ಆನ್‌ಲೈನ್ ಸೇಲ್‌ನಲ್ಲಿ ನಿಜಕ್ಕೂ ಡೀಲ್ ಸಿಗ್ತಿದೆಯಾ ಅಥವಾ ಮೋಸ ಹೋಗ್ತಿದ್ದೀರಾ?

ಹಬ್ಬದ ಸೀಸನ್ ಬಂತೆಂದರೆ ಸಾಕು, ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳಲ್ಲಿ “ಬಂಪರ್ ಆಫರ್”, “50% ಡಿಸ್ಕೌಂಟ್”, “ದೀಪಾವಳಿ ಧಮಾಕಾ” ಎಂಬ ಆಕರ್ಷಕ ಜಾಹೀರಾತುಗಳ ಮಹಾಪೂರವೇ ಹರಿಯುತ್ತದೆ. ಆದರೆ, ಕಣ್ಣಿಗೆ ಕಾಣುವ ಈ ಬೃಹತ್ ರಿಯಾಯಿತಿಗಳು ನಿಜಕ್ಕೂ ನಿಮ್ಮ ಜೇಬಿಗೆ ಲಾಭ ತರುತ್ತಿವೆಯೇ? ಅಥವಾ ನೀವು ನಕಲಿ ಆಫರ್‌ಗಳ ಬಲೆಗೆ ಬೀಳುತ್ತಿದ್ದೀರಾ? ಈ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದ್ದು, ಜನವರಿ 1 ರಿಂದ ಜಾರಿಗೆ ಬರಲಿರುವ ಹೊಸ ನಿಯಮ ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಲಿದೆ.

ರಿಯಾಯಿತಿಯ ಹಿಂದಿದೆ ಶೇ. 100 ರಷ್ಟು ಮೋಸ!

ಕಳೆದ ಹಲವು ವರ್ಷಗಳಿಂದ ಭಾರತದ ಗ್ರಾಹಕ ಸಂಸ್ಥೆಗಳು ನಡೆಸಿದ ಅಧ್ಯಯನದ ಪ್ರಕಾರ, ಇ-ಕಾಮರ್ಸ್ ತಾಣಗಳಲ್ಲಿ ಕಾಣಿಸುವ ಶೇ. 80ಕ್ಕೂ ಹೆಚ್ಚು ಡೀಲ್‌ಗಳು ನಕಲಿ! ಅವುಗಳು ಗ್ರಾಹಕರನ್ನು ಹೇಗೆ ಮೋಸಮಾಡುತ್ತವೆ ಅಂದರೆ-

ಬೆಲೆ ಏರಿಸಿ ಡಿಸ್ಕೌಂಟ್ ನೀಡುವುದು: ಉದಾಹರಣೆಗೆ, 40,000 ರೂ. ಮೌಲ್ಯದ ವಸ್ತುವಿನ ಮೂಲ ಬೆಲೆಯನ್ನು (MRP) ಕೃತಕವಾಗಿ 65,000 ರೂ.ಗೆ ಏರಿಸಿ, ಬಳಿಕ “25,000 ರೂ. ರಿಯಾಯಿತಿ!” ಎಂದು ಗ್ರಾಹಕರನ್ನು ಮರುಳು ಮಾಡಲಾಗುತ್ತದೆ.

ಸೇಲ್ ಸಮಯದಲ್ಲಿ ಬೆಲೆ ಹೆಚ್ಚಳ: ದೀಪಾವಳಿ ಅಥವಾ ಬ್ಲ್ಯಾಕ್ ಫ್ರೈಡೇ ಸೇಲ್‌ಗಾಗಿ ಕಾಯುತ್ತಿದ್ದ ವಸ್ತುವಿನ ಬೆಲೆ, ಸೇಲ್ ಆರಂಭವಾಗುತ್ತಿದ್ದಂತೆ ಏರಿಕೆಯಾಗುತ್ತದೆ. ಕೊನೆಗೆ ರಿಯಾಯಿತಿ ಸಿಕ್ಕ ಮೇಲೂ ಅದರ ಬೆಲೆ ಸಾಮಾನ್ಯ ದಿನಗಳ ಬೆಲೆಗಿಂತ ಹೆಚ್ಚೇ ಇರುತ್ತದೆ!

ನೀವು ಕೂಡ ಇಂತಹ ಅನುಭವವನ್ನು ದೀಪಾವಳಿ ಸೇಲ್‌ನಲ್ಲಿ – ಆನ್‌ಲೈನ್ ಮತ್ತು ಆಫ್‌ಲೈನ್ ಎರಡರಲ್ಲೂ ಅನುಭವಿಸಿರಬಹುದು. ನೀವು ದೀಪಾವಳಿ ಸೇಲ್‌ಗಾಗಿ ಕಾಯುತ್ತಿದ್ದ ವಸ್ತುವೊಂದು, ಸೇಲ್ ಪ್ರಾರಂಭವಾದಾಗ ದುಬಾರಿಯಾಗುತ್ತದೆ ಮತ್ತು ರಿಯಾಯಿತಿ ಬೆಲೆಯು ಮಾರಾಟದ ಪೂರ್ವದ ಬೆಲೆಯಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ.

ಜನವರಿ 1 ರಿಂದ ಜಾರಿಯಾಗುವ ಹೊಸ ನಿಯಮ

ಆನ್‌ಲೈನ್ ಶಾಪಿಂಗ್‌ನಲ್ಲಿ ಪಾರದರ್ಶಕತೆ ತರಲು ಭಾರತ ಸರ್ಕಾರ ಹೊಸ ನಿಯಮವನ್ನು ತರುತ್ತಿದೆ. ಆ ನಿಯಮವು ಹೀಗೆ ಹೇಳುತ್ತದೆ-

‘ಹಿಂದಿನ ಬೆಲೆ’ (Previous Price) ಕಡ್ಡಾಯ: ಇನ್ಮುಂದೆ ಯಾವುದೇ ಇ-ಕಾಮರ್ಸ್ ಸಂಸ್ಥೆ ರಿಯಾಯಿತಿ ಘೋಷಿಸುವಾಗ, ಆ ಉತ್ಪನ್ನದ ನೈಜ “ಹಿಂದಿನ ಬೆಲೆ”ಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು.

30 ದಿನಗಳ ನಿಯಮ: ಈ ‘ಹಿಂದಿನ ಬೆಲೆ’ ಎಂದರೆ ಯಾವುದೋ ಕಾಲ್ಪನಿಕ ದರವಲ್ಲ! ರಿಯಾಯಿತಿ ಘೋಷಿಸುವ ಮುನ್ನ ಕಳೆದ 30 ದಿನಗಳಲ್ಲಿ ಆ ವೇದಿಕೆಯಲ್ಲಿ ಆ ವಸ್ತು ಮಾರಾಟವಾದ ಅತ್ಯಂತ ಕಡಿಮೆ ಬೆಲೆಯನ್ನು ಪರಿಗಣಿಸಬೇಕಾಗುತ್ತದೆ.

ಇದರಿಂದಾಗಿ ಗ್ರಾಹಕರು ತಮಗೆ ಸಿಗುತ್ತಿರುವುದು ನಿಜವಾದ ರಿಯಾಯಿತಿಯೋ ಅಥವಾ ನಕಲಿ ಆಫರೋ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಜಗತ್ತಿನಾದ್ಯಂತ ಇದೆ ಇಂತಹ ಕಟ್ಟುನಿಟ್ಟಿನ ಕಾಯ್ದೆ

ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಇಂತಹ ನಿಯಮಗಳು ಈಗಾಗಲೇ ವಿಶ್ವದ ಪ್ರಮುಖ ದೇಶಗಳಲ್ಲಿ ಜಾರಿಯಲ್ಲಿವೆ:

ಅಮೆರಿಕ (FTC): ಜಾಹೀರಾತಿನಲ್ಲಿ ತೋರಿಸುವ “ಹಿಂದಿನ ಬೆಲೆ” ಸಂಪೂರ್ಣವಾಗಿ ಪ್ರಾಮಾಣಿಕವಾಗಿರಬೇಕು ಎಂದು ಫೆಡರಲ್ ಟ್ರೇಡ್ ಕಮಿಷನ್ ಸ್ಪಷ್ಟಪಡಿಸಿದೆ.

ಕ್ಯಾಲಿಫೋರ್ನಿಯಾ: ಆಫರ್ ನೀಡುವ 90 ದಿನಗಳ ಮೊದಲು ಮಾರುಕಟ್ಟೆಯಲ್ಲಿದ್ದ ಚಾಲ್ತಿ ಬೆಲೆಯನ್ನೇ ಮೂಲ ಬೆಲೆಯಾಗಿ ತೋರಿಸಬೇಕು.

ಯುರೋಪಿಯನ್ ಒಕ್ಕೂಟ (EU): 2022 ರಲ್ಲೇ EU 30 ದಿನಗಳ ಬೆಲೆ ಪರಿಶೀಲನೆ ನಿಯಮವನ್ನು ಜಾರಿಗೆ ತಂದಿದೆ.

ಇಂತಹ ಗ್ರಾಹಕ ರಕ್ಷಣಾ ಕ್ರಮಗಳು ಇತರ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಇವೆ.

ಆಫ್‌ಲೈನ್ ಅಂಗಡಿಗಳಿಗೂ ಈ ನಿಯಮ ಅಗತ್ಯ!

ಯುರೋಪಿಯನ್ ಒಕ್ಕೂಟದ ಮಾದರಿ ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಅವರು ಈ ನಿಯಮವನ್ನು ಆನ್‌ಲೈನ್ ಜೊತೆಗೆ  ಅಂಗಡಿ ಮಳಿಗೆಗಳಿಗೂ  (Offline Stores) ಅನ್ವಯಿಸಿದ್ದಾರೆ.

ಆನ್‌ಲೈನ್‌ನಲ್ಲಿ ಪ್ರೈಸ್ ಟ್ರ್ಯಾಕರ್ ಆ್ಯಪ್‌ಗಳ ಮೂಲಕ ಬೆಲೆಗಳ ಇತಿಹಾಸ ತಿಳಿಯಬಹುದು. ಆದರೆ, ನಿಮ್ಮ ಪಕ್ಕದ ಬಟ್ಟೆ ಅಂಗಡಿಯಲ್ಲಿ “60% ಡಿಸ್ಕೌಂಟ್” ಎಂದು ಮಂಡಿಸಿರುವ ಶರ್ಟ್ ನಿಜಕ್ಕೂ ಆಫರ್‌ನಲ್ಲಿದೆಯೋ ಅಥವಾ ಬೆಲೆ ಹೆಚ್ಚಿಸಿ ಮಾರಾಟ ಮಾಡುತ್ತಿದ್ದಾರೋ ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಹಾಗಾಗಿ, ಭಾರತದಲ್ಲೂ ಈ ಕಾಯ್ದೆಯನ್ನು ಆಫ್‌ಲೈನ್

ಒಲಿವರ್ ಡಿ’ಸೋಜಾ
ಮುಂಬೈ

ಇದನ್ನೂ ಓದಿ- https://kannadaplanet.com/why-did-the-yeshwantpur-mangalore-train-cover-an-additional-471-km/ ಯಶವಂತಪುರ–ಮಂಗಳೂರು ರೈಲು 471 ಕಿ.ಮೀ ಹೆಚ್ಚುವರಿ ಸುತ್ತೇಕೆ ?

More articles

Latest article

Most read