ಕೋಲಾರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ

ಕೋಲಾರ : ಇಲ್ಲಿನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಿಗೆ ಇ-ಮೈಲ್ ಮುಖಾಂತರ ಬಾಂಬ್‌ ಬೆದರಿಕೆಯ ಇ-ಮೇಲ್ ಸಂದೇಶವೊಂದು ಬಂದಿದ್ದು ಬಾಂಬ್ ನಿಷ್ಕ್ರಿಯ ದಳ ಇಡೀ ನ್ಯಾಯಾಲಯದ ಶೋಧ ಕಾರ್ಯ ನಡೆಯುತ್ತಿದೆ.

ಬೆಳಗ್ಗೆ ಕಾರ್ಯಕಲಾಪಗಳು ಪ್ರಾರಂಭವಾಗುತ್ತಿದ್ದಂತೆ ಬೆದರಿಕೆಯ ಸಂದೇಶದ ಸುದ್ದಿ ಇಡೀ ನ್ಯಾಯಾಲಯವನ್ನು ಬಿಚ್ಚಿ ಬೀಳಿಸಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ತಕ್ಷಣವೇ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಸಾರ್ವಜನಿಕರನ್ನು ಹಾಗೂ ವಕೀಲರನ್ನು ಹೊರಗಡೆ ಕಳುಹಿಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ನಿಷ್ಕ್ರಿಯ ದಳವು ಕೋರ್ಟ್ ಸಭಾಂಗಣ, ಕಚೇರಿ, ಕೊಠಡಿಗಳು ಸೇರಿದಂತೆ ಸಂಪೂರ್ಣ ಕೋರ್ಟ್ ಕಟ್ಟಡ ಸಂಪೂರ್ಣವಾಗಿ ಸುತ್ತುವರಿದಿದ್ದು ಇಂದಿನ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಗುಲ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಿದ್ದಾರೆ

More articles

Latest article

Most read