ಬೆಂಗಳೂರು : ಕೆಲಸ ಖಾಯಂಯಾತಿ ಸೇರಿದಂತೆ ತಮ್ಮ ಹಕ್ಕುಗಳಿಗೆ ಮನವಿ ಮಾಡಿಕೊಳ್ಳಲು ಬಂದ ಪೌರಕಾರ್ಮಿಕರನ್ನು ತಾವು ನಡೆಸಿಕೊಂಡ ರೀತಿ ತೀವ್ರ ಆಘಾತಕಾರಿ. ಸರ್ಕಾರಿ ಕೆಲಸಗಳನ್ನು ಮಾಡುವವರು ಯಾರೇ ಆಗಿದ್ದರೂ ಅವರು ಅದಕ್ಕೆ ಬದ್ಧರಾಗಿರಬೇಕು. ಅಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಜವಾಬ್ದಾರಿಯುತ ಸಚಿವರಾಗಿ ತಾವು ಪ್ರಶ್ನಿಸುವುದು ಸರಿ ಇರಬಹುದು. ಆದರೆ ನಿಮ್ಮ ಈ ಪ್ರಶ್ನಿಸುವ ಧೋರಣೆ ಸೆಲೆಕ್ಟಿವ್ ಮತ್ತು ಪೂರ್ವಗ್ರಹ ಮನಸ್ಥಿತಿಯಿಂದ ಕೂಡಿದ್ದರೆ ಅದು ಅಕ್ಷಮ್ಯ. ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಹಿರಿಯ ಪತ್ರಕರ್ತರು ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಮಾಡಿದ್ದಾರೆ.
ಪೌರಕಾರ್ಮಿಕರು ಶೇಕಡಾ 30 ರಷ್ಟು ಕೆಲಸ ಮಾಡುತ್ತಿಲ್ಲ , ಸಂಬಳ ಸವಲತ್ತುಗಳನ್ನು ಕೇಳುತ್ತೀರಾ ಎಂದು ತರಾಟೆಗೆ ತೆಗೆದುಕೊಳ್ಳುವ ನೀವು ಕಸವನ್ನು ಸೃಷ್ಟಿಸುವ ಎಲೈಟ್ ಸೊಸೈಟಿಯನ್ನು ಹೀಗೆ ಪ್ರಶ್ನಿಸ ಬಲ್ಲಿರಾ? ಪೌರಕಾರ್ಮಿಕರ ಜಾಡು ಮಾಲಿ ಹುದ್ದೆ ಸಾಮಾಜಿಕ ತಾರತಮ್ಯದಿಂದ ರೂಪುಗೊಂಡಿದ್ದು, ಸರ್ಕಾರಿ ಪ್ರಾಯೋಜಿತ ಶೋಷಣೆಯ ವಲಯ ಇದಾಗಿದೆ ಎಂದು ನಿಮಗೆ ಯಾವತ್ತಾದರೂ ಅನಿಸಿದೆಯಾ? ಎಂದು ಕೇಳಿದ್ದಾರೆ.
ಪೌರಕಾರ್ಮಿಕರಿಗೆ ಸ್ವಚ್ಛತಾ ಕಾರ್ಯಕ್ಕೆ ಪೂರಕವಾದ ಗ್ಲೌಸ್, ಗಮ್ ಬೂಟ್, ಮಾಸ್ಕ್ ಗಳನ್ನು ಸರ್ಕಾರ ಕೊಡುತ್ತಿದೆಯಾ? ನಿಗದಿತವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದೆಯಾ? ಶೇಕಡಾ 80 ರಷ್ಟು ಪೌರಕಾರ್ಮಿಕರು ನಿವೃತ್ತಿಯಾಗದೆ ಸೇವೆಯಲ್ಲಿದ್ದಾಗಲೇ ಟಿಬಿ, ಕ್ಯಾನ್ಸರ್, ಆಸ್ತಮಾ , ಶ್ವಾಸಕೋಶ ಇನ್ಫೆಕ್ಷನ್ ನಿಂದಾಗಿ ಜೀವ ಬಿಡುತ್ತಿದ್ದಾರೆ.
ಇದಕ್ಕೆ ಯಾರು ಹೊಣೆ?
ನಾಗರೀಕತೆ ವಿಪರೀತದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಕಸ ಸೃಷ್ಟಿ ಯಾಗುತ್ತಿದೆ. ಆಧುನಿಕತೆಯ ನಾಗಾಲೋಟದ ಈ ಹೊತ್ತಿನಲ್ಲೂ ಮಲಗುಂಡಿಗಳಲ್ಲಿ ಮುಳುಗಿ ಪೌರಕಾರ್ಮಿಕರು ಹೆಣವಾಗಿ ತೇಲು ವುದನ್ನು ಪ್ರಭುತ್ವ ಮತ್ತು ಸೋಕಾಲ್ಡ್ ನಾಗರೀಕ ಸಮಾಜ ನಿರ್ದಯವಾಗಿ ನೋಡುತ್ತಿದೆ.
ಗುತ್ತಿಗೆ ದಾರರ,ಅಧಿಕಾರಿಗಳ ಶೋಷಣೆ ಯಲ್ಲಿ ನಲುಗಿ ಹೋಗುತ್ತಿರುವಾಗ ಅಹವಾಲು ಹೇಳಿಕೊಳ್ಳಲು ಬಂದ ಪೌರಕಾರ್ಮಿಕರನ್ನು ನೀವು ಪ್ರಶ್ನಿಸಿದ ರೀತಿ, ಬಳಸಿದ ಭಾಷೆ ಎಲ್ಲವೂ ಸಂವೇದನಾ ರಹಿತವಾಗಿತ್ತು . ನಿರ್ದಯವಾಗಿತ್ತು. ಇದು ಖಂಡನೀಯ.
ಬಾಯಿಲ್ಲದ ಜನರನ್ನು ದಂಡಿಸುವುದು ಈ ಸಮಾಜಕ್ಕೆ ಅತಿ ಸುಲಭ, ಎಲ್ಲಾ ಜನಾಧಿಕಾರಗಳು ಜನರಿಂದಲೇ ಕೊಡಲ್ಪಟ್ಟಿವೆ. ಎಷ್ಟೇ ದೊಡ್ಡ ಅಧಿಕಾರ ಹೊಂದಿದ್ದರೂ ಅವೆಲ್ಲವೂ ಮೂಲಭೂತವಾಗಿ ಮಾನವತೆಯನ್ನು ಧರಿಸಿರಬೇಕು. ಇಂತಹ ಸಂವೇದನೆ ಕಳೆದುಕೊಂಡ ನೀವು ಅಧಿಕಾರದಲ್ಲಿ ಮುಂದುವರೆಯಲು ಯೋಗ್ಯರಲ್ಲ. ತಾವು ಈ ಕೂಡಲೇ ರಾಜೀನಾಮೆ ನೀಡಬೇಕು. ಪೌರಕಾರ್ಮಿಕ ಸಮುದಾಯದ ಬಳಿ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸುತ್ತೇವೆ.
ಪತ್ರಕರ್ತರು
ರುದ್ರಪ್ಪ ಸಿ,ಹಿರಿಯ ಪತ್ರಕರ್ತ ಮತ್ತು ಲೇಖಕ
ಎನ್. ರವಿಕುಮಾರ್ ಟೆಲೆಕ್ಸ್ ಪತ್ರಕರ್ತರು ಶಿವಮೊಗ್ಗ
ಕೆ ಪಿ ಶ್ರೀಪಾಲ್ ನ್ಯಾಯವಾದಿ ಶಿವಮೊಗ್ಗ
ವೈ ಜಿ ಅಶೋಕ್ ಕುಮಾರ್
ಕೆ ಎಲ್ ಅಶೋಕ್
ರಶ್ಮಿ ಎಸ್ ಪತ್ರಕರ್ತರು ಮತ್ತು ಲೇಖಕಿ ಬೆಂಗಳೂರ
ಬಸವರಾಜ ಸೂಳಿಭಾವಿ (ಬಸೂ) ಪ್ರಕಾಶಕ ಮತ್ತು ಲೇಖಕ ಗದಗ
ಮೀನಾಕ್ಷಿ ಬಾಳಿ ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತರು ಕಲಬುರ್ಗಿ
ಡಾ. ಎಚ್ ಎಸ್ ಅನುಪಮಾ ವೈದ್ಯರು ಮತ್ತು ಲೇಖಕಿ ಕವಲಕ್ಕಿ
ಸೂರ್ಯನಾರಾಯಣ ಎಚ್ಚರಿಕೆ ಪತ್ರಕರ್ತರು
ವೈದ್ಯನಾಥ ಪತ್ರಕರ್ತರು
ಸನತಕುಮಾರ ಬೆಳಗಲಿ ಹಿರಿಯ ಪತ್ರಕರ್ತರು ಧಾರವಾಡ
ಶಿವಾಜಿ ಗಣೇಶನ್ ಹಿರಿಯ ಪತ್ರಕರ್ತರು ಬೆಂಗಳೂರ
ಕೆ ಪಿ ಸುರೇಶ ಲೇಖಕ ಮೈಸೂರ
ಉಗಮ ಶ್ರೀನಿವಾಸ ಪತ್ರಕರ್ತ ಮತ್ತು ರಂಗಕರ್ಮಿ ತುಮಕೂರ
ರವಿಕುಮಾರ ನೀಹ ಲೇಖಕರು ತುಮಕೂರ
ಡಾ. ಕೇಶವ ಶರ್ಮಾ ನಿವೃತ್ತ ಪ್ರಾಧ್ಯಾಪಕ ಮತ್ತು ಲೇಖಕ ಶಿವಮೊಗ್ಗ
ಅನಿಲ ಹೊಸಮನಿ ಪತ್ರಕರ್ತರು ಬಿಜಾಪುರ
ಡಾ. ಸುಶಿ ಕಾಡನಕುಪ್ಪೆ ವೈದ್ಯರು ಮತ್ತು ಲೇಖಕಿ ಬೆಂಗಳೂರ
ನಂದಕುಮಾರ ಕುಂಮ್ರಿ ಉಬ್ಬು ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತ ಕೊಪ್ಪ
ಮುತ್ತು ಬಿಳೆಯಲಿ ಸಾಮಾಜಿಕ ಕಾರ್ಯಕರ್ತ ಗದಗ
ಮಹೇಶ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹುಬ್ಬಳ್ಳಿ
ಸಿ. ಎಚ್. ಭಾಗ್ಯ ಲೇಖಕಿ ಮಂಗಳೂರ
ಹಡವನಹಳ್ಳಿ ವೀರಣ್ಣಗೌಡ ಸಾಮಾಜಿಕ ಕಾರ್ಯಕರ್ತ
ಪ್ರಿಯಾಂಕ ಮಾವಿನಕರ ಕವಯಿತ್ರಿ ಕಲಬುರ್ಗಿ
ಇಮ್ತಿಯಾಜ್ ಹುಸೇನ ಲೇಖಕರು ದಾವಣಗೆರೆ
ಸುಭಾನು ರಾರಾವಿ ಸಾಮಾಜಿಕ ಕಾರ್ಯಕರ್ತರು
ಡಾ. ಶಶಿಕಾಂತ ಕೆ ಪ್ರಾಧ್ಯಾಪಕ ಲಿಂಗಸುಗೂರ
ಶರಣಬಸಪ್ಪ ಮರದ ನ್ಯಾಯವಾದಿ ಬೆಂಗಳೂರ
ವೃಂದಾ ಹೆಗಡೆ ಪ್ರಾಧ್ಯಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸಾಗರ
ಶರಣು ಶೆಟ್ಟರ ರಂಗಕರ್ಮಿ ಕೊಪ್ಪಳ
ಚಂದ್ರು ತೋರಹುಣಸೆ ಪತ್ರಕರ್ತ ಬೆಂಗಳೂರ
ಸಿದ್ದಾರ್ಥ ಸಿಂಗೆ ಸಾಮಾಜಿಕ ಕಾರ್ಯಕರ್ತ ಅಥಣಿ
ಮಾರುತಿ ಹಿಪ್ಪರಗಿ ಪತ್ರಕರ್ತ ಮುದ್ದೇಬಿಹಾಳ
ಶಿವರಾಜ ಮೋತಿಲಾಲ ನ್ಯಾಯವಾದಿ
ಡೊಡ್ಡಿಪಾಳ್ಯ ನರಸಿಂಹಮೂರ್ತಿ ಪತ್ರಕರ್ತರು ಬೆಂಗಳೂರ
ಸೋಮಶೇಖರ ಚಲ್ಯ ಸಾಮಾಜಿಕ ಕಾರ್ಯಕರ್ತರು
ಕಿರಣ ಕೆ ಎಲ್ ಸಾಮಾಜಿಕ ಕಾರ್ಯಕರ್ತರು
ಎಚ್. ಬಿ. ರಾಘವೇಂದ್ರ ಪತ್ರಕರ್ತರು ಸಾಗರ
ವಿಜಯಕಾಂತ ಪಾಟೀಲ ಲೇಖಕರು ಮತ್ತು ನ್ಯಾಯವಾದಿ ಹಾನಗಲ್ಲ
ಮುತ್ತುರಾಜ ಪತ್ರಕರ್ತರು ಬೆಂಗಳೂರ
ದೇವರಾಜ ಹುಣಸಿಕಟ್ಟೆ ಲೇಖಕರು ರಾಣೇಬೆನ್ನೂರ
ಬಸವರಾಜ ಪೂಜಾರ ಡಿವೈಎಫ್ಐ ಹಾವೇರಿ
ಶಿವಾನಂದ ಕರ್ಕಿ ಪತ್ರಕರ್ತರು
ಮಂಜುನಾಥ ಕಾಡಜ್ಜಿ ಪತ್ರಕರ್ತ
ಸಿದ್ದಪ್ಪ ಬಿ ನಿವೃತ್ತ ಲೆಕ್ಕಾಧಿಕಾರಿ ಹಿರಿಯೂರು
ಹರ್ಷಕುಮಾರ್ ಕುಗ್ವೆ, ಪತ್ರಕರ್ತ
ದಿನೇಶ್ ಕುಮಾರ್ ಎಸ್ ಸಿ, ಹಿರಿಯ ಪತ್ರಕರ್ತ
ಗುಲಾಬಿ ಬಿಳಿಮಲೆ, ಹಿರಿಯ ಲೇಖಕಿ, ಪತ್ರಕರ್ತೆ
ಮನೋಜ್ ಆರ್ ಕಂಬಳಿ, ಪತ್ರಕರ್ತ
ಸುಚಿ ಎಸ್, ಲೇಖಕಿ

