ಹೊರತಲ್ಲ. ಇವತ್ತಿನ ಫ್ಯಾಸಿಸ್ಟ್ ವಿಜೃಂಭಣೆಯ ಯುಗದಲ್ಲಿ ವ್ಯವಸ್ಥಿತವಾಗಿ ಅಂಬೇಡ್ಕರರನ್ನು ಮತ್ತು ದಲಿತ ಚಳುವಳಿಯ ನೀಲಿ ಶಾಲನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲಾಗುತ್ತಿದೆ.ಆದರೆ ಸಮಾಜದಲ್ಲಿ ದಲಿತ ಶೂದ್ರ ಸ್ವಾಭಿಮಾನದ ಪ್ರಜ್ಞೆ ಅಳಿದರೆ ಫ್ಯಾಸಿಸ್ಟ್ ವಿಜೃಂಭಣೆಯ  ಹಾದಿ ಸುಗಮ . ಈ ಅಪಾಯದ  ಅರಿವಿರಲಿ – ಶಂಕರ್‌ ಸೂರ್ನಳ್ಳಿ, ಬರಹಗಾರರು.

ಪುರೋಹಿತಶಾಹಿತ್ವ ಕೇವಲ ಬ್ರಾಹ್ಮಣರ ಕಾಪಿರೈಟಷ್ಟೇ  ಅಲ್ಲ. ಜಗತ್ತಿನ  ಎಲ್ಲಾ ಧರ್ಮಗಳಲ್ಲೂ  ಕೂಡ ಇದು ಹಾಸು ಹೊಕ್ಕಾಗಿದೆ. ಧಾರ್ಮಿಕತೆಯ ಮತ್ತು  ನಂಬಿಕೆಗಳ ಹೆಸರಲ್ಲಿ  ಪ್ರಭುತ್ವವನ್ನೇ ಅಂಕೆಯಲ್ಲಿಟ್ಟುಕೊಂಡು ಆಡಿಸುವ ಸಾಮರ್ಥ್ಯ ಈ ಪುರೋಹಿತ ವರ್ಗಕ್ಕಿದೆ. ರಾಜರುಗಳು  ಹೋರಾಟಗಾರರಂತೆ ಬೆವರು ಅಥವಾ ರಕ್ತ ಸುರಿಸದೇ ಶ್ರಮರಹಿತವಾಗಿ ಕಾರ್ಯಸಾಧನೆ ಮಾಡಿಕೊಳ್ಳುವ ಚಾಲಾಕಿತನ ಇವರಲ್ಲಿದೆ. ಇದು ಧರ್ಮ ದೇಶ ಕಾಲಗಳಿಗೂ ಮೀರಿದಂತದ್ದು. ಪ್ರಭುತ್ವ ಬದಲಾದರೂ ಇವರ ಹಿಡಿತ ಮತ್ತು ಕಣ್ಗಾವಲಿಗೇನು ಧಕ್ಕೆಯಿರದು. ಇಂತಹ ಪುರೋಹಿತಶಾಹಿತ್ವದ ಆಟಾಟೋಪಗಳ ಸಹಸ್ರಾರು ಕಥನಗಳು ಜಗತ್ತಿನ ಇತಿಹಾಸದಲ್ಲೇ ದಾಖಲಾಗಿವೆ.   ಅಂತಹ  ಒಂದು ಪುರೋಹಿತಶಾಹಿತನದ ದೇಸೀ  ಕವಲೇ ಈ ಮನುವಾದ.

ಕೇವಲ ಮನುಸ್ಮೃತಿಯಷ್ಟೇ ಅಲ್ಲ ಗೀತೆ, ರಾಮಾಯಣ, ಮಹಾ ಭಾರತದಂತಹ  ಅನೇಕ ವೈದಿಕ ಶಾಸ್ತ್ರ  ಪುರಾಣ ಗ್ರಂಥಗಳಲ್ಲೂ ಕೂಡ ಸಮಾಜದಲ್ಲಿ ದುಡಿಯುವ ತಳವರ್ಗ ಹೇಗಿರಬೇಕು, ಸ್ತ್ರೀಯರು ಹೇಗಿರಬೇಕು, ಇವರುಗಳೆಲ್ಲ ಪಾಲಿಸಬೇಕಾದಂತಹ ಕಟ್ಟುಪಾಡುಗಳೇನು, ಶಾಸ್ತ್ರ ತಪ್ಪಿದರೆ ಕೊಡಲಾಗುವಂತಹ ಶಿಕ್ಷೆಗಳೇನು, ರಾಜ ಧರ್ಮಗಳೇನು, ರಾಜನ ಧರ್ಮನಿಷ್ಠೆಯ  ರೀತಿ ರಿವಾಜುಗಳು ಹೇಗಿರಬೇಕು ಎಂಬುದನ್ನೆಲ್ಲ ಪ್ರಶ್ನಾತೀತವಾದ ದೇವರ ಆದೇಶ ಎಂಬಂತೆ ಶಾಸ್ತ್ರಗಳಲ್ಲಿ ಬಿತ್ತರಿಸಲಾಗಿದೆ 

ಮನುವಾದೀ ಮನಸ್ಥಿತಿಯ ಪುರೋಹಿತ ವರ್ಗದವರು ಮುಖ್ಯವಾಗಿ ದುಡಿಯುವ ತಳವರ್ಗದವರು ಮತ್ತು ಸ್ತ್ರೀಯರು ಶಾಸ್ತ್ರಗಳ ದೃಷ್ಟಿಯಿಂದ ಹದ್ದು ಮೀರಿ ನಡೆಯುವುದನ್ನು ಯಾವತ್ತೂ ಸಹಿಸರು. ಅದೇ ರೀತಿ,  ಅಂತಹದ್ದನ್ನು ಪ್ರಚೋದಿಸುವ ಸಮಾಜದಲ್ಲಿನ ಸಮಾಜಮುಖಿ ಚಿಂತನೆಯ ಬೆಳವಣಿಗೆ ಮತ್ತು ಅಂತಹದ್ದನ್ನ ಪ್ರತಿಪಾದಿಸುವವರು ಕೂಡ ಅವರಿಗೆ ಅಪಥ್ಯ.  ಈ ಕಾರಣಕ್ಕೆ ಪ್ರಶ್ನಿಸುವ ಮತ್ತು ಲೋಕ ಜ್ಞಾನ ಗಳಿಸಿಕೊಂಡರೆ ಮುಂದೆ ತಮಗೇ  ಕೇಡು ಎಂಬ ಅರಿವಿನ  ಕಾರಣಕ್ಕೆ  ವಿದ್ಯೆಯ ಸಾರ್ವತ್ರೀಕರಣಕ್ಕೆ ಸದಾ  ವಿರೋಧ ಇವರದ್ದು.  ಮುನ್ನೂರು ವರ್ಷ ಆಳಿದ್ದ ಮೊಗಲರ ವಿರುದ್ಧ ತಕರಾರು ಎತ್ತದ ಇವರು ವಿದ್ಯೆಯ ಸಾರ್ವತ್ರೀಕರಣ ಮತ್ತು ಮನು ತತ್ವಕ್ಕೆ ವಿರುದ್ಧವಾಗಿ  ಸ್ತ್ರೀ -ಶೂದ್ರ  ವರ್ಗವನ್ನು  ಸರ್ವ ಸಮಾನವಾಗಿ ನೋಡ ಹೊರಟ ಮತ್ತು ಸತಿಯಂತಹ ಸಂಪ್ರದಾಯಗಳಿಗೆ ಮೂಗು ತೂರಿಸಿದ ಇಂಗ್ಲಿಷರ ವಿರುದ್ಧ ಅನಿವಾರ್ಯವಾಗಿ ತೊಡೆ ತಟ್ಟಲೇಬೇಕಾಗಿ ಬಂತು.

ಭಾರತದಲ್ಲಿ ಮುಖ್ಯವಾಗಿ ಸ್ತ್ರೀ, ದಲಿತ ಮತ್ತು ಶೂದ್ರ ಸಮುದಾಯಗಳೇ ಮನುವಾದದ ಮೂಲ ಬಲಿಪಶುಗಳಾಗಿವೆ. ವಿದ್ಯೆ,  ಸ್ತ್ರೀ ಅಸಮಾನತೆಗಳ ಬಗ್ಗೆ ಮಾತನಾಡಿದರೆ ವೇದ ಕಾಲದ ಗಾರ್ಗಿ ಮೈತ್ರೇಯಿಯರ ಬಗ್ಗೆ ಮಾತನಾಡುತ್ತಾರೆ.  ವ್ಯಾಸ, ಜಾಬಾಲಾದಿಗಳ ಬಗ್ಗೆ ಉದಾಹರಿಸುತ್ತಾರೆ. ಆದರೆ  ಇಂತವೆಲ್ಲ ಕೆಲ ನಿರ್ದಿಷ್ಟ ಕಾಲಮಾನದ ಅಥವಾ ಕೆಲ ಅಪವಾದಯುಕ್ತ ಸಾಂದರ್ಭಿಕ ನಿದರ್ಶನಗಳಿರಬಹುದೇ ವಿನಃ ಅದುವೇ ಸಾರ್ವಕಾಲಿಕವಾದುದಲ್ಲ. ಉದಾಹರಣೆಗೆ ಸಂತ ಕವಿ ಶರೀಫ ಸಾಹೇಬರ ಗುರುಗಳು ಗೋವಿಂದ ಭಟ್ಟರೆಂದ ಮಾತ್ರಕ್ಕೆ ಬ್ರಾಹ್ಮಣರೆಲ್ಲರೂ ಸಾಬರನ್ನು ಕರೆದು ಕರೆದು ತಮ್ಮ ಶಿಷ್ಯರಾಗಿಸಿಕೊಳ್ಳುತ್ತಿದ್ದರು ಎಂದೇನು ಅಲ್ಲ ತಾನೇ.

ವಿದ್ಯೆ ಮತ್ತು ಸಭ್ಯ ನಾಗರೀಕತೆಗೆ ಅಂದೇ ಹೆಸರಾಗಿದ್ದ ಮಂಗಳೂರಿನಲ್ಲೇ ದಲಿತ ವರ್ಗಕ್ಕೆ ವಿದ್ಯೆ ದೊರಕಿಸಿಕೊಡಲು ಕುದ್ಮುಲ್ ರಂಗರಾಯರು ಪಟ್ಟ ಪಾಡು ಅವಮಾನಗಳಿಗೆಲ್ಲ ದಾಖಲೆಗಳಿವೆ.  ರಾಯರು ನಡೆಸುವ ದಲಿತರ ಶಾಲೆಯ ಬಾಗಿಲಿಗೆ ಮಲವನ್ನು  ತಂದು ಮೆತ್ತುತ್ತಿದ್ದರಂತೆ,  ಗೌರವಸ್ಥ ರಾಯರು ಬೀದಿಯಲ್ಲಿ ಹೋಗುವಾಗ ಕೆರೆಂಗ್ ರಾಯರೆಂದು ಕರೆದು ಅವರನ್ನು ಅವಮಾನಿಸಲಾಗುತ್ತಿತ್ತು. ದಲಿತರ ಒಡನಾಟದ ಕಾರಣಕ್ಕೆ ಅವರ ಮಕ್ಕಳ ಮದುವೆಗೂ ಮುಂದೆ ಸಮಸ್ಯೆ ಎದುರಾಯಿತು. ಇಂತಹುದೇ  ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಫುಲೆ ದಂಪತಿಗಳೂ ಕೂಡ ಸಮಾಜದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಬೇಕಾಗಿ ಬಂತು.  

ಸ್ತ್ರೀ, ಶೂದ್ರ,  ದಲಿತ ಸಮುದಾಯಗಳಿಗೆ ವಿದ್ಯೆ  ಮತ್ತು ಸಮಾನತೆಯ ನಿರಾಕರಣೆಗೆ ಲೆಕ್ಕವಿಲ್ಲದಷ್ಟು ಐತಿಹಾಸಿಕ (ಕಾಲ್ಪನಿಕ ಪುರಾಣ ಕಥೆಗಳಲ್ಲ) ನಿದರ್ಶನಗಳು ನಮ್ಮ ಮುಂದಿವೆ. ವೈದಿಕರ ದೃಷ್ಟಿಯಲ್ಲಿ ಈಳವ ಶಿವನನ್ನು ಪ್ರತಿಷ್ಠಾಪಿಸಿದ ನಾರಾಯಣ ಗುರುಗಳ ಚರಿತ್ರೆ,  ಸಂತ ಕನಕ ದಾಸ, ಸಂತ ರವಿದಾಸರಂತವರ  ಚರಿತ್ರೆ,  ನಮ್ಮ ಸಮಾಜದಲ್ಲಿನ ತಾರತಮ್ಯ ಬೇಧಗಳ ಬಗ್ಗೆ ಸಾಕಷ್ಟು ಹೇಳುತ್ತವೆ.

ಅವನ್ನೆಲ್ಲ ಬದಿಗಿಟ್ಟು ನಮ್ಮ ಸುತ್ತ ಮುತ್ತ ಇವತ್ತಿನ ಆಧುನಿಕ AI ಟೆಕ್ನಾಲಜಿ ಯುಗದಲ್ಲೇ ಚೂರು ಕಣ್ಣು ಹಾಯಿಸಿದರೂ ಕೂಡ, ಮೊನ್ನೆ ವಾರದ ಹಿಂದೆ ಚಾಮರಾಜ ನಗರದ ಕೆಬ್ಬೆಪುರ ಎಂಬಲ್ಲಿ ಅಲ್ಲಿನ  ಬಂಡಿ ಮೆರವಣಿಗೆಯ ಅಂಗವಾಗಿ ಅಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಾರ್ವಜನಿಕ ಅನ್ನ  ಸಂತರ್ಪಣೆಯಲ್ಲಿ ಹತ್ತಿರದ ಸರಕಾರಿ  ಹಿರಿಯ ಶಾಲಾ ಮಕ್ಕಳನ್ನೂ ಸಹ ಊಟಕ್ಕೆ ಕರೆಯಲಾಗಿತ್ತು.  ಆದರೆ ಅಲ್ಲಿ ಎಲ್ಲರೊಂದಿಗೆ ಊಟಕ್ಕೆ ಕುಳಿತಿದ್ದ ಮಕ್ಕಳನ್ನು ಕೇವಲ ದಲಿತರು ಎನ್ನುವ ಕಾರಣಕ್ಕೆ ಎಬ್ಬಿಸಿ ಕಳಿಸಲಾಗಿತ್ತು. ದೊಡ್ಡವರು ಬಿಡಿ ರಾಜಕೀಯ ಮಾತನಾಡುತ್ತಾರೆ. ಆದರೆ, ಮಕ್ಕಳೆಂದರೆ ದೇವರ ಸಮಾನ. ಅಂತಹ ಮುಗ್ಧ ಮಕ್ಕಳನ್ನೇ ಜಾತಿಯ ಕಾರಣಕ್ಕೆ  ಎಬ್ಬಿಸಿ ಹೊರ ಕಳಿಸಿದ ಈ ಘಟನೆ ಕ್ರಿಸ್ತ ಪೂರ್ವ ಐದನೇ ಶತಮಾನದ್ದಲ್ಲ ಮೊನ್ನೆ ಮೊನ್ನೆಯದೆಂದರೆ ಯಾರು ನಾಚಿಕೆಪಡಬೇಕು?.

ದಲಿತ ಮದುಮಗ  ಕುದುರೆ ಏರಿದರೆ ಹಲ್ಲೆ, ಮೀಸೆ ಬಿಟ್ಟರೆ ಕೊಲೆ, ಇಂತವನ್ನೆಲ್ಲ ನೋಡಿದಾಗ ಇದರ ಹಿಂದೆ ಇದ್ದು ಆಟ ಆಡುತ್ತಿರುವ ಬ್ರಾಹ್ಮಣ್ಯ ಅರ್ಥಾತ್ ಮನುಸಿದ್ಧಾಂತದ ವಿರುದ್ಧ ಸಿಡಿದೇಳುವುದು ವಿರೋಧದ ಧನಿ  ಎತ್ತುವುದು ತಪ್ಪೇ? ಸಮಾನತೆಗೆ ವಿರುದ್ಧವಾಗಿ ತಳ  ಸಮುದಾಯವನ್ನು ಅನ್ಯ ಧರ್ಮೀಯರ ವಿರುದ್ಧ ಎತ್ತಿ ಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಮನುವಾದಿ ಕುತಂತ್ರಗಾರಿಕೆಯ ಬಗ್ಗೆ ಶೂದ್ರ  ದಲಿತ ಸಮುದಾಯದ ನಾಯಕರುಗಳಿಗೆ ತಿಳಿದಿಲ್ಲವೆಂದೇನಿಲ್ಲ.  ಆದರೆ, ತಮ್ಮ ರಾಜಕೀಯ ಅಸ್ತಿತ್ವದ ದುರಾಲೋಚನೆಯ ಕಾರಣಕ್ಕೆ ಬ್ರಾಹ್ಮಣ್ಯದ ಅಡಿಯಾಳಾಗಿ ವರ್ತಿಸುವ  ಇಂತವರುಗಳಿಗೆ ತಿಳಿಹೇಳೋದು ಸುಲಭದ ಮಾತಲ್ಲ.

ಎಲ್ಲಾ ಚಳುವಳಿಗಳಲ್ಲೂ ಹೋರಾಟಗಳಲ್ಲೂ ಲಾಭ ಬಡುಕರು, ಸಮಯ ಸಾಧಕರು, ವಂಚಕರು ಇದ್ದೇ  ಇರುತ್ತಾರೆ. ದಲಿತ ಹೋರಾಟ ಇದಕ್ಕೇನು  ಹೊರತಲ್ಲ. ಇವತ್ತಿನ ಫ್ಯಾಸಿಸ್ಟ್ ವಿಜೃಂಭಣೆಯ ಯುಗದಲ್ಲಿ ವ್ಯವಸ್ಥಿತವಾಗಿ ಅಂಬೇಡ್ಕರರನ್ನು ಮತ್ತು ದಲಿತ ಚಳುವಳಿಯ ನೀಲಿ ಶಾಲನ್ನು ಉದ್ದೇಶಪೂರ್ವಕವಾಗಿ (ಮನುವಾದಿಗಳ ಮುನ್ನುಗ್ಗುವಿಕೆಗೆ ಬಹಳಷ್ಟು ತೊಡಕಾಗಿರುವವರೆಂಬ ಕಾರಣಕ್ಕೆ) ಅವಮಾನಿಸಲಾಗುತ್ತಿದೆ.   ಇಂದಿನ ದಲಿತ ಚಳುವಳಿ ಕಡಿದು ಕಟ್ಟೆ  ಹಾಕುವಂತದ್ದು ಏನಿದೆಯೋ ಅದು ಬೇರೆ ವಿಚಾರ. ಆದರೆ ಸಮಾಜದಲ್ಲಿ ದಲಿತ ಶೂದ್ರ ಸ್ವಾಭಿಮಾನದ ಪ್ರಜ್ಞೆ ಅಳಿದರೆ ಫ್ಯಾಸಿಸ್ಟ್ ವಿಜೃಂಭಣೆಯ  ಹಾದಿ ಸುಗಮ ಈ ಅಪಾಯದ  ಅರಿವಿರಲಿ.

 ಶಂಕರ್ ಸೂರ್ನಳ್ಳಿ

ಬರಹಗಾರರು

More articles

Latest article

Most read