ಬೆಂಗಳೂರು: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ‘ಕನ್ನಡ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಜನಪ್ರಿಯ ಡ್ರಮ್ಮರ್ ದೇವ ಅವರು ನಿಧನರಾಗಿದ್ದಾರೆ.
ದೇವ ಅವರು, ಆರ್.ಆರ್. ನಗರದ ಸ್ಕಂದಶ್ರೀ ಅಪಾರ್ಟ್ಮೆಂಟ್ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಓರ್ವ ಪುತ್ರ ಹಾಗೂ ಪುತ್ರಿ ಇದ್ದಾರೆ.
ಸ್ಯಾಂಡಲ್ವುಡ್ ಸೇರಿದಂತೆ ಹಲವು ವೇದಿಕೆಗಳಲ್ಲಿ ತಮ್ಮದೇ ವಿಭಿನ್ನ ಬೀಟ್ ಶೈಲಿ, ಹಾಗೂ ಅದ್ಭುತ ಪ್ರದರ್ಶನದ ಮೂಲಕ ಸಂಗೀತ ಪ್ರಿಯರ ಮನಗೆದ್ದಿದ್ದ ದೇವ ಅವರು ಐಪಿಎಲ್ ನಲ್ಲಿ
ಆರ್ಸಿಬಿ ಪಂದ್ಯಾವಳಿಗಳ ಸಮಯದಲ್ಲಿ ಕ್ರೀಡಾಂಗಣದಲ್ಲಿ ಲೈವ್ ಬೀಟ್ ಪ್ರದರ್ಶನ ನೀಡುತ್ತಾ ಕ್ರೀಡಾಭಿಮಾನಿಗಳ ಮನಗೆದ್ದಿದ್ದರು.
ನಾಲ್ಕು ತಿಂಗಳ ಹಿಂದೆ ದೇವ ಅವರಿಗೆ ಪಾರ್ಶ್ವವಾಯು ಸಂಭವಿಸಿತ್ತು. ತದನಂತರ ದೇವ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಗ್ಯಾಂಗ್ರಿನ್ ಸಮಸ್ಯೆಯಿಂದ ಅವರ ಬಲಗಾಲನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ

