Thursday, May 23, 2024

ಬಾಂಬೆ ಬಾಯ್ಸ್, ದಿಲ್ಲಿ ಫ್ರೆಂಡ್ಸ್ ಯಾರು ಬೇಕಾದ್ರೂ ಕಾಂಗ್ರೆಸ್ ಗೆ ಬನ್ನಿ : ಓಪನ್ ಆಫರ್ ಕೊಟ್ರು ಪ್ರಿಯಾಂಕ್ ಖರ್ಗೆ

Most read

ಬಾಂಬೆ ಬಾಯ್ಸ್, ದಿಲ್ಲಿ ಫ್ರೆಂಡ್ಸ್ ಯಾರು ಬೇಕಾದ್ರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಬರುವವರಿಗೆ ಓಪನ್ ಆಫರ್ ನೀಡ್ತಾ ಇದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಆಹ್ವಾನ ನೀಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಎಸ್ ಟಿ ಸೋಮಶೇಖರ್ ಸೇರಿದಂತೆ ವಲಸಿಗರ ಘರ್ ವಾಪ್ಸಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ,‌ ಪಕ್ಷದ ತತ್ವ ಸಿದ್ದಾಂತ ಒಪ್ಪಿಕೊಂಡು ಯಾರು ಬೇಕಾದರೂ ಬರಲಿ.‌ ತಾವೂ ಬನ್ನಿ, ಬಾಂಬೆ ಬಾಯ್ಸ್ ಮಾತ್ರವಲ್ಲ, ದೆಹಲಿ ಫ್ರೆಂಡ್ಸ್.. ಬೆಂಗಳೂರು ಫ್ರೆಂಡ್ಸ್ ಎಲ್ಲಾ ಬರಲಿ ಎಂದರು.

ದೇವಸ್ಥಾನ ಹುಂಡಿ ಹಣದಲ್ಲಿ 10% ಸರ್ಕಾರಕ್ಕೆ ಕೊಡಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ,‌ ಯಾವುದೇ ಕಾಯ್ದೆ ಇದ್ದರೂ ವಿಧಾನಸಭೆಯಲ್ಲಿ ತೀರ್ಮಾನ ಆಗುತ್ತೆ. ನಿನ್ನೆ ಏಕೆ ವಿರೋಧ ಮಾಡಲಿಲ್ಲ. ಆಗ ಕಡ್ಲೆ ಪುರಿ ತಿನ್ನುತ್ತಿದ್ರಾ?. ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಅನುದಾನ ಕೊಡುತ್ತಿದ್ದೇವೆ. ನಾನು ಸಮಾಜ‌ ಕಲ್ಯಾಣ ಸಚಿವನಾಗಿದ್ದಾಗ ರಾಮಾಯಣ ಮ್ಯೂಸಿಯಂ ಮಾಡಲು ಭೂಮಿ ಕೊಟ್ಟಿದ್ದೆ. ಬಿಜೆಪಿಯವರು ಯಾಕೆ ಕೊಡಲಿಲ್ಲ ಎಂದು ಕಿಡಿಕಾರಿದ್ದಾರೆ.

More articles

Latest article