ಮಂಗಳೂರು: ಕಳೆದ ತಿಂಗಳು ಮಂಗಳೂರು ನಗರ, ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದ 21 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಮಂಗಳೂರು ಪೊಲೀಸರ ತಂಡ ಭಾನುವಾರ ಪಶ್ಚಿಮ ಬಂಗಾಳದ ಮಾಲ್ಡಾಗೆ ಕರೆದೊಯ್ಯಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ, ಪೊಲೀಸ್ ಆಯುಕ್ತರಾದ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಈ ಕಾರ್ಯಾಚರಣೆಗಾಗಿ 30 ಮಂದಿ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ,
ಆಗಸ್ಟ್ 23 ರಂದು ಭಾನುವಾರ, ಬಾಂಗ್ಲಾದೇಶದ ಪ್ರಜೆಗಳನ್ನು ರೈಲಿನಲ್ಲಿ ಮಾಲ್ಡಾಗೆ ಕರೆದೊಯ್ಯಲಿದ್ದು, ನಂತರ ಆಗಸ್ಟ್ 26 ರೊಳಗೆ ಅವರನ್ನು ಬಿಎಸ್‌ಎಫ್ (BSF) ಸಿಬ್ಬಂದಿಗೆ ಹಸ್ತಾಂತರಿಸಲಾಗುವುದು ತದನಂತರ, BSF ನವರು ಇವರನ್ನು ಗಡೀಪಾರು ಮಾಡುವ ಕುರಿತು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ, ಎಂದು ತಿಳಿಸಿದರು.
ಕಳೆದ ಜುಲೈನಲ್ಲಿ, ಮಂಗಳೂರು ನಗರದಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ, ಸುರತ್ಕಲ್, ಮತ್ತು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ “ಸುರತ್ಕಲ್” ಹಾಗೂ “ಕೋಡಿಕಲ್” ಪ್ರದೇಶಗಳಲ್ಲಿ, 21 ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ನೆಲೆಸಿರುವುದನ್ನು, ಮಂಗಳೂರು ಪೊಲೀಸರು ಪತ್ತೆ ಹಚ್ಚಿದ್ದರು

