ರಷ್ಯಾದ ಶಾಪಿಂಗ್‌ ಸೆಂಟರ್‌ ಮೇಲೆ ಡ್ರೋನ್‌ ದಾಳಿ, 16 ಮಂದಿ ಸಾವು

ಕೈವ್:  ಪೂರ್ವ ಉಕ್ರೇನ್‌ನ ಜನನಿಬಿಡ ಶಾಪಿಂಗ್ ಸೆಂಟರ್ ಒಂದರ ಮೇಲೆ ರಷ್ಯಾದ ಡ್ರೋನ್‌ಗಳು  ದಾಳಿ ನಡೆದ ಪರಿಣಾಮ 16 ಜನರು ಸಾವನ್ನಪ್ಪಿದ್ದಾರೆ. ಈ ದಾಳಿಯನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ “ಕ್ರೂರ ಮತ್ತು ಹೇಯ” ಎಂದು ಖಂಡಿಸಿದ್ದಾರೆ.

ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಉಕ್ರೇನಿಯನ್ ನಗರಗಳ ಮೇಲೆ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿರುವ ನಡುವೆಯೇ, ಝೆಲೆನ್ಸ್ಕಿ ಅವರ ತವರು ನಗರವಾದ ಕ್ರಿವೈ ರಿಗ್ ಮೇಲೆ ಈ ದಾಳಿ ನಡೆದಿದೆ.

ದಕ್ಷಿಣದ ಮೈಕೊಲೈವ್ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವ ಇವಾನ್ ವಿಗಿವ್ಸ್ಕಿ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.

ಕ್ರಿವೈ ರಿಗ್ ಘಟನೆಯ ಸಾಮಾಜಿಕ ಜಾಲತಾಣದ ವೀಡಿಯೊಗಳಲ್ಲಿ, ಕಟ್ಟಡದಿಂದ ಹೊಗೆ ಹೊರಹೊಮ್ಮುತ್ತಿರುವಾಗ ರಕ್ಷಣಾ ಸಿಬ್ಬಂದಿ ಹೊರಗಿನ ರಸ್ತೆಯಲ್ಲಿ ಗಾಯಗೊಂಡವರಿಗೆ ಸಹಾಯ ಮಾಡಲು ಧಾವಿಸುತ್ತಿರುವುದು ಕಂಡುಬಂದಿದೆ.

ಮೊದಲ ದಾಳಿ ನಡೆದ ಸುಮಾರು ಅರ್ಧ ಗಂಟೆಯ ನಂತರ ಎರಡನೇ ಡ್ರೋನ್ ಕಟ್ಟಡದ ಮೇಲ್ಛಾವಣಿಗೆ ಅಪ್ಪಳಿಸಿತು. ಇದು ತುರ್ತು ಸೇವಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿ ಎಂದು ಝೆಲೆನ್ಸ್ಕಿ ‘ಎಕ್ಸ್’  ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಮತ್ತು 130 ಮಂದಿ ಗಾಯಗೊಂಡಿದ್ದಾರೆ (ಅವರಲ್ಲಿ 23 ಮಂದಿ ಮಕ್ಕಳು) ಎಂದು ಉಕ್ರೇನ್‌ನ ತುರ್ತು ಸೇವೆಗಳು ಆರಂಭದಲ್ಲಿ ತಿಳಿಸಿದ್ದವು.

ನಂತರ ಡ್ನಿಪ್ರೊಪೆಟ್ರೋವ್ಸ್ಕ್  ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ಒಲೆಕ್ಸಾಂಡರ್ ಗಾಂಜಾ ಟೆಲಿಗ್ರಾಮ್‌ನಲ್ಲಿ, “ಶತ್ರುಗಳ ದಾಳಿಯಿಂದಾಗಿ ಸಾವಿನ ಸಂಖ್ಯೆ 16ಕ್ಕೆ ಏರಿದೆ” ಎಂದು ತಿಳಿಸಿದರು.

ಯುದ್ಧದ ಅವಧಿಯುದ್ದಕ್ಕೂ ರಷ್ಯಾದ ನಿರಂತರ ದಾಳಿಗಳಿಗೆ ತುತ್ತಾಗಿರುವ ಕ್ರಿವೈ ರಿಗ್, ಮುಂಚೂಣಿ ಪ್ರದೇಶದಿಂದ (ಫ್ರಂಟ್ ಲೈನ್) ಸುಮಾರು 60 ಕಿಲೋಮೀಟರ್ (37 ಮೈಲುಗಳು) ದೂರದಲ್ಲಿರುವ ಕೈಗಾರಿಕಾ ನಗರವಾಗಿದೆ.

More articles

Latest article

Most read