ಕಾನ್ಪುರದಲ್ಲಿ ತರಬೇತಿ ವಿಮಾನ ಪತನ : ಕರ್ನಾಟಕದ ಪೈಲಟ್‌ ಸೇರಿ ಇಬ್ಬರ ದುರ್ಮರಣ

ಕಾನ್ಪುರ : ಕಾನ್ಪುರದ ಗಂಗಾ ಬ್ಯಾರೇಜ್ ಸಮೀಪದ ನಾಥುಪುರ್ವಾ ಗ್ರಾಮದ ಬಳಿಯ ಹೊಲವೊಂದರಲ್ಲಿ ಅವಳಿ-ಎಂಜಿನ್ ತರಬೇತಿ ವಿಮಾನವೊಂದು ಪತನಗೊಂಡ ಪರಿಣಾಮ ಓರ್ವ ಕರ್ನಾಟಕದ ಪೈಲಟ್‌ ಸೇರಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.

ಮೃತರನ್ನು ಗುಜರಾತ್ ಮೂಲದ ತರಬೇತುದಾರ ಸಚಿನ್ ಭಾಟಿಯಾ ಮತ್ತು ಕರ್ನಾಟಕದ ತರಬೇತಿ ಪಡೆಯುತ್ತಿದ್ದ ಪೈಲಟ್ ಅಭಿಷೇಕ್ ಪೂಜಾರಿ ಎಂದು ಕಾನ್ಪುರ ಪೊಲೀಸ್ ಆಯುಕ್ತ ರಘುವೀರ್ ಲಾಲ್ ಗುರುತಿಸಿದ್ದಾರೆ.

ಪೊಲೀಸರ ಪ್ರಕಾರ, ವಿಮಾನವು ಬೆಳಿಗ್ಗೆ 11:30ರ ಸುಮಾರಿಗೆ ‘ಗಾರ್ಗ್ ಏವಿಯೇಷನ್ ​​ಟ್ರೈನಿಂಗ್ ಸೆಂಟರ್’ನಿಂದ ಹಾರಾಟ ಆರಂಭಿಸಿತ್ತು ಮತ್ತು ಕೇಂದ್ರಕ್ಕೆ ಹಿಂತಿರುಗುವಾಗ ಸುಮಾರು 11:50ರ ವೇಳೆಗೆ ಪತನಗೊಂಡಿತು.

ಪೊಲೀಸರು ಸ್ಥಳವನ್ನು ತಮ್ಮ ವಶಕ್ಕೆ ಪಡೆದು ಪ್ರವೇಶವನ್ನು ನಿರ್ಬಂಧಿಸಿದ ನಂತರ, ಅಪಘಾತ ಸ್ಥಳದಿಂದ ಮೃತದೇಹಗಳನ್ನು ಹೊರತೆಗೆಯಲಾಯಿತು.
ನಾಲ್ಕು ಆಸನಗಳ ಈ ವಿಮಾನವು ‘ಗಾರ್ಗ್ ಏವಿಯೇಷನ್’ ನಿರ್ವಹಿಸುತ್ತಿದ್ದ ‘ಟೆಕ್ನಾಮ್’ (Tecnam) ಅವಳಿ-ಎಂಜಿನ್ ವಿಮಾನವಾಗಿತ್ತು. ಭಾಟಿಯಾ ಅವರು ಸುಮಾರು 3,000 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಮಾನವನ್ನು 2023ರಲ್ಲಿ ತರಬೇತಿ ಕೇಂದ್ರಕ್ಕೆ ತರಲಾಗಿತ್ತು ಎಂದು ವರದಿಯಾಗಿದೆ.

More articles

Latest article

Most read