ಮೆಟ್ಟೂರಿನ ಸ್ಟಾನ್ಲಿ ಜಲಾಶಯದ ಸ್ಲೂಯಿಸ್‌ ಗೇಟ್‌ಗಳಿಂದ ನೀರು ಹರಿಯಲು ಚಾಲನೆ ನೀಡಿದ ಸಿಎಂ ವಿಜಯ್‌

ಸೇಲಂ :  ಕಾವೇರಿ ಡೆಲ್ಟಾ ಜಿಲ್ಲೆಗಳಲ್ಲಿನ ನೀರಾವರಿಗಾಗಿ ಮೆಟ್ಟೂರಿನ ಸ್ಟಾನ್ಲಿ ಜಲಾಶಯದ ಸ್ಲೂಯಿಸ್ ಗೇಟ್‌ಗಳನ್ನು (ನೀರು ಹೊರಬಿಡುವ ದ್ವಾರಗಳು) , ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮಂಗಳವಾರ ಉದ್ಘಾಟಿಸಿದರು. 

ಎನ್. ಆನಂದ್ ಸೇರಿದಂತೆ ತಮ್ಮ ಸಂಪುಟ ಸಹೋದ್ಯೋಗಿಗಳ ಸಮ್ಮುಖದಲ್ಲಿ, ವಿಜಯ್ ಅವರು ಸ್ಲೂಯಿಸ್ ಗೇಟ್‌ಗಳ ಮೂಲಕ ನೀರು ಹರಿಯಲು ಚಾಲನೆ ನೀಡಿದರು. ಕಾವೇರಿ ನೀರು ಹೊರಹರಿವನ್ನು ಸೂಚಿಸುವಂತೆ ರಭಸದಿಂದ ಹರಿಯುತ್ತಿದ್ದ ನೀರಿನ ಮೇಲೆ ಹೂವುಗಳನ್ನು ಚೆಲ್ಲಿದರು.

ರಾಜ್ಯದ ಡೆಲ್ಟಾ ಪ್ರದೇಶಗಳ ರೈತರ ಜೀವನಾಡಿಯಾಗಿರುವ ಐತಿಹಾಸಿಕ ಮೆಟ್ಟೂರು ಅಣೆಕಟ್ಟಿನಿಂದ ನೀರು ಬಿಡುವ ಪ್ರಕ್ರಿಯೆಗೆ, ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ವಿಜಯ್ ಆಗಮಿಸಿದ್ದು ಇದೇ ಮೊದಲ ಬಾರಿಗೆ.  ಅಣೆಕಟ್ಟಿನ ಆವರಣದಲ್ಲಿ ರೈತರೊಂದಿಗೆ ಫೋಟೋಗೆ ಪೋಸ್ ನೀಡಿದರು. ರೈತರು ಮತ್ತು ಕೃಷಿಯ ಸಂಕೇತವೆಂದು ಪರಿಗಣಿಸಲಾಗುವ ಹಸಿರು ಶಾಲು ಧರಿಸಿದ್ದ ಅವರು, ರೈತರೊಂದಿಗೆ ಸಂವಾದ ನಡೆಸಿದರು.

45 ದಿನಗಳ ಅವಧಿಯಲ್ಲಿ ಅಣೆಕಟ್ಟಿನಿಂದ ಬಿಡುಗಡೆಯಾಗುವ ನೀರು ಸುಮಾರು 12 ಜಿಲ್ಲೆಗಳಿಗೆ ತಲುಪಲಿದೆ.  ತಮಿಳುನಾಡಿನ ‘ಭತ್ತದ ಕಣಜ’ ಎಂದು ಪರಿಗಣಿಸಲ್ಪಟ್ಟಿರುವ ತಂಜಾವೂರಿನ ರೈತರು ಇದರ  ಪ್ರಮುಖ ಫಲಾನುಭವಿಗಳಾಗಿದ್ದಾರೆ.

ಸೆಪ್ಟೆಂಬರ್ 1ರ ಮಾಹಿತಿಯಂತೆ, ಮೆಟ್ಟೂರು ಅಣೆಕಟ್ಟಿನ ಗರಿಷ್ಠ ಮಟ್ಟವಾದ 120 ಅಡಿಗಳ ಪೈಕಿ ಪ್ರಸ್ತುತ 91.56 ಅಡಿಗಳಷ್ಟು ನೀರು ಸಂಗ್ರಹವಿದೆ.

ಸಾಮಾನ್ಯವಾಗಿ ಜೂನ್ 12ರಂದು ಅಣೆಕಟ್ಟಿನ ಸ್ಲೂಯಿಸ್ ಗೇಟ್‌ಗಳನ್ನು (ನೀರು ಬಿಡುವ ಬಾಗಿಲುಗಳು) ತೆರೆಯುವುದು ವಾಡಿಕೆಯಾಗಿದ್ದರೂ, ಮಳೆ ಕೊರತೆ ಮತ್ತು ಕಡಿಮೆ ನೀರಿನ ಸಂಗ್ರಹ ಮಟ್ಟದ ಕಾರಣದಿಂದಾಗಿ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.

More articles

Latest article

Most read