ಭಾರತದಂತಹ ವೈವಿಧ್ಯಮಯ ಹಾಗೂ ವಿಶಾಲವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಮತ್ತು ಧೈರ್ಯದ ಪತ್ರಿಕೋದ್ಯಮದ ಅಗತ್ಯ ಇಂದು ಹೆಚ್ಚಾಗಿದೆ. ಅಧಿಕಾರಸ್ಥರನ್ನು ಪ್ರಶ್ನಿಸುವುದು, ಸತ್ಯವನ್ನು ಹುಡುಕುವುದು ಮತ್ತು ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದು ಪತ್ರಕರ್ತರ ಕರ್ತವ್ಯ. ಈ ನಿಟ್ಟಿನಲ್ಲಿ ರಿತಿಕಾ ಚೋಪ್ರಾ ಅವರು ಈ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಬಲವಾದ ಕಂಬಗಳಲ್ಲಿ ಒಬ್ಬರು ರಿತಿಕಾ ಚೋಪ್ರಾ – ಶಾಂತಾ ಜಿ, ಹವ್ಯಾಸಿ ಪತ್ರಕರ್ತೆ.
ರಿತಿಕಾ ಚೋಪ್ರಾ ಅವರು ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತೆ. ಇತ್ತೀಚೆಗೆ ಚುನಾವಣಾ ಆಯೋಗದ ಮುಖ್ಯಸ್ಥ ಗ್ಯಾನೇಶ್ ಕುಮಾರ್ ಅವರ ಬಗ್ಗೆ ನಡೆಸಿದ ವಿಶೇಷ ತನಿಖಾ ವರದಿಯ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.
ಯಾರೀ ರಿತಿಕಾ ಚೋಪ್ರಾ?
ರಿತಿಕಾ ಚೋಪ್ರಾ ಕೋಲ್ಕತ್ತಾದಲ್ಲಿ ಉನ್ನತ ಶಿಕ್ಷಣವನ್ನು ಪಡೆದು, ಸೇಂಟ್ ಜೇವಿಯರ್ಸ್ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಶನ್ (ಸಮೂಹ ಮಾಧ್ಯಮ) ಅಧ್ಯಯನ ಮಾಡಿದ್ದು, ಸುಮಾರು 19-20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಹಿಂದೂಸ್ತಾನ್ ಟೈಮ್ಸ್, ಮೇಲ್ ಟುಡೇ, ದಿ ಎಕನಾಮಿಕ್ ಟೈಮ್ಸ್‌ನಂತಹ ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವದ ಬಳಿಕ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯನ್ನು ಸೇರಿಕೊಂಡರು.
ಪ್ರಸ್ತುತ ಅವರು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮುಂಬೈ ವಿಭಾಗದ ರೆಸಿಡೆಂಟ್ ಎಡಿಟರ್ (Resident Editor) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ನ್ಯಾಷನಲ್ ಬ್ಯೂರೋ ಚೀಫ್ (ಸರ್ಕಾರ) ಮತ್ತು ನ್ಯಾಷನಲ್ ಎಜುಕೇಷನ್ ಎಡಿಟರ್ ಆಗಿ ಕಾರ್ಯನಿರ್ವಹಿಸಿದ್ದು ಶಿಕ್ಷಣ ನೀತಿ ಮತ್ತು ಕೇಂದ್ರ ಸರ್ಕಾರದ ಚುನಾವಣಾ ಆಯೋಗದ ಕಾರ್ಯಗಳ ವಿಶ್ಲೇಷಣೆ ಮತ್ತು ನಿಕಟವಾಗಿ ವರದಿ ಮಾಡುವುದು ಅವರ ವೈಶಿಷ್ಠ್ಯ.

ಪ್ರಮುಖ ಸಾಧನೆಗಳು :
ರಿತಿಕಾ ಅವರು ಕೇವಲ ಸುದ್ದಿ ವರದಿ ಮಾಡುವವರಲ್ಲ. ಅವರು ಸತ್ಯವನ್ನು ಬೆಳಕಿಗೆ ತರುವ ತನಿಖಾತ್ಮಕ ಪತ್ರಕರ್ತೆ. 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗದ ಆಂತರಿಕ ನಿರ್ಧಾರಗಳು, ಕಮಿಷನರ್‌ಗಳ ನಡುವಿನ ಭಿನ್ನಾಭಿಪ್ರಾಯಗಳು ಕೆಲವು ದೂರುಗಳನ್ನು ನಿಭಾಯಿಸುವಲ್ಲಿ ಆಗುತ್ತಿರುವ ವಿಳಂಬ ಇತ್ಯಾದಿಗಳ ಕುರಿತು ಸರಣಿ ತನಿಖಾ ವರದಿಗಳನ್ನು ಪ್ರಕಟಿಸಿದ್ದರು. ಅವುಗಳು ದೇಶಾದ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರಿದ್ದವು.
ಇತ್ತೀಚೆಗೆ (ಸೆಪ್ಟೆಂಬರ್ 2026) ಅವರು ಮತ್ತೊಂದು ಮಹತ್ವದ ತನಿಖಾ ವರದಿ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ನೇತೃತ್ವದ ಚುನಾವಣಾ ಆಯೋಗದಲ್ಲಿ ನಡೆಯುತ್ತಿದ್ದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಅವರು ಬಹಿರಂಗಪಡಿಸಿದರು. ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಲಿಖಿತವಾಗಿ ಆಕ್ಷೇಪಣೆಗಳನ್ನು ದಾಖಲಿಸಿದ್ದುದನ್ನು ಅವರ ವರದಿ ತೋರಿಸಿತು. ಮತದಾರರ ಪಟ್ಟಿ ಪರಿಷ್ಕರಣೆ (SIR), ECINet ಸಾಫ್ಟ್‌ವೇರ್ ಮತ್ತು ಫಾರ್ಮ್-6ರಲ್ಲಿನ ಬದಲಾವಣೆಗಳ ಬಗ್ಗೆ ಈ ಆಕ್ಷೇಪಣೆಗಳು ಇದ್ದವು. ಈ ವರದಿ ರಾಜಕೀಯವೂ ಸೇರಿದಂತೆ ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಪ್ರಶಸ್ತಿಗಳು:
ಐಪಿಐ-ಇಂಡಿಯಾ ಪ್ರಶಸ್ತಿ 2020 – 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಡಿದ ವಿಶೇಷ ವರದಿಗಳಿಗೆ
ರಾಮ್‌ನಾಥ್ ಗೋಯೆಂಕಾ ಪ್ರಶಸ್ತಿ – 2021ರಲ್ಲಿ ಚುನಾವಣಾ ಆಯೋಗದ ಕುರಿತು ಮಾಡಿದ ಅತ್ಯುತ್ತಮ ತನಿಖಾ ವರದಿಗಳಿಗೆ
ಚಮೇಲಿ ದೇವಿ ಜೈನ್ ಅವಾರ್ಡ್- 2024 ರಲ್ಲಿ ಅತ್ಯುತ್ತಮ ಮಹಿಳಾ ಪತ್ರಕರ್ತೆ ಗೌರವ
ರಿತಿಕಾ ಏಕೆ ಮುಖ್ಯವಾಗುತ್ತಾರೆ?
ಭಾರತದಂತಹ ವೈವಿಧ್ಯಮಯ ಹಾಗೂ ವಿಶಾಲವಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರ ಮತ್ತು ಧೈರ್ಯದ ಪತ್ರಿಕೋದ್ಯಮದ ಅಗತ್ಯ ಇಂದು ಹೆಚ್ಚಾಗಿದೆ. ಅಧಿಕಾರಸ್ಥರನ್ನು ಪ್ರಶ್ನಿಸುವುದು, ಸತ್ಯವನ್ನು ಹುಡುಕುವುದು ಮತ್ತು ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದು ಪತ್ರಕರ್ತರ ಕರ್ತವ್ಯ. ಈ ನಿಟ್ಟಿನಲ್ಲಿ ರಿತಿಕಾ ಚೋಪ್ರಾ ಅವರು ಈ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವದ ಬಲವಾದ ಕಂಬಗಳಲ್ಲಿ ಒಬ್ಬರು ರಿತಿಕಾ ಚೋಪ್ರಾ. ಅವರ ವರದಿಗಳು ಕೇವಲ ಸುದ್ದಿಯಲ್ಲ; ಅವು ಸಂಸ್ಥೆಗಳ ಕಾರ್ಯವಿಧಾನವನ್ನು ಪ್ರಶ್ನಿಸುತ್ತವೆ ಮತ್ತು ಪಾರದರ್ಶಕತೆಯನ್ನು ಬಲಪಡಿಸುತ್ತವೆ.
“ಇದುವೇ ನಿಜವಾದ ವಸ್ತುನಿಷ್ಠ ಪತ್ರಿಕೋದ್ಯಮ. ಭಾರತೀಯ ಪ್ರಜಾಪ್ರಭುತ್ವವನ್ನು ಸದೃಢವಾಗಿ ಕಾಯುವ ಬಲವಾದ ಬಲವಾದ ಕಂಬಗಳಲ್ಲಿ ಒಬ್ಬರು ರಿತಿಕಾ ಚೋಪ್ರಾ. ಅವರ ಕೆಲಸ ಹೀಗೇ ಮುಂದುವರೆಯಲಿ…..
ಶಾಂತ ಜಿ, ಚಿತ್ರದುರ್ಗ
ಹವ್ಯಾಸಿ ಪತ್ರಕರ್ತೆ
ಇದನ್ನೂ ಓದಿ- ಸಂಪಾದಕೀಯ : ಸೌಜನ್ಯ ಪ್ರಕರಣ: ಅತ್ಯಾಚಾರಿಗಳ ರಕ್ಷಕರಿಗೂ ಶಿಕ್ಷೆಯಾಗಬೇಕು


