ಫಿಟ್ಸ್‌ ಬಂದಂತೆ ನಾಟಕವಾಡಿ ಮಧುರೈ ಜೈಲಿನಿಂದ 17 ಕೈದಿಗಳು ಪರಾರಿ!

ಸಹಾಯಕ್ಕೆ ಬಂದ ಸಿಬ್ಬಂದಿ ಮೇಲೆ ಹಲ್ಲೆ; ನಾಲ್ವರ ಬಂಧನ, ಉಳಿದ 13 ಮಂದಿಗಾಗಿ ತೀವ್ರ ಶೋಧ

ಮಧುರೈ, ಅ. 27: ಅಪಸ್ಮಾರ (ಫಿಟ್ಸ್) ಬಂದಂತೆ ನಟಿಸಿ ಜೈಲು ಸಿಬ್ಬಂದಿಯನ್ನು ಯಾಮಾರಿಸಿದ 17 ವಿಚಾರಣಾಧೀನ ಕೈದಿಗಳು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜೈಲಿನಿಂದ ಪರಾರಿಯಾಗಿರುವ ಘಟನೆ ತಮಿಳುನಾಡಿನ ಥೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪಕಾರಾಗೃಹದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಕೆಲವು ಕೈದಿಗಳು ತಮಗೆ ಅಪಸ್ಮಾರ ಬಂದಂತೆ ನಟಿಸಿದ್ದಾರೆ. ಅವರನ್ನು ರಕ್ಷಿಸಲು ಜೈಲು ಸಿಬ್ಬಂದಿ ಕೊಠಡಿಯ ಬಾಗಿಲು ತೆರೆದ ತಕ್ಷಣ ಕೈದಿಗಳು ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಮೂವರು ಜೈಲು ಸಿಬ್ಬಂದಿ ಗಾಯಗೊಂಡಿದ್ದಾರೆ. ಎರಡನೇ ದರ್ಜೆಯ ಪೊಲೀಸ್ ಕಾನ್‌ಸ್ಟೆಬಲ್ ತಂಗಪಾಂಡಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಜಿ. ವಿಲಕ್ಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಾಲ್ವರ ಬಂಧನ, 13 ಮಂದಿಗಾಗಿ ಹುಡುಕಾಟ

ಪರಾರಿಯಾದ 17 ಕೈದಿಗಳ ಪೈಕಿ ನಾಲ್ವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಮೊದಲು ಪ್ರವೀಣ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಥೇಣಿಯ ಸಿಲಂಬರಸನ್ ಹಾಗೂ ಮಧುರೈನ ರಾಜಾ ಸಿಕಂದರ್ ಮತ್ತು ರಾಜ್‌ಕುಮಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ಉಳಿದ 13 ಕೈದಿಗಳ ಪತ್ತೆಗಾಗಿ 17 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ದಕ್ಷಿಣ ವಲಯದ ಪೊಲೀಸ್ ಮಹಾನಿರೀಕ್ಷಕ ವಿಜಯೇಂದ್ರ ಬಿದರಿ ತಿಳಿಸಿದ್ದಾರೆ.

ಪರಾರಿಯಾದ ಕೈದಿಗಳು ತಪ್ಪಿಸಿಕೊಳ್ಳದಂತೆ ದಿಂಡಿಗಲ್ ಜಿಲ್ಲೆಯಾದ್ಯಂತ 16 ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

More articles

Latest article

Most read