ಇಲ್ಲಿ ನಿದ್ದೆ ಮಾಡಿದರೆ ಲಕ್ಷ ಲಕ್ಷ ಹಣ ಕೊಡುತ್ತಾರೆ!!!

ಬೆಳಿಗ್ಗೆ ಬೇಗ ಎದ್ದೇಳದಿದ್ದರೆ, ಅಪ್ಪ ಅಮ್ಮನ ಬೈಗುಳ ಗ್ಯಾರಂಟಿ, ಕೆಲವೊಮ್ಮೆ ತಣ್ಣೀರು ಹೊಡೆಸಿಕೊಂಡಿದ್ದು, ಒದೆ ತಿಂದಿದ್ದು ಉಂಟು. ಇನ್ನು ಮದ್ಯಾಹ್ನ ಮಲಗಿದರೆ, ಸೋಂಬೇರಿ… ಚಿಂತೆ ಇಲ್ಲದವನಿಗೆ ಸಂತೇಯಲ್ಲೂ ನಿದ್ದೆ ಅಂತ ಮಾತಾಡ್ತಾರೆ. ಇನ್ನು ಶಾಲೆ ಕಾಲೇಜುಗಳಲ್ಲಿ ನಿದ್ದೆ ಮಾಡಿದರೆ ತೂಕಡಿಸಿದರೆ ಅವಮಾನ ಕಟ್ಟಿಟ್ಟ ಬುತ್ತಿ.

ಹೀಗಿರುವಾಗ, ಜಪಾನಿನ ಟೋಕಿಯೋದಲ್ಲಿ ನಿದ್ದೆ ಮಾಡಿದರೆ ಲಕ್ಷ ಲಕ್ಷ ಬಹುಮಾನ ಕೊಡ್ತಾರೆ ಅಂದರೆ ನಂಬುತ್ತೀರಾ? ನಂಬಲೇಬೇಕು

ಜಪಾನಿನ ಹಾಸಿಗೆ ತಯಾರಿಕಾ ಕಂಪನಿಯಾದ, ‘ಕೋವಾಲಾ ಜಪಾನ್’ (Koala Japan)
“Mattrace by Koala” (ಮ್ಯಾಟ್ರೆಸ್ ಬೈ ಕೋವಾಲಾ) ಎಂಬ ನಿದ್ದೆ ಮಾಡುವ ಸ್ಪರ್ದೆಯನ್ನು ಆಯೋಜಿಸುತ್ತಿದೆ.

ಈ ಸ್ಪರ್ಧೆಯಲ್ಲಿ ಯಾವುದೇ 90 ನಿಮಿಷಗಳ ಕಾಲ ಗಾಢವಾಗಿ ನಿದ್ರೆ ಮಾಡಬೇಕು, ಈ ಸಮಯದಲ್ಲಿ ನಿದ್ರೆಯ ನೈಜತೆ ಕುರಿತು ಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ, ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 22.2 ಲಕ್ಷ ಯೆನ್ ಅಂದರೆ, ಸುಮಾರು 13.76 ಲಕ್ಷ ಬಹುಮಾನ ನೀಡುತ್ತಾರೆ.!

‘ಟೋಕಿಯೋ ವೀಕೆಂಡರ್’ (Tokyo Weekender) ವರದಿಯ ಪ್ರಕಾರ, ಈ ನಿದ್ರೆಯ ಸ್ಪರ್ಧೆಯು (sleep race) 2026ರ ಅಕ್ಟೋಬರ್ 5ರಂದು ಟೋಕಿಯೋದ ಮಿನಾಟೊ ವಾರ್ಡ್‌ನಲ್ಲಿರುವ ‘ಶೇರ್ ಗ್ರೀನ್ ಮಿನಾಮಿ ಅಯೋಮಾ’ (Share Green Minami Aoyama) ಎಂಬಲ್ಲಿ ನಡೆಯಲಿದೆ.

ಸ್ಪರ್ಧೆಯ ನಿಯಮಗಳು:

ಈ ಸ್ಪರ್ಧೆಯು ದಿನವಿಡೀ ನಡೆಯುವ ತಲಾ 90 ನಿಮಿಷಗಳ ಮೂರು ಸುತ್ತುಗಳನ್ನು ಒಳಗೊಂಡಿರುತ್ತದೆ. ಪ್ರತಿ ಸುತ್ತಿನಲ್ಲೂ ಸುಮಾರು 20 ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಲಭ್ಯವಿರುವ ಸ್ಥಾನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಲ್ಲಿ, ಲಾಟರಿ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 4ರಂದು ಆರಂಭವಾಗಿದ್ದು, ಸೆಪ್ಟೆಂಬರ್ 16ರ ರಾತ್ರಿ 11:59ಕ್ಕೆ (ಜಪಾನ್ ಸಮಯದ ಪ್ರಕಾರ) ಕೊನೆಗೊಳ್ಳಲಿದೆ.

ಕೋವಾಲಾ ಜಪಾನ್ ಸಂಸ್ಥೆಯು ಸೆಪ್ಟೆಂಬರ್ 4ರಂದು ಈ ಕಾರ್ಯಕ್ರಮದ ಕುರಿತು ಘೋಷಣೆ ಮಾಡಿತ್ತು.

More articles

Latest article

Most read