ರಾಜ್ಯದಲ್ಲಿ ಒಂದೇ ದಿನ 8 ಮಂದಿ ಆ*ಹತ್ಯೆಗೆ ಶರಣು

ತುಮಕೂರು : 4 ತಿಂಗಳ ಹಿಂದೆಯಷ್ಟೇ ಮಗುವೆಯಾಗಿದ್ದ ನವ ದಂಪತಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ.  28 ವರ್ಷದ  ಗಿರೀಶ್‌, 20 ವರ್ಷದ ಶರಣ್ಯ ಮೃತಪಟ್ಟವರು. ಮನೆಯಲ್ಲಿ ಯಾರೂ ಇಲ್ಲದಾದ ಶರಣ್ಯ ನೇಣು ಹಾಕಿಕೊಂಡಿದ್ದಾರೆ, ಇದನ್ನು ನೋಡಿದ ಪತಿ ಗಿರೀಶ್‌ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. 

ತಾಯಿ, ಮಗು ಸಾವು
ಬೆಳಗಾವಿ : 
ಗಂಡನ ಕಿರುಕುಳ ತಾಳಲಾರದೆ ತಾಯಿ , ಮಗು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ಪೀರನವಾಡಿಯಲ್ಲಿ ನಡೆದಿದೆ. ಪ್ರೇಮಾ, 3 ವರ್ಷದ ಮಗುವನ್ನು ಕೂಡ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  

ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ
ಬೆಂಗಳೂರು :
  ಪತಿ ಹಾಗೂ ಪತಿಯ ಅಕ್ಕನ ಕಿರುಕುಳಕ್ಕೆ 3 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಚಿಕ್ಕಮಗಳೂರಿನ ಮೂಲದ ಶ್ವೇತಾ ಎಂಬ 25 ವರ್ಷದ ಆತ್ಮಹತ್ಯೆ ಕಾಮಾಕ್ಷಿಪಾಳ್ಯದಲ್ಲಿ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ವಿಷ ಕುಡಿದು ಸಾವು
ನೆಲಮಂಗಲ : 6 ತಿಂಗಳ ಹಿಂದೆ ಮದುವೆಯಾಗಿದ್ದ 30 ವರ್ಷದ ಯುವತಿ ತನುಜಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಬೀರಮ್ಮನಹಳ್ಳಿ ಮೂಲದ ತನುಜಾ ದುರ್ದೈವಿ. ಯಲಹಂಕದ ಮಾಯಸಂದ್ರ ನಿವಾಸಿಯಾದ ರವೀಂದ್ರ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. 

ಅಪ್ರಾಪ್ತ ಬಾಲಕ ಆತ್ಮಹತ್ಯೆ
ಕೋಲಾರ
: ಮನೆಯಲ್ಲಿ ಯಾರು ಇಲ್ಲದಾದ ಅಪ್ರಾಪ್ತ ಬಾಲಕ ನೇಣಿಗೆ ಶರಣಾಗಿದ್ದಾನೆ. ಕೋಲಾರದ ಗಲ್‌ಪೇಟೆಯಲ್ಲಿ ಈ ಘಟನೆ ನಡೆದಿದೆ.

ಪೇದೆ ನೇಣಿಗೆ ಶರಣು
ಕೊಪ್ಪಳ:
ವ್ಯಸನ ಮುಕ್ತ ಕೇಂದ್ರಕ್ಕೆ   ದಾಖಲಾಗಿದ್ದ ಪೊಲೀಸ್ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ಕುಷ್ಟಗಿಯಲ್ಲಿ   ನಡೆದಿದೆ.
ಶರಣಪ್ಪ ಉಪ್ಪಾರ (49) ನೇಣಿಗೆ ಶರಣಾದ ಪೊಲೀಸ್ ಪೇದೆ. ಇವರು ಮುನಿರಾಬಾದ್ ಐಆರ್‌ಬಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯ ವ್ಯಸನಕ್ಕೆ ದಾಸರಾಗಿದ್ದರು ಎಂದು ತಿಳಿದುಬಂದಿದೆ.  

More articles

Latest article

Most read