ತುಳು  ಭಾಷೆ: ಚಾರಿತ್ರಿಕ ಹಿನ್ನೆಲೆ ಮತ್ತು ಜನ ಬಳಕೆಯಲ್ಲಿ ತುಳು |ಭಾಗ-3

ತುಳು ರಂಗಭೂಮಿ ಮತ್ತು ಸಿನಿಮಾ

1970ರಲ್ಲಿ ಆರಂಭಗೊಂಡ ತುಳು ಸಿನಿಮಾ (ಎನ್ನತಂಗಡಿ -1970) ರಂಗದಲ್ಲಿ ಈವರೆಗೆ ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳು ನಿರ್ಮಾಣಗೊಂಡು ಪ್ರದರ್ಶನ ಕಂಡಿವೆ. ಅನೇಕ ತುಳು ಚಿತ್ರಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ  ಭಾಗವಹಿಸಿ ಪ್ರಶಸ್ತಿ ಗಳಿಸಿವೆ.

ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ 1910 ರಲ್ಲಿ ತುಳು ನಾಟಕ ಸಂಘ ಆರಂಭಗೊಂಡಿತು. ಸ್ವಾತಂತ್ರ್ಯ ಚಳುವಳಿಯ ಹಾಗೂ ಸಮಾಜ ಸುಧಾರಣೆಯ ಜಾಗೃತಿಯನ್ನು ನಾಟಕಗಳ ಮೂಲಕ ಪ್ರದರ್ಶನ ಮಾಡಿ ಮುಂದಕ್ಕೆ ಕರಾವಳಿಯಾದ್ಯಂತ ಅಸಂಖ್ಯಾತ ನಾಟಕ ತಂಡಗಳ ಹಾಗೂ ನಾಟಕ ಪ್ರದರ್ಶನಕ್ಕೆ ಕಾರಣವಾಯಿತು. ಮಾಧವ ತಿಂಗಳಾಯರ ಜನಮರ್ಲ್‌ (1933) ತುಳು ಭಾಷೆಯಲ್ಲಿ ಪ್ರಕಟಗೊಂಡ ಮೊದಲ ನಾಟಕ ಕೃತಿ. 1910 ರಲ್ಲಿ ಮಂಗಳೂರಿನ  ಹೊಯಿಗೆ ಬಜಾರ್‌ ಗ್ರಾಮದಲ್ಲಿ ಮಹಾಲಿಂಗ ತಿಂಗಳಾಯರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿದ್ದ ‘ತುಳು ಕರ್ನಾಟಕ ಶ್ರೀ ಜ್ಞಾನೋದಯ ಸಮಾಜ’ ತನ್ನ ಸಾಮಾಜಿಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿಸಲು ತುಳು ಜನಜಾಗೃತಿಯ ಸಂದೇಶದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ತುಳು ನಾಟಕದ ಅಭಿರುಚಿಯನ್ನು ಹುಟ್ಟುಹಾಕಿತ್ತು. 1950 ರ ದಶಕದಲ್ಲೆ ವೃತ್ತಿಪರ ತುಳು ನಾಟಕ ತಂಡ ಕೆಮ್ತೂರು ದೊಡ್ಡಣ್ಣ ಶೆಟ್ಟಿಯವರ ನೇತೃತ್ವದಲ್ಲಿ ಆರಂಭಗೊಂಡಿತ್ತು. ಸದಾನಂದ ಸುವರ್ಣ ಅವರು ನಿರ್ಮಿಸಿದ ಗುಡ್ಡೆದ ಭೂತ ತುಳು ಧಾರವಾಹಿಯು ಬೆಂಗಳೂರು ದೂರದರ್ಶನದಲ್ಲಿ  13 ಕಂತುಗಳಲ್ಲಿ ಪ್ರದರ್ಶನಗೊಂಡು  ಭಾರೀ ಜನಮನ್ನಣೆಗೆ ಪಾತ್ರವಾಗಿತ್ತು. ಇಂದು ಅನೇಕ ವೃತ್ತಿಪರ ನಾಟಕ ತಂಡಗಳು ಕಾರ್ಯ ನಿರ್ವಹಿಸುತ್ತಿದ್ದು ದೇಶ ವಿದೇಶಗಳಲ್ಲಿ  ವರ್ಷ ಪೂರ್ತಿಯಾಗಿ ಪ್ರದರ್ಶನ ನೀಡುತ್ತಿವೆ.  ಕೆ.ಎನ್. ಟೇಲರ್‌ ಅವರು ತುಳು ನಾಟಕ ಹಾಗೂ ಸಿನಿಮಾರಂಗಕ್ಕೆ ಹೊಸತನ ತಂದುಕೊಟ್ಟವರು. ಖ್ಯಾತ ನಟಿಯರಾದ ಕಲ್ಪನಾ, ಡಾ.ಜಯಮಾಲ,,ಸಂಗೀತ ನಿರ್ದೇಶಕ ಗುರು ಕಿರಣ್‌ ಮೊದಲಾದವರು ತುಳು ನಾಟಕ ರಂಗದ ಮೂಲಕ ಬೆಳಕಿಗೆ ಬಂದ ಖ್ಯಾತನಾಮರು.

ಕೋಟಿ ಚೆನ್ನಯ ಸಿನೆಮಾ

ದೈವ ದೇವರ  ಭಾಷೆ ತುಳು :

ತುಳುನಾಡಿನ ಬಹುತೇಕ ದೇವಸ್ಥಾನಗಳಲ್ಲಿ ಭಕ್ತರು ಅರಿಕೆ, ಸಂಕಲ್ಪ ಮಾಡುವುದು ತುಳು ಭಾಷೆಯಲ್ಲ. ಭೂತಾರಾಧನೆ ತುಳುನಾಡಿನಲ್ಲಿ ತುಳುವರ ಶ್ರದ್ಧೆಯ ಅವಿಭಾಜ್ಯ ಅಸ್ಮಿತೆ. ಭೂತಾರಾಧನೆಯ ಸಂದರ್ಭದಲ್ಲಿ ಹೇಳುವ ಭೂತದ ಕಥನಗಳು  ಪಾಡ್ದನಗಳ ರೂಪದಲ್ಲಿ ತುಳು ಭಾಷೆಯಲ್ಲಿರುವುದು ಮತ್ತು ಇಲ್ಲಿ ಭೂತಗಳು ಅಭಯ ನೀಡುವುಂತಹದ್ದು ಹಾಗೂ ನ್ಯಾಯ ತೀರ್ಮಾನ ಮಾಡುವುದು, ಸಂವಹನ ನಡೆಸುವುದು ಎಲ್ಲವೂ  ತುಳು ಭಾಷೆಯಲ್ಲಿಯೇ ಆಗಿದೆ. (ಪ್ರಾಚೀನ ತುಳುನಾಡು ಶೀನಪ್ಪ ಹೆಗ್ಡೆ ಮತ್ತು ಎನ್.ಎಸ್. ಕಿಲ್ಲೆ 1954) (ಭೂತಾರಾಧನೆ ಜಾನಪದೀಯ ಅಧ್ಯಯನ –ಡಾ. ಕೆ ಚಿನ್ನಪ್ಪಗೌಡ 1988)  ಕರಾವಳಿಯಲ್ಲಿ ನಡೆಯುವ ದೇವಸ್ಥಾನ, ದೈವಸ್ಥಾನಗಳ ವಾರ್ಷಿಕ ಜಾತ್ರಾ ಮಹೋತ್ಸವಗಳ ಬಹುತೇಕ ಧಾರ್ಮಿಕ ಸಭಾ ಕಾರ್ಯಕ್ರಮಗಳು  ತುಳು ಭಾಷೆಯಲ್ಲಿಯೇ ನಡೆಯುವುದು ಅನ್ನುವುದು ಗಮನಿಸತಕ್ಕ  ವಿಚಾರವಾಗಿದೆ.

ಊರಿನ ಹೆಸರುಗಳು ತುಳು ಭಾಷೆಯ ಮೂಲದ್ದು

ತುಳುನಾಡಿನ ಎಲ್ಲಾ ಊರಿನ ಹೆಸರುಗಳು ಭೂವಾಚಕ, ಜಲವಾಚಕ, ಪರಿಸರ, ಪ್ರಾಕೃತಿಕ ಹಿನ್ನೆಲೆಯಿಂದ ಬಂದಿರುವುದು. ಈ ಎಲ್ಲಾ ಹೆಸರುಗಳು ತುಳು ಭಾಷೆಯ ಹಿನ್ನೆಲೆಯಿಂದಲೇ ಬಂದಿರುವುದರಿಂದ  ತುಳು ಭಾಷೆಗೆ  ತುಳು ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ. ತುಳುನಾಡಿನ ಸ್ಥಳನಾಮಾಧ್ಯಯನ (ಡಾ.ರಘುಪತಿ ಕೆಮ್ತೂರು-2015) ಅಧ್ಯಯನ ಗ್ರಂಥವು  ತುಳು ಭಾಷೆಯ ಸವಿವರವಾಗಿ ಮುಂದಿಡುತ್ತದೆ.

ಸ್ವಾತಂತ್ರ್ಯ ಸಂಗ್ರಾಮ, ರೈತ ಚಳವಳಿ, ಕಾರ್ಮಿಕರ ಚಳವಳಿ, ರಾಜಕೀಯ ಸಮಾವೇಶದಲ್ಲಿ  ತುಳು

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಪ್ರದೇಶದಲ್ಲಿ  ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಚಳವಳಿಗಾರರ  ಹೆಚ್ಚಿನ ಸಭೆಗಳಲ್ಲಿ ತುಳು ಭಾಷೆಯ ಮೂಲಕವೇ ಸಂವಹನ ನಡೆಯುತ್ತಿತ್ತು. ಕಯ್ಯಾರ ಕಿಂಞಣ್ಣ ರೈ, ಕಾರ್ನಾಡು ಸದಾಶಿವ ರಾಯರು,  ಎನ್. ಎಸ್. ಕಿಲ್ಲೆ, ಪೊಳಲಿ ಶೀನಪ್ಪ ಹೆಗ್ಗಡೆ, ನಿರಂಜನ,  ಕೆ.ಕೆ. ಶೆಟ್ಟಿ, ಶ್ರೀನಿವಾಸ ಮಲ್ಯ, ಲೋಕಯ್ಯ ಶೆಟ್ಟಿ, ಮೊದಲಾದ ಮಹನೀಯರು ತುಳುವಿನಲ್ಲೇ ಜನರೊಂದಿಗೆ ಬೆರೆಯುತ್ತಿದ್ದರು. ರಾಷ್ಟ್ರೀಯ ವಿಚಾರಧಾರೆಯನ್ನು ಜನರಿಗೆ ತುಳು ಭಾಷೆಯಲ್ಲೇ ತಿಳಿಸುತ್ತಿದ್ದರು. ಸ್ವಾತಂತ್ರ್ಯಪೂರ್ವ ಕಾಲಘಟ್ಟದಿಂದಲೇ   ರೈತರ ಕಾರ್ಮಿಕರ ಹೋರಾಟವನ್ನು ಸಂಘಟಿಸುತ್ತಿದ್ದ ಬಿ.ವಿ. ಕಕ್ಕಿಲ್ಲಾಯ, ಎಂ.ಎಚ್. ಕೃಷ್ಣಪ್ಪ, ಕೃಷ್ಣ ಶೆಟ್ಟಿ, ರಾಮಚಂದ್ರ ರಾವ್‌ ಮೊದಲಾದವರೆಲ್ಲರೂ ಸಾರ್ವಜನಿಕ ಸಮಾವೇಶಗಳಲ್ಲಿ ತುಳು ಭಾಷೆಯನ್ನೇ ಬಳಸುತ್ತಿದ್ದರು.  ಈ ಎಲ್ಲಾ ಹಿನ್ನೆಲೆಯಿಂದ ಪ್ರಸ್ತುತ ಕರಾವಳಿಯ ಬಹುತೇಕ ರಾಜಕೀಯ ಹೋರಾಟ, ಸಮಾವೇಶಗಳಲ್ಲಿಯೂ  ತುಳು ಭಾಷೆಯೇ ಪ್ರಧಾನವಾಗಿದೆ.

ತುಳು ಸಮ್ಮೇಳನಗಳು/ಸಮಾವೇಶಗಳು:

ಎಸ್. ಆರ್. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಹಾಗೂ ಎ.ಸಿ.ಭಂಡಾರಿ, ರತ್ನಕುಮಾರ್‌ ಮೊದಲಾದವರ ಪಾಲ್ಗೊಳ್ಳುವಿಕೆಯಲ್ಲಿ 1970 ರಲ್ಲಿ ಆರಂಭಗೊಂಡ ತುಳು ಕೂಟ ತುಳು ಭಾಷಿಗರ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗೆ ಬಹುದೊಡ್ಡ ಕೊಡುಗೆಯನ್ನೇ ನೀಡಿದೆ. ಈ ತುಳು ಕೂಟದ ಮೂಲಕ 1974 ರಲ್ಲಿ ಎಂ.ಮರಿಯಪ್ಪ ಭಟ್‌ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ವಲಯ ತುಳು ಸಮ್ಮೇಳನ ನಡೆಯಿತು, 1976ರಲ್ಲಿ ಕಯ್ಯಾರ ಕಿಂಞಣ್ಣ ರೈ ಅವರ ಅಧ್ಯಕ್ಷತೆ ಎರಡನೇ ವಲಯ ಮಟ್ಟದ ತುಳು ಸಾಹಿತ್ಯ ಸಮ್ಮೇಳನ ನಡೆಯಿತು. ಮುಂದೆ ಅನೇಕ ವಲಯ, ಜಿಲ್ಲಾ ಮಟ್ಟದ, ಅಖಿಲ ಭಾರತ ಮಟ್ಟದ, ವಿಶ್ವಮಟ್ಟದ ಸಮ್ಮೇಳನಗಳಿಗೆ ಈ ಸಮ್ಮೇಳನ ನಾಂದಿಹಾಡಿತು. 1983 ರಲ್ಲಿ  ಬೆಂಗಳೂರಿನಲ್ಲಿ  ವಿಶು ಕುಮಾರ್‌ ಅವರ ಮುಂದಾಳತ್ವದಲ್ಲಿ ಕುಶಿ.ಹರಿದಾಸ ಭಟ್ಟರ ಅಧ್ಯಕ್ಷತೆಯಲ್ಲಿ  ಅಖಿಲ ಭಾರತ ತುಳು ಸಾಹಿತ್ಯ ಸಮ್ಮೇಳನ ನಡೆಯಿತು. 1984 ರಲ್ಲಿ ಮಂಗಳೂರು ಪುರಭವನದಲ್ಲಿ  ಮಟ್ಟಾರು ವಿಠಲ ಹೆಗ್ಡೆ ಅವರ ಸರ್ವಾಧ್ಯಕ್ಷತೆಯಲ್ಲಿ ತುಳು ಸಮ್ಮೇಳನ ನಡೆಯಿತು. 1989 ರಲ್ಲಿ  ಮೂಲ್ಕಿಯಲ್ಲಿ  ಪ್ರೊ.ಅಮೃತ ಸೋಮೇಶ್ವರ ಅವರ ಅಧ್ಯಕ್ಷತೆಯಲ್ಲಿ  ತುಳು ಸಮ್ಮೇಳನ ನಡೆಯಿತು. 1994 ರಲ್ಲಿ  ಅಖಿಲ ಭಾರತ ತುಳು ಒಕ್ಕೂಟದ ಆಶ್ರಯದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಸವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪುರಭವನ ಹಾಗೂ ಅಡ್ಯಾರ್‌ನಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. 1998ರಲ್ಲಿ ವೆಂಕಟರಾಜ ಪುಣಿಂಚಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಬಾರಕೂರಿನಲ್ಲಿ ಅಖಿಲ ಭಾರತ ತುಳು ಸಾಹಿತ್ಯ ಸ್ಮಮೇಳನ ನಡೆಯಿತು. 2000 ನೇ ವರ್ಷದಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ  ಎರಡು ದಿನಗಳ ತುಳು ಸಮ್ಮೇಳನ ನಡೆಯಿತು. 2003 ರಲ್ಲಿ ಹೊಸ ದಿಲ್ಲಿಯಲ್ಲಿ ಡಾ.ಎಂ. ವೀರಪ್ಪ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ತುಳು ರಾಷ್ಟ್ರೀಯ ಸಮಾವೇಶ ನಡೆಯಿತು.  2004ರಲ್ಲಿ ಉಳ್ಳಾಲ ತಾಲೂಕಿನ ಮಡ್ಯಾರ್‌ ನಲ್ಲಿ ಸಮಾವೇಶ ನಡೆದಿತ್ತು.  ಮುಂದೆ 2009 ರಲ್ಲಿ  ಉಜಿರೆಯಲ್ಲಿ  ಡಾ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ  ವಿಶ್ವ ತುಳು ಸಮ್ಮೇಳನ ನಡೆಯಿತು.  ಬಳಿಕ 2014 ರಲ್ಲಿ  ಮಂಗಳೂರಿನ ಅಡ್ಯಾರ್‌ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ  ವಿಶ್ವ ತುಳು ಸಮ್ಮೇಳನ ನಡೆಯಿತು. 2019 ರಲ್ಲಿ ತುಳು ಪರಿಷತ್‌ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಮಂಗಳೂರಿನಲ್ಲಿ ಮೊದಲ ಕಾಲೇಜು ವಿದ್ಯಾರ್ಥಿ ತುಳು ಸಾಹಿತ್ಯ ಸಮ್ಮೇಳನ ನಡೆಯಿತು. 2023 ರಲ್ಲಿ ತುಳು ಪರಿಷತ್‌ ಮತ್ತು ತುಳು ಅಕಾಡೆಮಿ ವತಿಯಿಂದ ಎರಡನೇ ಕಾಲೇಜು ವಿದ್ಯಾರ್ಥಿ ತುಳು ಸಾಹಿತ್ಯ ನಡೆದಿದೆ. ಅಕಾಡೆಮಿ ವತಿಯಿಂದ ತಾಲೂಕು ಮಟ್ಟದ ಸಮ್ಮೇಳನಗಳು ಹಲವು ನಡೆದಿವೆ. ಬಂಟ್ವಾಳ ತಾಲೂಕಿನ ಶ್ರೀ ಒಡಿಯೂರು ಸಂಸ್ಥಾನ ಮಠದವರು ಕಳೆದ 25 ವರ್ಷಗಳಿಂದ ನಿರಂತರವಾಗಿ ತುಳು ಸಮ್ಮೇಳನ ನಡೆಸಿಕೊಂಡು ಬರುತ್ತಿದ್ದಾರೆ. ಭದ್ರಾವತಿ ತುಳು ಕೂಟದವರು ಕಳೆದ 25 ವರ್ಷಗಳಿಂದ ತುಳು ಉತ್ಸವ ನಡೆಸಿಕೊಂಡು  ಬರುತ್ತಿದ್ದಾರೆ. ಮೂಡುಬಿದ್ರೆ ಮಹಾವೀರ ಕಾಲೇಜಿನವರು 18 ವರ್ಷಗಳಿಂದ ತುಳು ಉತ್ಸವ ಆಯೋಜಿಸುತ್ತಿದ್ದಾರೆ. 25 ವರ್ಷಗಳ ಹಿಂದೆ  ತುಳು ಅಕಾಡೆಮಿಯ ಸಹಕಾರದೊಂದಿಗೆ ಆರಂಭಗೊಂಡ ರಾಣಿ ಅಬ್ಬಕ್ಕ ಉತ್ಸವದಲ್ಲಿಯೂ ತುಳು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬಂಟ್ವಾಳದ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿಯೂ ಪತ್ರಿ ವರ್ಷ ತುಳು ಉತ್ಸವವನ್ನು ಆಯೋಜಿಸಲಾಗುತ್ತಿದೆ.  ಮಂಗಳೂರು ಗುರುಪುರ ಸಮೀಪದ ಮಳಲಿ (ಮಣೆಲ್) ಗ್ರಾಮದಲ್ಲಿನ ಅಬ್ಬಕ್ಕರಾಣಿಯ ಚರಿತ್ರೆಯನ್ನು ಅಕಾಡೆಮಿಯು ದಾಖಲೀಕರಣ ಮಾಡಿದೆ.

ಅಧಿವೇಶನದಲ್ಲಿ ತುಳು :

ಕರ್ನಾಟಕ ವಿಧಾನ ಸಭೆಯ ಅಧಿವೇಶನದಲ್ಲಿ ತುಳು ಭಾಷೆಯಲ್ಲಿ ಮಾತನಾಡಲು ಸಭಾಪತಿಗಳಾದ  ಯು.ಟಿ.ಖಾದರ್‌ ಅವರು ಅವಕಾಶ ಕಲ್ಪಿಸಿರುವುದು  ಶಾಸಕ ಅಶೋಕ್‌ ರೈ ಅವರ ತುಳುವಿನ ಉತ್ಸಾಹ, ಅದಕ್ಕೆ ಕರಾವಳಿ ಭಾಗದ ಶಾಸಕರೆಲ್ಲರೂ ಧ್ವನಿಗೂಡಿಸುವುದು ಜೊತೆಗೆ ಕರ್ನಾಟಕದ ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ ತಂಗಡಗಿಯವರು  ಸೇರಿದಂತೆ ಎಲ್ಲಾ ಶಾಸಕರು ಪ್ರೋತ್ಸಾಹಿಸುತ್ತಿರುವುದು ತುಳು ಭಾಷೆಯ ಬೆಳವಣಿಗೆಯಲ್ಲಿ  ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ.

ತುಳು ವಿಕಿಪೀಡಿಯಾ :

ಆಧುನಿಕ ಕಾಲದ ಮಾಹಿತಿ ತಂತ್ರಜ್ಞಾನ ಹಾಗೂ ಡಿಜಿಟಲ್‌ ವೇದಿಕೆಯನ್ನು ಸಮರ್ಥವಾಗಿ ತುಳು ಬಳಸಿಕೊಳ್ಳಲು ಆರಂಭಿಸಿದೆ. ವಿಕಿಪೀಡಿಯಾದ ಮಾದರಿಯಲ್ಲೇ ತುಳು ವಿಕಿಪೀಡಿಯಾ 2016 ರಿಂದ ಕಾರ್ಯನಿರ್ವಹಿಸುತ್ತಿದ್ದು, ತುಳು ಭಾಷೆ ಹಾಗೂ ಸಾಹಿತ್ಯದ ಸಾವಿರಾರು ಲೇಖನಗಳು ತುಳು ವಿಕಿಪೀಡಿಯಾದಲ್ಲಿ ಲಭ್ಯವಿದೆ. ಈಗಾಗಲೇ ಯುನಿಕೋಡ್‌ ಕೂಡ ತುಳುವಿಗೆ ಅವಕಾಶ ಕಲ್ಪಿಸಿದೆ, ಗೂಗಲ್‌ ಟ್ರಾನ್ಸ್‌ಲೇಟರ್‌ ತುಳು ಅನುವಾದಕ್ಕೆ ವೇದಿಕೆ ಒದಗಿಸಿದೆ.

ಅಮೆರಿಕಾದಲ್ಲಿ ತುಳುವಿಗೆ ಪ್ರಾಧಾನ್ಯತೆ

ಅಮೆರಿಕಾ ದೇಶದ ಜಾರ್ಜಿಯಾ ರಾಜ್ಯವು  ತುಳು ಭಾಷೆಗೆ ವಿಶೇಷ ಪ್ರಾಧಾನ್ಯತೆ ಕಲ್ಪಿಸಿ ಜಾಗತಿಕವಾಗಿ  ಗಮನ ಸೆಳೆದಿದೆ.  2018 ರಲ್ಲಿ  ಜಾರ್ಜಿಯಾ ರಾಜ್ಯದ ಗವರ್ನರ್‌ ಅವರು ತುಳು ಭಾಷಾ ಸಪ್ತಾಹ ಆಚರಿಸಲು ಅಧಿಕೃತ ಆದೇಶ ಹೊರಡಿಸಿರುವುದು ಜಾಗತಿಕವಾಗಿ ತುಳು ಭಾಷೆಗೆ ಇರುವ ಮಹತ್ವಕ್ಕೆ ಸಾಕ್ಷಿಯಾಗಿದೆ.  ಜಾರ್ಜಿಯಾದಲ್ಲಿ ಮಾರ್ಚ್‌ 2018 ರ  18 ರಿಂದ 24 ರ ತನಕ ರಾಜ್ಯ ಸರಕಾರವೇ ಅಧಿಕೃತವಾಗಿ ತುಳು ಭಾಷಾ ಸಪ್ತಾಹವನ್ನು ಆಚರಿಸಿದೆ. ಜಾರ್ಜಿಯಾದಲ್ಲಿ ಉದ್ಯೋಗ ನಿಮಿತ್ತ ನೆಲೆಯಾಗಿದ್ದ ತುಳು ಭಾಷಿಗ ಪ್ರಶಾಂತ್‌ ರಾಮ್‌ ಕೊಟ್ಟಾರಿಯವರು  ನೀಡಿದ ಪ್ರಸ್ತಾವನೆಯನ್ನು ಅಲ್ಲಿನ  ರಾಜ್ಯ ಸರಕಾರ ಮಾನ್ಯ ಮಾಡಿ ಈ ಆದೇಶ ಮಾಡಿತ್ತು.  ಇದೊಂದು ಮಹತ್ತ್ವದ ಜಾಗತಿಕ ಬೆಳವಣಿಗೆ ಎಂದೇ ದಾಖಲಿಸಲ್ಪಟ್ಟಿದೆ. 

ಕನ್ನಡ ಕರ್ನಾಟಕ ಏಕೀಕರಣ ಚಳುವಳಿಗೆ ತುಳುನಾಡಿನ ಕೊಡುಗೆ:

ತುಳು ಭಾಷಿಗರು ತುಳುವಿನ ಅಸ್ಮಿತೆಯನ್ನು ಉಳಿಸಿಕೊಂಡು ತುಳು ಭಾಷೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣ ಚಳುವಳಿಗೆ ಹಾಗೂ ಕನ್ನಡ ಭಾಷೆಗಾಗಿ ಅಪೂರ್ವ ಕೊಡುಗೆಯನ್ನು ನೀಡಿರುವುದು ಕರ್ನಾಟಕದ ಏಕೀಕರಣ ಚಳುವಳಿಯ ದಾಖಲೀಕರಣದಲ್ಲಿ ಉಲ್ಲೇಖಗೊಂಡಿದೆ. ಕರ್ನಾಟಕ  ಏಕೀಕರಣ ಚಳುವಳಿಯ ಪ್ರಮುಖ ಮೂಂಚೂಣಿಯ ನೇತಾರರಲ್ಲಿ ತುಳು ಭಾಷಿಗರಾದ ಕೆ. ಬಿ ಜಿನರಾಜ ಹೆಗ್ಡೆಯವರು ಬಹುವಾಗಿ ಶ್ರಮಿಸಿದವರು. ಅವರ ಪ್ರೇರಣೆಯಿಂದ ಬೆನಗಲ್ ರಾಮರಾಯರು, ಉಡುಪಿ ಶ್ರೀನಿವಾಸ ಪಣಿಯಾಡಿಯವರು ಮತ್ತು ಕಯ್ಯಾರ ಕಿಞ್ಞಣ್ಣ ರೈಯವರು, ಕೆ.ರಾಮಕೃಷ್ಣ  ಕಾರಂತರು ಮೊದಲಾಗಿ ಹಿರಿಯರು ಕರ್ನಾಟಕ ಏಕೀಕರಣ ಚಳುವಳಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ನೀಡಿದ್ದರು.

1928 ರಲ್ಲಿ  ಭಾಷಾವಾರು ಪ್ರಾಂತ್ಯ  ರಚನೆಗೆ ಸಂಬಂಧಿಸಿ ರಚಿಸಲಾಗಿದ್ದ ಸರ್ವ ಪಕ್ಷ ಪರಿಷತ್ತಿನ ಸಭೆಯಲ್ಲಿಯೂ ಹಾಗೂ ಮುಂದೆ 1954 ರಲ್ಲಿ ಏಕೀಕರಣ ಸಮಿತಿಯ ಆಯೋಗವು ಮಂಗಳೂರಿಗೆ ಭೇಟಿ ನೀಡಿದಾಗಲೂ ತುಳುನಾಡಿನ ಈ ಹಿರಿಯರೆಲ್ಲರೂ ಕರ್ನಾಟಕ ಏಕೀಕರಣ ಆಗಲೇ ಬೇಕೆಂದು ಒತ್ತಾಯಿಸಿ ಬೆಂಬಲವನ್ನು ನೀಡಿದ್ದರು. ಈ ಮೂಲಕ ತುಳುವರು ಕನ್ನಡ ಹಾಗೂ ಕರ್ನಾಟಕದ ಏಕೀಕರಣಕ್ಕೆ ಪೂರ್ಣವಾಗಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕ ಏಕೀಕರಣ ಚಳುವಳಿಯ ಸಂದರ್ಭದಲ್ಲಿ ಏಕೀಕರಣದ ಬಳಿಕ ತುಳು ಭಾಷೆಯ ಬೆಳವಣಿಗೆಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಕರ್ನಾಟಕ ಸರಕಾರವು  ನೀಡಲಿದೆ ಎಂದು ಅಂದಿನ ಏಕೀಕರಣ ಚಳುವಳಿಯ ನಾಯಕರು ತುಳುವರಿಗೆ ಅಭಯವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿಯೇ ಕವಿ ಕಯ್ಯಾರ ಕಿಞ್ಞಣ್ಣ ರೈಯವರು ‘ಕನ್ನಡ ಅಂತರ್ಗತ ತುಳುನಾಡು ನಮ್ಮದು’ ಎಂಬುದಾಗಿ ದೊಡ್ಡ ಧ್ವನಿಯಲ್ಲಿ ಘೋಷಿಸಿದ್ದರು. ‘ತುಳು ಸಿರಿ ಏಳ್ಗೆ,  ಸಿರಿಗನ್ನಡಂ ಗೆಲ್ಗೆ,   ಭಾರತಂ ಬಾಳ್ಗೆ’  ಇದು ಕವಿ ಕಯ್ಯಾರ  ಕಿಂಞಣ್ಣ ರೈ ಅವರ ಕನಸು ಮತ್ತು ಆಶಯವಾಗಿತ್ತು

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ

ಈ ಹಿಂದಿನ ಸರಕಾರದ ಅವಧಿಯಲ್ಲಿ  ಡಾ.ಎಂ. ಮೋಹನ್ ಆಳ್ವ ಅವರು ಸಲ್ಲಿಸಿರುವ  ವರದಿಯ ಬಳಿಕ  ಮಾನ್ಯ ಸಿದ್ದರಾಮಯ್ಯ ಸರಕಾರವು ರಚಿಸಿದ ಆಂಧ್ರ ಪ್ರದೇಶದ ಅಧ್ಯಯನ ವರದಿಯ ಹಿನ್ನಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ದಿಟ್ಟ ನಿರ್ಧಾರ ಕೈಗೊಂಡು ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ನೀಡುವ ಮೂಲಕ ಐತಿಹಾಸಿಕ ಕ್ರಮ ಕೈಗೊಂಡಿರುವುದು ಸಮಸ್ತ ತುಳುವರಿಗೆ ಹೆಮ್ಮೆಯ ವಿಚಾರವಾಗಿರುತ್ತದೆ. ತುಳು ಭಾಷೆಯ ಸಮಗ್ರ ಬೆಳವಣಿಗೆಯ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಕ್ರಮವಾಗಿದೆ. ಸಂವಿಧಾನದ 8 ನೇ ಪರಿಚ್ಚೇದಕ್ಕೆ ತುಳು ಸೇರ್ಪಡೆಯಾಗಬೇಕೆಂಬ ತುಳುವರ ಮಹತ್ವದ ಇನ್ನೊಂದು ಬೇಡಿಕೆ ಈಡೇರುವ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳು ನಡೆಯಬೇಕಾಗಿವೆ.

(ಮುಗಿಯಿತು ಸಂ.)

ತಾರಾನಾಥ ಗಟ್ಟಿ ಕಾಪಿಕಾಡ್

ಇವರು ಕಳೆದ ಎರಡೂವರೆ ದಶಕಗಳಿಂದ ಮಂಗಳೂರಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಯಲ್ಲಿರುವವರು. ನಾಟಕ, ರಂಗಭೂಮಿ ಬಗ್ಗೆ ಆಸಕ್ತರು. ತುಳು ಸಂಘಟನೆಯಲ್ಲಿ ಸಕ್ರಿಯರು. ಪ್ರಸ್ತುತ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.

More articles

Latest article

Most read