‘ಸೋನಿಯಾ ಪಾದದ ಧೂಳಿಗೂ ನೀವು ಸಮ ಅಲ್ಲ’: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ‘ವಂದೇ ಮಾತರಂ’ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ಕರ್ನಾಟಕ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸೋನಿಯಾ ಗಾಂಧಿ ಅವರ ದೇಶಭಕ್ತಿಯನ್ನು ಪ್ರಶ್ನಿಸಿರುವ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮೂಲಕ ತೀವ್ರ ವಾಗ್ದಾಳಿ ನಡೆಸಿದೆ. ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ಅವರ ದೇಶಭಕ್ತಿಯ ಬಗ್ಗೆ ಪ್ರಶ್ನಿಸಿದ್ದರು ಎಂಬ ವರದಿಗಳು ಪ್ರಕಟವಾಗಿವೆ.

‘ಮಿಸ್ಟರ್ ಕುಮಾರಸ್ವಾಮಿ ಅವರೇ, ಸೋನಿಯಾ ಗಾಂಧಿ ಅವರು ಇಟಲಿಯಲ್ಲೇ ಜನಿಸಿರಬಹುದು. ಆದರೆ ಭಾರತದ ಸೊಸೆಯಾಗಿ ಅವರು ಮಾಡಿರುವ ಸೇವೆ, ತ್ಯಾಗ ಅನನ್ಯ. ನಿಮ್ಮಂತಹ ಊಸರವಳ್ಳಿಗಳಿಂದ ಅವರಿಗೆ ದೇಶಭಕ್ತಿ ಪ್ರಮಾಣಪತ್ರ ಬೇಕಿಲ್ಲ’ ಎಂದು ಕಾಂಗ್ರೆಸ್‌ ಎಕ್ಸ್‌ನಲ್ಲಿ ಕಿಡಿಕಾರಿದೆ.

‘ನಿಸ್ವಾರ್ಥ ಸೇವೆಯಲ್ಲಿ ಅವರ ಎಡಗಾಲಿನ ಧೂಳಿಗೂ ನೀವು ಸಮರಲ್ಲ. ಕಾರಣ, ನಿಮ್ಮಲ್ಲಿ ಹರಿಯುತ್ತಿರುವುದು ಕೇವಲ ಅವಕಾಶವಾದಿ, ಸ್ವಾರ್ಥದ ರಕ್ತ’ ಎಂದು ಕಾಂಗ್ರೆಸ್‌ ಟೀಕಿಸಿದೆ. ಇದೇ ವೇಳೆ, ಕುಮಾರಸ್ವಾಮಿ ಅವರ ಕುಟುಂಬದ ವಿರುದ್ಧವೂ ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ. ‘ರಕ್ತದ ವಿಚಾರಕ್ಕೆ ಬರುವುದಾದರೆ, ಹಾಸನದಲ್ಲಿ ಮಾಡಿರುವ ಪಾಪದ ಕೃತ್ಯಗಳು ನಿಮ್ಮ ರಕ್ತ ಎಂತಹದ್ದು ಎಂದು ಹೇಳುತ್ತದೆ’ ಎಂದು ಆರೋಪಿಸಿದೆ.

‘ಈಗ ಆ ಅತ್ಯಾಚಾರಿಗೂ ನಮಗೂ ಸಂಬಂಧವಿಲ್ಲ ಎನ್ನಬೇಡಿ. ನಿಮ್ಮದೇ ನಾಲಿಗೆ “ಇವನು ರೇವಣ್ಣನ ಮಗ ಅಲ್ಲ, ನನ್ನ ಮಗ” ಎಂದು ಹೇಳಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ. ‘ಬೇರೆಯವರ ರಕ್ತದ ಬಗ್ಗೆ ಮಾತನಾಡುವ ಮುನ್ನ ನಿಮ್ಮ ರಕ್ತ ವೃಷಭಾವತಿ ಕೊಳಚೆ ನೀರಿಗಿಂತ ಕೊಳಕು ಎಂಬುದನ್ನು ಮರೆಯಬೇಡಿ’ ಎಂದು ಕಾಂಗ್ರೆಸ್‌ ತೀವ್ರ ವಾಗ್ದಾಳಿ ನಡೆಸಿದೆ.

‘ವಂದೇ ಮಾತರಂ’ ವಿವಾದದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಸೋನಿಯಾ ಗಾಂಧಿ ವಿರುದ್ಧ ವೈಯಕ್ತಿಕ ಟೀಕೆ ಮಾಡಿರುವುದು ಇದೀಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮತ್ತೊಂದು ಸುತ್ತಿನ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

More articles

Latest article

Most read