ನೇಪಾಳ ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡಿರುವ ರಾಜ್ಯದ ಜನರ ವಿವರ ಕೋರಿದ ಸರ್ಕಾರ

ಬೆಂಗಳೂರು: ನೇಪಾಳ-ಟಿಬೆಟ್ ಗಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಸಿಕ್ಕಿಹಾಕಿಕೊಂಡಿರಬಹುದಾದ ರಾಜ್ಯದ ಜನರ ವಿವರಗಳನ್ನು ಕರ್ನಾಟಕ ಸರ್ಕಾರ ಕೋರಿದೆ.

ರಕ್ಷಣಾ ಕಾರ್ಯ, ಸ್ಥಳಾಂತರ ಮತ್ತು ಇತರ ನೆರವಿಗಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ   ಹಾಗೂ ನೇಪಾಳ ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಮನ್ವಯ ಸಾಧಿಸಲು, ಕಂದಾಯ ಇಲಾಖೆಯು ‘ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ’ದ ಮೂಲಕ ಸಿಕ್ಕಿಹಾಕಿಕೊಂಡಿರುವ ಜನರು, ಅವರ ಸಂಬಂಧಿಕರು ಮತ್ತು ಪ್ರವಾಸ ಸಂಘಟಕರಿಗೆ ಗೂಗಲ್ ಫಾರ್ಮ್  ಮೂಲಕ ಆದಷ್ಟು ಬೇಗ ವಿವರಗಳನ್ನು ಸಲ್ಲಿಸುವಂತೆ ಕೋರಿದೆ.

ಪ್ರವಾಹ ಪೀಡಿತ ಪ್ರದೇಶದಲ್ಲಿನ ಜನರ ಸ್ಥಿತಿಗತಿಯ ಕುರಿತು ನೇಪಾಳ ಪ್ರವಾಸೋದ್ಯಮ ಮಂಡಳಿಯು ಬುಧವಾರ ಮಾಹಿತಿ ನೀಡಿದ್ದು, 291 ವಿದೇಶಿ ಪ್ರಜೆಗಳು ಮತ್ತು 93 ನೇಪಾಳಿ ನಿವಾಸಿಗಳು ಸೇರಿದಂತೆ ಒಟ್ಟು 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಈ ಅಂಕಿಅಂಶಗಳು ಪ್ರಾಥಮಿಕ ಹಂತದ್ದಾಗಿದ್ದು, ಪ್ರವಾಸ ಏಜೆನ್ಸಿಗಳು, ಮಾರ್ಗದರ್ಶಿಗಳು, ಸ್ಥಳೀಯ ಆಡಳಿತ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.

ಪಟ್ಟಿಯಲ್ಲಿರುವ 291 ವಿದೇಶಿ ಪ್ರಜೆಗಳ ಪೈಕಿ ಹಲವರು ಭಾರತೀಯರು ಎಂದು ಗುರುತಿಸಲಾಗಿದೆ, ಆದರೆ ಇನ್ನು ಕೆಲವರ ರಾಷ್ಟ್ರೀಯತೆಯನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ.

ಸಹಾಯಕ್ಕಾಗಿ SEOC ಹೆಲ್ಪ್‌ಲೈನ್ ಸಂಖ್ಯೆಗಳಾದ 1070 ಮತ್ತು 080-22253707 ಹಾಗೂ ಇಮೇಲ್ ವಿಳಾಸ [email protected] ಅನ್ನು ಒದಗಿಸಿದೆ.

ಸಚಿವ ಪ್ರಿಯಾಂಕ್‌ ಖರ್ಗೆ , ಭಾರತೀಯ ನಾಗರಿಕರಿಗಾಗಿ ನೆರವು ಅಥವಾ ಮಾಹಿತಿಗೆ, ದಯವಿಟ್ಟು ಈ ಕೆಳಗಿನ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ತೆರೆದಿದ್ದಾರೆ:

+977 985 131 6807

+977 970 910 7500

+977 981 032 6117

ಈ ಸಂಖ್ಯೆಗಳು WhatsApp‌ನಲ್ಲಿ ಕೂಡ ಲಭ್ಯವಿವೆ.

ಸಹಾಯದ ಅಗತ್ಯವಿರುವ ಭಾರತದ ನಾಗರಿಕರು ಕೂಡಲೇ ಸಂಪರ್ಕಿಸುವಂತೆ ಕೋರಲಾಗಿದೆ.

More articles

Latest article

Most read