3.7 ಟನ್ ಅವಧಿ ಮುಗಿದ ಶಿಶು ಆಹಾರ ವಶಪಡಿಸಿಕೊಂಡ FSSAI

ಬೆಂಗಳೂರು: ಅವಧಿ ಮುಗಿದ ಹಾಗೂ ಅವುಗಳಿಗೆ ತಪ್ಪು ಲೇಬಲ್‌ ಅಂಟಿಸಿದ್ದ ಸುಮಾರು 3.7 ಶಿಶುಗಳಿಗೆ ತಿನ್ನಿಸುವ ಆಹಾರವನ್ನು FSSAI ವಶಪಡಿಸಿಕೊಂಡಿದೆ.

ಶಿಶು ಆಹಾರದ ಸುರಕ್ಷತೆ ಮತ್ತು ನಿಯಮಗಳ ಅನುಸರಣೆಗೆ ಸಂಬಂಧಿಸಿದ ಪರಿಶೀಲನೆಗಳ ನಂತರ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ಬೆಂಗಳೂರು ಮೂಲದ ನ್ಯೂಟ್ರಾಸ್ಯುಟಿಕಲ್ ಮತ್ತು ಆರೋಗ್ಯ ರಕ್ಷಣಾ ಕಂಪನಿಯಾದ ‘ಬ್ರಿಟಿಷ್ ಲೈಫ್‌ಸೈನ್ಸಸ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಕಠಿಣ ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ.

“FSS ಕಾಯಿದೆ, 2006ರ ಅಡಿಯಲ್ಲಿ ತಪ್ಪು ಲೇಬಲ್ ಹೊಂದಿದ್ದ ಗಣನೀಯ ಪ್ರಮಾಣದ ಶಿಶು ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ. ಆಹಾರ ವ್ಯವಹಾರ ನಿರ್ವಾಹಕರ (FBO) ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಿದೆ.  ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006ರ ಅಡಿಯಲ್ಲಿ ತಪ್ಪು ಲೇಬಲ್ ಹೊಂದಿದ್ದ ಗಣನೀಯ ಪ್ರಮಾಣದ ಶಿಶು ಆಹಾರವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆಹಾರ ವ್ಯವಹಾರ ನಿರ್ವಾಹಕರ (FBO) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ನಿಯಮ ಉಲ್ಲಂಘನೆಯ ಗಂಭೀರತೆ ಮತ್ತು ನಿಯಮಗಳಿಗೆ ಅನುಗುಣವಾಗಿಲ್ಲದ ಶಿಶು ಆಹಾರ ಉತ್ಪನ್ನಗಳಿಂದ ಉಂಟಾಗಬಹುದಾದ ಅಪಾಯಗಳನ್ನು ಪರಿಗಣಿಸಿ, ಅವಧಿ ಮುಗಿದಿದ್ದ 3.7 ಮೆಟ್ರಿಕ್ ಟನ್ ಶಿಶು ಆಹಾರ ಪದಾರ್ಥಗಳನ್ನು ನಾಶಪಡಿಸಲು ನ್ಯಾಯಾಲಯ ಆದೇಶಿಸಿತು. ಅವಧಿ ಮುಗಿದಿದ್ದ ಈ ಸರಕನ್ನು ಮರುಬಳಕೆ ಮಾಡುವುದನ್ನು ಅಥವಾ ಆಹಾರ ಸರಪಳಿಗೆ ಮರುಸೇರ್ಪಡೆಯಾಗುವುದನ್ನು ತಡೆಯಲು ಅದನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಲಾಯಿತು.

ಈ ಜಾರಿ ಕ್ರಮವು ಶಿಶುಗಳು ಮತ್ತು ಚಿಕ್ಕ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯನ್ನು ರಕ್ಷಿಸುವ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ ಎಂದು FSSAI ತಿಳಿಸಿದೆ. 

More articles

Latest article

Most read