ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಓರ್ವ ಕಾರ್ಮಿಕ ಸಾವು

ಮಂಗಳೂರು ಸೆ.30 : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಆವರಣದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದಭೀಕರ ಸ್ಫೋಟದ ಪರಿಣಾಮ ಓರ್ವ ಗುತ್ತಿಗೆ ನೌಕರ ಸಾವನ್ನಪ್ಪಿದ್ದು, ಇನ್ನೋರ್ವ ಸಿಬ್ಬಂದಿಗೆ ಸುಟ್ಟ ಗಾಯವಾಗಿದ್ದು, ಇತರೆ 8 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಎಂಆರ್ಪಿಎಲ್ ನಲ್ಲಿ ಸ್ಫೋಟ ಸಂಭವಿಸಿರುವುದನ್ನು ಎಂಆರ್‌ಪಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ  ರುಡಾಲ್ಫ್ ನೊರೊನ್ಹಾ ಅವರು  ಖಚಿತಪಡಿಸಿದ್ದಾರೆ.

ಎಂಆರ್ಪಿಎಲ್ ಸಿಹೆಚ್‌ಟಿ ಘಟಕದಲ್ಲಿ ಸ್ಫೋಟದ ಬಳಿಕ ಬೆಂಕಿ ಕಾಣಿಸಿಕೊಂಡಿತ್ತು, ಸದ್ಯ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲ್ಕಿ ಮೂಲದ ಯುವಕನೊಬ್ಬ  ಮೃತಪಟ್ಟಿದ್ದಾನೆ.  ಸ್ಫೋಟದ ಬಳಿಕ ನಾಪತ್ತೆಯಾಗಿದ್ದ ಮನೀಶ್ ಕರ್ಕೇರ (ಅಂದಾಜು 30 ವರ್ಷ) ಅವರ ಮೃತದೇಹವು ಘಟನಾ ಸ್ಥಳದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ಅಲ್ಲದೆ, ಘಟನೆಯಲ್ಲಿ ಶೇ.35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಜೇಶ್ ಬ್ಯಾಪ್ಟಿಸ್ಟ್ ಅವರು ಶ್ರೀನಿವಾಸ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಫೋಟದ ತೀವ್ರತೆಯಿಂದ ಗಾಯಗೊಂಡಿರುವ ಇತರ 8 ಮಂದಿ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಕಮಿಷನರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

More articles

Latest article

Most read