ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳ ಮೇಲೆ ಬ್ರಹ್ಮಾಸ್ತ್ರ

ಎಲ್ಲಿಯವರೆಗೆ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಖಾಯಂ ಪರ್ಯಾಯಗಳನ್ನು ಸರಕಾರ ಮಾಡಿಕೊಡುವುದಿಲ್ಲವೋ ಅಲ್ಲಿಯವರೆಗೂ ಪುಟ್ಪಾತ್ ವ್ಯವಹಾರ ನಿಲ್ಲುವುದಿಲ್ಲ. ಬಲವಂತ ಮಾಡಿದಾಗ ಒಂದಿಷ್ಟು ದಿನ ನಿಲ್ಲಬಹುದಾದರೂ ಮತ್ತೆ ಆರಂಭವಾಗುತ್ತದೆ. ಈ ಸರಕಾರ ಹೋಗಿ ಇನ್ನೊಂದು ಸರಕಾರ ಬಂದಾಗ ಅವ್ಯಾಹತವಾಗಿ ಮುಂದುವರೆಯುತ್ತದೆ. ಈ ಸಮಸ್ಯೆಗೆ ಈಗಿನ ಸರಕಾರ ಹಾಗೂ ಸಚಿವರು ಪರ್ಮನೆಂಟ್ ಸೊಲ್ಯೂಶನ್ ಕಂಡುಹಿಡಿಯುವುದು ಉತ್ತಮ. ಫುಟ್ಪಾತ್ ಗಳಲ್ಲಿ ಪಾದಾಚಾರಿಗಳು ನಿರಾತಂಕವಾಗಿ ನಡೆಯುವ ಹಕ್ಕಿನ ಜೊತೆಗೆ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುವ ಬಡ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗೂ ಸರಕಾರ ಮಾನ್ಯತೆ ನೀಡಬೇಕಿದೆ. ಸಮಸ್ತ ನಾಗರೀಕರ ಹಿತರಕ್ಷಣೆ ಮಾಡಲೇಬೇಕಿದೆಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಬೈರೇಗೌಡರು ಬೆಂಗಳೂರು ನಗರ ಸಚಿವರಾಗಿದ್ದೇ ತಡ, ಬೆಂಗಳೂರಿನ ಜನನಿಬಿಡ ಮುಖ್ಯ ರಸ್ತೆ ಬದಿಯ ಫುಟ್ಪಾತ್ ಗಳು ಕ್ಲೀನ್ ಆಗ್ತಿವೆ. ಅಲ್ಲಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ಅವರ ಸಾಮಾನು ಸರಂಜಾಮುಗಳ ಸಮೇತ ಎತ್ತಂಗಡಿ ಮಾಡಲಾಗುತ್ತಿದೆ. ಪಾದಚಾರಿಗಳೀಗ ಅಡೆತಡೆ ಇಲ್ಲದೇ ಓಡಾಡಬಹುದಾಗಿದೆ. ಯಾಕೆಂದರೆ ಸುಪ್ರೀಂ ಕೋರ್ಟ್ ಹೇಳಿದೆಯಂತೆ ಪಾದಚಾರಿಗಳಿಗೆ ನಡೆಯುವ ಹಕ್ಕಿದೆ ಎಂದು. ವ್ಯಾಪಾರದ ಹೆಸರಲ್ಲಿ ಫುಟ್ಪಾತ್ ಗಳನ್ನು ಆಕ್ರಮಿಸುವುದು ತಪ್ಪಲ್ಲವೇ? ಫುಟ್ಪಾತಲ್ಲಿ ಓಡಾಡಲು ಜಾಗವಿಲ್ಲದೆ ಪಾದಾಚಾರಿಗಳು ರಸ್ತೆಯಲ್ಲಿ ನಡೆದಾಡುವಾಗ ಆಗುವ ಅಪಘಾತಗಳಿಗೆ, ಸಾವು ನೋವುಗಳಿಗೆ ಹೊಣೆ ಯಾರು? ಫುಟ್ಪಾತ್‌ಗಳು ವ್ಯಾಪಾರಿ ಕೇಂದ್ರಗಳಾದಾಗ ನಗರದ ಸೌಂದರ್ಯ ಹಾಳಾಗುವುದಿಲ್ಲವೇ? ಇಂತಹ ಹಲವಾರು ಪ್ರಶ್ನೆಗಳಿವೆ.

ಯಸ್.. ಹೌದು ಫುಟ್ಪಾತ್ ಗಳಿರೋದೇ ಪಾದಾಚಾರಿಗಳಿಗಾಗಿ. ಅಲ್ಲಿ ನಡೆದಾಡುವುದು ಅವರ ಹಕ್ಕು. ಆದರೆ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಹೇಗೊ ಜೀವನ ನಡೆಸುತ್ತಿದ್ದ ಸಾವಿರಾರು ಜನರ ಬದುಕಿನ ಹಕ್ಕಿನ ಮೇಲಿನ ದಮನವನ್ನು ಕೇಳುವವರು ಯಾರು? ಅವರ ಸಮಸ್ಯೆಗಳನ್ನು ಕೇಳಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದ್ದ ಸರಕಾರವೇ ವ್ಯಾಪಾರಿಗಳ ಹೊಟ್ಟೆ ಮೇಲೆ ಜೆಸಿಬಿ ನುಗ್ಗಿಸಿದರೆ ಹೇಗೆ? ಯಾವುದೇ ಪರ್ಯಾಯ ವ್ಯವಸ್ಥೆಗಳನ್ನೂ ಮಾಡದೇ ಸಾಂಕೇತಿಕವಾಗಿ ನೋಟೀಸ್ ಕೊಟ್ಟು ಬಲವಂತವಾಗಿ ತೆರುವು ಗೊಳಿಸುವುದು ತಪ್ಪಲ್ಪವೇ? ಬಡಜನರಿಗೆ ಬದುಕುವ ಹಕ್ಕಿಲ್ಲವೇ? ಎನ್ನುವಂತಹ ಕೆಲವಾರು ಪ್ರಶ್ನೆಗಳೂ ಇವೆ.

ಬೆಂಗಳೂರು ಎನ್ನುವುದು ವ್ಯಾಪಾರದ ಕೇಂದ್ರವೇ ಆಗಿದೆ. ಹಣ ಇದ್ದವರು, ಅನುಕೂಲ ಪಡೆದವರು ಅಂಗಡಿಗಳನ್ನೋ, ಶೋರೂಂಗಳನ್ನೋ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುತ್ತಾರೆ. ಆದರೆ ಬಂಡವಾಳವೇ ಇಲ್ಲದ ಬಡವರು ಏನು ಮಾಡಬೇಕು? ಉದ್ಯೋಗವೇ ಸಿಗದ ನಿರುದ್ಯೋಗಿಗಳು ಹೇಗೆ ಬದುಕಬೇಕು? ಹೊಟ್ಟೆಪಾಡಿಗಾಗಿ ಮೆಟ್ರೊ ಸಿಟಿಗೆ ಬದುಕು ಹುಡುಕಿಕೊಂಡು ಬಂದ ವಲಸಿಗರು ಎಲ್ಲಿಗೆ ಹೋಗಬೇಕು? ಕಲಿತವರಿಗೆ ವಿದ್ಯೆಗೆ ತಕ್ಕ ನೌಕರಿ ಕೊಡುವ ವ್ಯವಸ್ಥೆಯನ್ನು ಆಳುವ ಸರಕಾರಗಳು ಮಾಡಿದ್ದರೆ, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿ ಕೊಡುವ ಕಾರ್ಯವನ್ನು ಸರಕಾರಗಳು ಮುಂದುವರೆಸಿದ್ದರೆ, ವಲಸೆ ಬರುವವರ ಬವಣೆಗಳನ್ನು ತಿಳಿದು ಅವರವರ ಊರುಗಳಲ್ಲಿ ಜೀವನ ಮಾಡುವ ಅನುಕೂಲತೆಗಳನ್ನು ಕಲ್ಪಿಸಿದ್ದರೆ ಈ ಜನರೇಕೆ ಹೀಗೆ ಮಹಾನಗರಗಳ ಮಹಾಬೀದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದರು? ಸಮಸ್ಯೆ ಇರುವುದು ಬೀದಿ ಬದಿಯ ಬಡ ವ್ಯಾಪಾರಿಗಳಲ್ಲಿ ಅಲ್ಲ, ಸಮಸ್ಯೆ ಇರುವುದು ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ. ಇಲ್ಲಿ ಬಂಡವಾಳ ಇದ್ದವರಿಗೆ ಬದುಕುವ ಅವಕಾಶಗಳನ್ನು ಸರಕಾರಗಳು ದೊರಕಿಸಿ ಕೊಡುತ್ತವೆ. ಏನೂ ಇಲ್ಲದವರು ಹೊಟ್ಟೆಪಾಡಿಗೆ ಬೀದಿಯಲ್ಲಿ ವ್ಯಾಪಾರ ಮಾಡಿದರೆ ತೆರುವುಗೊಳಿಸುತ್ತಾರೆ. ಇದೇ ಬಂಡವಾಳಶಾಹಿ ಪ್ರಣೀತ ಆಳುವ ಸರಕಾರಗಳ ನೀತಿ. ಇದನ್ನು ಯಾರಾದರೂ ಪ್ರಶ್ನಿಸಿದರೆ ಅವರು ದ್ರೋಹಿಗಳಾಗುತ್ತಾರೆ. ಸರಕಾರ ಅಂತವರ ಮೇಲೆ ಕೇಸ್ ಹಾಕಿ ಬಂಧಿಸುತ್ತದೆ.

ಹಾಗಾದರೆ.. ಫುಟ್ಪಾತಲ್ಲಿ ನಡೆಯುವುದು ನಾಗರೀಕರ ಹಕ್ಕಾಗಿದ್ದರೆ, ಹೇಗೋ ವ್ಯಾಪಾರ ಮಾಡಿಕೊಂಡು ಬದುಕುವುದು ಜನರ ಹಕ್ಕಲ್ಲವೇ? ಬೀದಿ ಬದಿ ವ್ಯಾಪಾರಿಗಳು ಹಾಗೂ ಅಲ್ಲಿ ವ್ಯವಹಾರ ಮಾಡುವ ಗ್ರಾಹಕರು ಈ ನಾಡಿನ ನಾಗರೀಕರಲ್ಲವೇ? ಇಂತವರ ಓಟುಗಳನ್ನು ಪಡೆದೇ ಈ ಸರಕಾರಗಳು ಅಸ್ತಿತ್ವಕ್ಕೆ ಬಂದಿಲ್ಲವೇ? ಮತದಾರರ ಆಶೋತ್ತರಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸರಕಾರಗಳು ಮಾಡುತ್ತಿರುವುದು ಜನದ್ರೋಹ ಅಲ್ಲವೇ?‌

ಗ್ರೇಟರ್ ಬೆಂಗಳೂರು ಬ್ಯಾಪ್ತಿಯಲ್ಲಿ ಸರಿಸುಮಾರು ಅರವತ್ತು ಸಾವಿರ ಬೀದಿ ಬದಿಯ ವ್ಯಾಪಾರಿಗಳಿದ್ದಾರೆ. ಅದರಲ್ಲಿ 37 ಸಾವಿರ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇಷ್ಟೂ ಜನರನ್ನು ಮುಖ್ಯರಸ್ತೆ ಹಾಗೂ ಉಪಮುಖ್ಯ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಗೊಳಿಸಿದರೆ ವಾರ್ಡ್ ರಸ್ತೆ ಬದಿಗಳ ಗತಿ ಏನು? ಅಲ್ಲಿಯ ಜನರ ಓಡಾಟಕ್ಕೆ ತೊಂದರೆ ಆಗುವುದಿಲ್ವಾ? ವ್ಯಾಪಾರಿಗಳು ಹಾಗೂ ಗ್ರಾಹಕರ ಜನಸಂದಣಿಯಿಂದಾಗಿ ರಸ್ತೆಗಳ ಗಾತ್ರ ಕಿರಿದಾಗಿ ವಾಹನಗಳ ಅಪಘಾತಗಳು ಹೆಚ್ಚಾಗೋದಿಲ್ವಾ? ಹೋಗಲಿ ಜನರು ಹೆಚ್ಚಾಗಿ ಓಡಾಡದ ರಸ್ತೆಗಳಲ್ಲಿ ವ್ಯಾಪಾರ ಮಾಡಿ ಬೀದಿ ವ್ಯಾಪಾರಸ್ತರು ಬದುಕು ಕಟ್ಟಿಕೊಳ್ಳುವುದಾದರೂ ಹೇಗೆ? ಈ ಕುರಿತು ಗ್ರೇಟರ್ ಬೆಂಗಳೂರು ಅಭಿವೃದ್ದಿ ಸಚಿವರು ಯೋಚನೆ ಮಾಡಬೇಕಿದೆ.

ಸರಕಾರಗಳು ಏನೂ ಇಲ್ಲದವರ ಪರವಾಗಿರಬೇಕು. ಅವರ ಸಮಸ್ಯೆಗಳಿಗೆ ಕಿವಿಯಾಗಬೇಕು. ಬಡವರ ಪರವಾದ ಧ್ವನಿಯಾಗಬೇಕು. ಇಲ್ಲದೇ ಹೋದರೆ ಅಂತಹ ಸರಕಾರಗಳು ಯಾಕಿರಬೇಕು? ಒಂದೇ ಒಂದು ಸಾರಿ ಸಚಿವರಾದ ಕೃಷ್ಣ ಬೈರೇಗೌಡರು ಬೀದಿ ವ್ಯಾಪಾರಿಗಳ ಸಭೆ ಕರೆದು ಅವರ ಸಮಸ್ಯೆಗಳನ್ನು ಕೇಳಬಹುದಾಗಿತ್ತು. ಯಾಕೆ ಅವರು ಫುಟ್ಪಾತ್‌ಗಳಲ್ಲಿ ವ್ಯಾಪಾರ ಮಾಡುತ್ತಾರೆ, ಅವರ ಹಿನ್ನಲೆ ಏನು ಎಂದು ತಿಳಿದುಕೊಳ್ಳಬಹುದಾಗಿತ್ತು. ಪಾದಚಾರಿಗಳಿಗೂ ತೊಂದರೆಯಾಗದಂತೆ, ಬೀದಿ ಬದಿಯ ವ್ಯಾಪಾರಿಗಳ ಬದುಕಿಗೂ ಧಕ್ಕೆಯಾಗದಂತೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕಾಗಿತ್ತು. ಈ ಬಡ ವ್ಯಾಪಾರಿಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಬೇಕಿತ್ತು. ಈ ಯಾವುದನ್ನೂ ಮಾಡದೇ ಬುಲ್ಡೋಜರ್ ಹರಿಸಿ ವ್ಯಾಪಾರಿಗಳನ್ನು ಸಂತ್ರಸ್ತರನ್ನಾಗಿಸುವುದು ಖಂಡಿತ ಅಮಾನವೀಯ ಕೃತ್ಯವಾಗಿದೆ.

20 ಪರ್ಸೆಂಟಿನಷ್ಟು ಮುಖ್ಯ  ರಸ್ತೆಗಳನ್ನು ಬಿಟ್ಟು ಬಾಕಿ 80 ಪರ್ಸೆಂಟ್ ರಸ್ತೆಗಳ ಫುಟ್ಪಾತ್ ಗಳಲ್ಲಿ ವ್ಯಾಪಾರ ಮಾಡಬಹುದು ಎಂಬುದು ಸಚಿವರ ಸಲಹೆಯಾಗಿದೆ. ಹಾಗೆ ಮಾಡಿದರೆ ಅದು ಕೋರ್ಟಿನ ಆದೇಶದ ಉಲ್ಲಂಘನೆ ಆಗುವುದಿಲ್ವಾ? ಆ ರಸ್ತೆಗಳಲ್ಲಿ ನಡೆದಾಡುವ ಪಾದಾಚಾರಿಗಳ ಹಕ್ಕಿಗೆ ಚ್ಯುತಿ ಬರುವುದಿಲ್ವಾ? ಅಲ್ಲಿ ಫುಟ್ಪಾತ್ ಗಳನ್ನು ವ್ಯಾಪಾರಿಗಳು ಆಕ್ರಮಿಸಿದರೆ ಅಪಘಾತಗಳು ಸಂಭವಿಸುವುದಿಲ್ವಾ? ಈ ಪ್ರಶ್ನೆಗಳಿಗೆ ಸಚಿವರು ಉತ್ತರ ಕಂಡುಕೊಳ್ಳಬೇಕಿದೆ. ಒಂದು ರಸ್ತೆಯಿಂದ ಇನ್ನೊಂದು ರಸ್ತೆ ಬದಿಗೆ ವ್ಯಾಪಾರಿಗಳನ್ನು ಸ್ಥಳಾಂತರ ಮಾಡಿದರೆ ಸಮಸ್ಯೆ ಬಗೆಹರಿಯುತ್ತದಾ?

ನಗರದ ಸೌಂದರ್ಯವೂ ಉಳಿಯಬೇಕು, ಪಾದಾಚಾರಿಗಳ ನಡೆದಾಡುವ ಹಕ್ಕೂ ನಿರಾತಂಕವಾಗಬೇಕು. ಹಾಗೂ ಬೀದಿ ವ್ಯಾಪಾರಿಗಳಿಗೆ ಬದುಕುವ ಹಕ್ಕೂ ಇರಬೇಕು. ಇವೆಲ್ಲಕ್ಕೂ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾದರೆ ಕೃಷ್ಣ ಬೈರೇಗೌಡರು ಜನರ ಪರ ಎಂದಾಗುತ್ತದೆ. ಪರ್ಯಾಯ ವ್ಯವಸ್ಥೆ ಮಾಡದೇ ಬೀದಿ ವ್ಯಾಪಾರಿಗಳನ್ನು ಗುಳೆ ಎಬ್ಬಿಸಿದರೆ ಜನವಿರೋಧಿಯಾಗುತ್ತಾರೆ.

ಬುಲ್ಡೋಜರ್ ಹರಿಸಿ ವ್ಯಾಪಾರಿಗಳನ್ನು ಸಂತ್ರಸ್ತರನ್ನಾಗಿಸುತ್ತಿರುವುದು..

ಹಾಗಾದರೆ ಸಚಿವರು ಏನು ಮಾಡಬೇಕು?

* ಮೊದಲು ಸಂತ್ರಸ್ತರಾಗುವ ಫುಟ್ಪಾತ್ ವ್ಯಾಪಾರಿಗಳ ಸಭೆ ಕರೆದು ಅವರ ಸಮಸ್ಯೆಗಳನ್ನು ಆಲಿಸಬೇಕು.

* ಆ ವ್ಯಾಪಾರಿಗಳಿಗೆಲ್ಲ ವ್ಯವಹಾರ ಮಾಡಲು ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚರ್ಚಿಸಬೇಕು.

* ಪ್ರತಿಯೊಬ್ಬ ಬೀದಿ ವ್ಯಾಪಾರಿಗಳಿಗೂ ಗುರುತಿನ ಚೀಟಿಯನ್ನು ಹಂಚಬೇಕು.

* ಮಹಾನಗರ ಪಾಲಿಕೆಯ ಮೂಲಕ ಪ್ರತಿ ಬಡಾವಣೆಗಳ ಸಾರ್ವಜನಿಕ ಮೈದಾನಗಳಲ್ಲಿ ವಾರದ ಸಂತೆಗಳನ್ನು ಏರ್ಪಡಿಸಬೇಕು.

* ಒಂದೊಂದು ದಿನ ಒಂದೊಂದು ವಾರ್ಡ್ / ಬಡಾವಣೆಗಳಲ್ಲಿ ಸಂತೆ ಏರ್ಪಡಿಸಿ ಈ ವ್ಯಾಪಾರಸ್ಥರಿಗೆ ನಿರಂತರವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು.

* ಪ್ರತಿ ವಾರ್ಡ್ ಗಳಲ್ಲಿ ಸೂಕ್ತ ಜಾಗಗಳನ್ನು ಗುರುತಿಸಿ ಮಾರುಕಟ್ಟೆಗಳನ್ನು ಕಟ್ಟಿಸಿ ಬೀದಿ ವ್ಯಾಪಾರಿಗಳಿಂದ ಬಾಡಿಗೆ ಪಡೆದು ಹಂಚಿಕೆ ಮಾಡಬೇಕು.

ಇದೆಲ್ಲವನ್ನು ಮಾಡಿದ ನಂತರವೇ ಎಲ್ಲಾ ಬೀದಿ ಬದಿಯ ವ್ಯಾಪಾರಿಗಳನ್ನು ರಸ್ತೆಗಳ ಬದಿಯ ಫುಟ್ಪಾತ್ ಗಳಿಂದ ತೆರುವುಗೊಳಿಸಬೇಕು.

ಹೀಗೆ, ಅಗತ್ಯ ಪರ್ಯಾಯ ವ್ಯವಸ್ಥೆಗಳನ್ನು ಮಾಡದೆ ಬಲವಂತವಾಗಿ ತೆರವು ಗೊಳಿಸಿದರೆ ಅವರು ಮತ್ತೆ ಯಾವುದೋ ರೂಪದಲ್ಲಿ ವ್ಯಾಪಾರ ಆರಂಭಿಸುತ್ತಾರೆ. ಯಾಕೆಂದರೆ ಬೀದಿ ವ್ಯಾಪಾರಿಗಳ ಬದುಕೇ ವ್ಯವಹಾರವಾಗಿದೆ. ಎಲ್ಲಾ ರಸ್ತೆಗಳಲ್ಲೂ ಎಲ್ಲಾ ಕಾಲಕ್ಕೂ ಕಣ್ಗಾವಲಿಡಲು ಸಾಧ್ಯವಿಲ್ಲ. ಕಣ್ಗಾವಲಿಗೆ ಪೊಲೀಸರನ್ನಿಟ್ಟರೆ ಅವರೂ ಹಫ್ತಾ ವಸೂಲಿ ಮಾಡಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತಾರೆ‌.  ಬೀದಿ ಬದಿಯ ವ್ಯಾಪಾರಿಗಳನ್ನು, ಫುಟ್ಪಾತ್ ಆಕ್ರಮಣಕೋರರನ್ನು ತೆರುವುಗೊಳಿಸುವ ಕಾರ್ಯ ಇದೇ ಮೊದಲನೆಯದ್ದೇನಲ್ಲ. ಈ ಹಿಂದೆಯೂ ಮಾಡಲಾಗಿದೆ. ಆದರೆ ವ್ಯಾಪಾರ ಏನೂ ನಿಂತಿಲ್ಲ,  ಬೀದಿ ಬದಿಯ ವ್ಯಾಪಾರಕ್ಕೆ ಖಾಯಂ ಕಡಿವಾಣ ಬಿದ್ದಿಲ್ಲ.

ಎಲ್ಲಿವರೆಗೂ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಖಾಯಂ ಪರ್ಯಾಯಗಳನ್ನು ಸರಕಾರ ಮಾಡಿಕೊಡುವುದಿಲ್ಲವೋ ಅಲ್ಲಿವರೆಗೂ ಪುಟ್ಪಾತ್ ವ್ಯವಹಾರ ನಿಲ್ಲುವುದಿಲ್ಲ. ಬಲವಂತ ಮಾಡಿದಾಗ ಒಂದಿಷ್ಟು ದಿನ ನಿಲ್ಲಬಹುದಾದರೂ ಮತ್ತೆ ಆರಂಭವಾಗುತ್ತದೆ. ಈ ಸರಕಾರ ಹೋಗಿ ಇನ್ನೊಂದು ಸರಕಾರ ಬಂದಾಗ ಅವ್ಯಾಹತವಾಗಿ ಮುಂದುವರೆಯುತ್ತದೆ. ಈ ಸಮಸ್ಯೆಗೆ ಈಗಿನ ಸರಕಾರ ಹಾಗೂ ಸಚಿವರು ಪರ್ಮನೆಂಟ್ ಸೊಲ್ಯೂಶನ್ ಕಂಡುಹಿಡಿಯುವುದು ಉತ್ತಮ. ಜನಪರ ಎಂದು ಸಾಬೀತು ಪಡಿಸಲು ಒಳ್ಳೆಯ ಅವಕಾಶ. ಫುಟ್ಪಾತ್ ಗಳಲ್ಲಿ ಪಾದಾಚಾರಿಗಳು ನಿರಾತಂಕವಾಗಿ ನಡೆಯುವ ಹಕ್ಕಿನ ಜೊತೆಗೆ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುವ ಬಡ ವ್ಯಾಪಾರಿಗಳ ಜೀವನೋಪಾಯದ ಹಕ್ಕಿಗೂ ಸರಕಾರ ಮಾನ್ಯತೆ ನೀಡಬೇಕಿದೆ. ಸಮಸ್ತ ನಾಗರೀಕರ ಹಿತರಕ್ಷಣೆ ಮಾಡಲೇಬೇಕಿದೆ.

ಶಶಿಕಾಂತ ಯಡಹಳ್ಳಿ

ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ  ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.

ಇದನ್ನೂ ಓದಿ- ನಾಡಪ್ರಭು ಕೆಂಪೇಗೌಡರ ಬದುಕಿನ ಶಕ್ತಿ ʼಮಹಾರಾಣಿ ಚೆನ್ನಮ್ಮʼ

More articles

Latest article

Most read