ಚಾಮರಾಜನಗರ ಶೂಟೌಟ್: ಇದು ಹತ್ಯಾಕಾಂಡ ಎಂದು ಆಕ್ರೋಶ ವ್ಯಕ್ತಪಡಿಸಿದ ತಮಿಳುನಾಡು ಸಿಎಂ ವಿಜಯ್

ಚೆನ್ನೈ/ ಚಾಮರಾಜನಗರ ಆ 17: ಹನೂರಿನಲ್ಲಿ ಮೂವರು ಮೃತಪಟ್ಟ ಎನ್‌ಕೌಂಟರ್ ಪ್ರಕರಣಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಹೃದಯವಿದ್ರಾವಕವಾಗಿದ್ದು, ಇದು ಹತ್ಯಾಕಾಂಡ ಎಂದು ಖಂಡಿಸಿರುವ ಅವರು, ಅರಣ್ಯ ಇಲಾಖೆ ನೀಡಿರುವ ವಿವರಣೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ. ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಸ್ವಗ್ರಾಮ ತಲುಪಿದ ಮೃತದೇಹಗಳು: ಮರಣೋತ್ತರ ಪರೀಕ್ಷೆ ಬಳಿಕ ಮೂವರ ಮೃತದೇಹಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಗಿದೆ. ಮರಿಯಮಂಗಲ ಗ್ರಾಮಕ್ಕೆ ಅಂಥೋಣಿಸಾಮಿ ಮೃತದೇಹ ತಲುಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಗನ್ನಾಥದೊಡ್ಡಿಯ ಪೀಟರ್ ಹಾಗೂ ಲಾರಸ್‌ದೊಡ್ಡಿಯ ಡೇವಿಡ್ ಮೃತದೇಹಗಳನ್ನೂ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಗಿದೆ. ಇಂದು ಮಧ್ಯಾಹ್ನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮೂವರ ಅಂತ್ಯಕ್ರಿಯೆ ನಡೆಯಲಿದೆ.

11 ಗಂಟೆಗೆ ಚರ್ಚ್‌ನಲ್ಲಿ ಪ್ರಾರ್ಥನೆ: ತೋಮಿಯಾರ್ ಪಾಳ್ಯ ಚರ್ಚ್‌ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಾರ್ಥನೆ ನಡೆಯಲಿದ್ದು, ಬಳಿಕ ಮೂವರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಲಿದೆ. ನಿನ್ನೆ ಪರಿಹಾರಕ್ಕಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ₹15 ಲಕ್ಷ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಶಾಸಕ ಮಂಜುನಾಥ್ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಗಿತ್ತು.

ಅರಣ್ಯ ಇಲಾಖೆ ಸಾಕ್ಷ್ಯ ಬಿಡುಗಡೆ: ಮೂವರು ಬೇಟೆಗಾರರೆಂದು ಆರೋಪಿಸಿರುವ ಅರಣ್ಯ ಇಲಾಖೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ವಸ್ತುಗಳನ್ನು ಬಹಿರಂಗಪಡಿಸಿದೆ. ಎರಡು ನಾಡಬಂದೂಕು, 38 ಗುಂಡುಗಳು, ಸುಮಾರು 20 ಕೆಜಿ ಪ್ರಾಣಿಮಾಂಸ, ಮೂರು ಚಾಕು, ಒಂದು ಮಚ್ಚು, ಮದ್ದಿನ ಪೌಡರ್ ಹಾಗೂ ಬ್ಯಾಟರಿ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ ಎಂದು ತಿಳಿಸಿದೆ.

20–30 ಕೆಜಿ ವನ್ಯಜೀವಿ ಮಾಂಸ ವಶ: ತನಿಖಾಧಿಕಾರಿ ದಿನೇಶ್‌ಕುಮಾರ್ ಮೀನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಚೀಲಗಳಲ್ಲಿ ಸುಮಾರು 20 ಕೆಜಿ ವನ್ಯಜೀವಿ ಮಾಂಸ ಪತ್ತೆಯಾಗಿದ್ದು, ತನಿಖಾಧಿಕಾರಿ ಸಮ್ಮುಖದಲ್ಲಿ ಮಾಂಸದ ಪರೀಕ್ಷೆ ನಡೆಸಲಾಗಿದೆ. ಪತ್ತೆಯಾದ ಮಾಂಸ ಯಾವ ಪ್ರಾಣಿಗೆ ಸೇರಿದ್ದು ಎಂಬುದನ್ನು ಪರಿಶೀಲಿಸಲಾಗುತ್ತಿದೆ.

More articles

Latest article

Most read