ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಫಾರ್ಮಾಸ್ಯುಟಿಕಲ್ ಸೈನ್ಸಸ್ ಮತ್ತು ರಿಸರ್ಚ್ ಯೂನಿವರ್ಸಿಟಿಯ (ಡಿಪಿಎಸ್ಆರ್‌ಯು) ಕುಲಪತಿಯನ್ನು ವಜಾಗೊಳಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅನುಮೋದನೆ ನೀಡಿದ್ದಾರೆ.
2017 ರಿಂದ 2019 ರವರೆಗಿನ ಬೋಧನಾ ವಿಭಾಗದ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕುಲಪತಿ ರಮೇಶ್ ಗೋಯಲ್ ಅವರನ್ನು ಗಂಭೀರ ಅವ್ಯವಹಾರದ ಕಾರಣದಿಂದ ಸೇವೆಯಿಂದ ತೆಗೆದುಹಾಕಲಾಗಿದೆ.
ತನಿಖೆಯಲ್ಲಿ ಬಹಿರಂಗವಾಗಿರುವ ಪ್ರಕಾರ , ಆದ್ಯತೆಯ ಅಭ್ಯರ್ಥಿಗಳಿಗೆ ಸಂದರ್ಶನದ ಅಂಕಗಳನ್ನು ತಿದ್ದುವುದು, ನಕಲಿ ಪ್ರಮಾಣಪತ್ರಗಳನ್ನು ಬಳಸುವುದು, ನಿರ್ದಿಷ್ಟ ಅರ್ಜಿದಾರರಿಗೆ ಸರಿಹೊಂದುವಂತೆ ಕಟ್-ಆಫ್ ಅಂಕವನ್ನು ನಿಗದಿಪಡಿಸುವುದು, ದಿನಾಂಕಗಳನ್ನು ವಿಸ್ತರಿಸುವುದು, ವಯಸ್ಸಿನ ಮಿತಿಗಳನ್ನು ಬದಲಾಯಿಸುವುದು, ಕಡಿತವನ್ನು ನಿರ್ಲಕ್ಷಿಸುವುದು ಮತ್ತು ಮೀಸಲಾತಿ ರೋಸ್ಟರ್ ಅನ್ನು ಕಡೆಗಣಿಸುವುದು ಸೇರಿದಂತೆ ಅಸಂಖ್ಯಾತ ಅವ್ಯವಹಾರಗಳು ಕಂಡು ಬಂದಿವೆ.
ಅವ್ಯವಹಾರಗಳ ಪತ್ತೆಯ ಬಳಿಕವೂ, ಕುಲಪತಿಗಳು “ಆಧಾರರಹಿತ ಎಂದು ವಾದಿಸುತ್ತಾ, ದಾರಿ ತಪ್ಪಿಸುವ ಪ್ರತಿಕ್ರಿಯಲ್ಲಿ ನಿರತರಾಗಿದ್ದಾರೆ . ಈ ಅಕ್ರಮಗಳ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ.