ಕೋಲಾರ : ದಲಿತ ಚಳುವಳಿಯ ಮುಂಚೂಣಿ ನಾಯಕ ಸಿ.ಎಂ ಮುನಿಯಪ್ಪನವರ ಆತ್ಮಕಥನ ʼಕಾಲಡಿಯ ಕಣ್ಣುʼ ಬಿಡುಗಡೆಗೊಂಡ ಕೇವಲ 15 ದಿನದೊಳಗೆ ಎರಡನೇ ಮುದ್ರಣ ಕಂಡಿದೆ. ಈ ಕುರಿತು ಕೃತಿಕಾರ ಸಿ.ಎಂ ಮುನಿಯಪ್ಪ ಸ್ವಾಭಿಮಾನ, ಸಮಾನತೆಯ ಹೋರಾಟದ ಹಾದಿಗೆ ಪ್ರಜ್ಞಾವಂತರು ಅಭೂತಪೂರ್ವ ಮನ್ನಣೆ ನೀಡಿದ್ದನ್ನು ಸ್ಮರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ನಾಲ್ಕು ದಶಕಗಳ ಚಳವಳಿಯ ಬದುಕು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಾರಿತ್ರಿಕ ಹೋರಾಟದ ಹಾದಿ ದಾಖಲಿಸುತ್ತಲೇ, ಕಗ್ಗತ್ತಲಲ್ಲಿದ್ದ ದಮನಿತ ಲೋಕದ ಒಡಲಾಳದ ಧ್ವನಿಯಾಗಿ ಈ ಕೃತಿಯು ದಲಿತ ಲೋಕದ ಕಥನವಾಗಿ ಮೂಡಿ ಬಂದಿದೆ. ‘ಜುಲೈ 10 ರಂದು ಮುಂಗೋಳಿ ಪ್ರಕಾಶನದ ಮೂಲಕ ಈ ಕೃತಿಯು ಸಾವಿರ ಪ್ರತಿಗಳ ಮೊದಲ ಮುದ್ರಣ ಬಿಡುಗಡೆಯಾಗಿತ್ತು. ಈಗ ಕೃತಿಯ ಎಲ್ಲಾ ಪ್ರತಿಗಳು ಮಾರಾಟವಾಗಿ, ಓದುಗರಿಂದ ಬೇಡಿಕೆ ಬಂದಿದ್ದರಿಂದ ಮತ್ತೆ ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ನಾಲ್ಕು ದಶಕಗಳ ಸಿಎಂ ಮುನಿಯಪ್ಪನವರ ಚಳುವಳಿಯ ಬದುಕು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಚಾರಿತ್ರಿಕ ಹೋರಾಟದ ಹಾದಿಯನ್ನು ದಾಖಲಿಸುತ್ತ ಕಗ್ಗತ್ತನಲ್ಲಿ ಧಮನಿತ ಲೋಕದ ಒಡಲಾಳದ ದ್ವನಿಯಾಗಿ ಕಾಲಡಿಯ ಕಣ್ಣು ಕೃತಿಯು ದಲಿತ ಲೋಕದ ಕಥನವಾಗಿ ಮೂಡಿಬಂದಿತ್ತು.
2026ರ ಜುಲೈ ಹತ್ತರಂದು ಮುಂಗೋಳಿ ಪ್ರಕಾಶನದ ಮೂಲಕ ಈ ಕೃತಿಯು 1000 ಪ್ರತಿಗಳ ಮುದ್ರಣ ಬಿಡುಗಡೆಗೊಂಡ ಕೇವಲ 15 ದಿನಕ್ಕೆ ಕೃತಿಯ ಎಲ್ಲಾ ಪ್ರತಿಗಳು ಮಾರಾಟವಾಗಿ ನಾಡಿನ ಓದುವುದರಿಂದ ವ್ಯಾಪಕವಾಗಿ ಬೇಡಿಕೆ ಬಂದಿದ್ದು ಇದೀಗ ಮತ್ತೆ ಒಂದು ಸಾವಿರ ಪ್ರತಿಗಳನ್ನು ಎಲ್ಲದೇ ಚಳುವಳಿಯ ಹಿರಿಯ ಸಾಹಿತಿಗಳು , ನಾಯಕರು, ಯುವಕರು ಮತ್ತು ವಿದ್ಯಾರ್ಥಿಗಳು , ಕೃತಿಕಾರರೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

